ತಲ್ಲೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಡಾ.ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಾ.ಮೇರಾಜ ಶೀಲವಂತರ, ವೀರೇಶ ದೇಮಶೆಟ್ಟಿ, ಪಿಡಿಒ ರಾವೇಂದ್ರಕುಮಾರ ಎಸ್.ಪಿ., ಭೀಮವ್ವ ಭಜಂತ್ರಿ, ಬಸವ್ವ ಕಂಬಾರ, ಶಾಂತವ್ವ ಜಡೆರ ಇತರರಿದ್ದರು.
ತಲ್ಲೂರ: ಆರೋಗ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದರಿಂದ ಇನ್ನೊಬ್ಬರಿಗೆ ಜೀವದಾನ ಮಾಡಿದಂತಾಗುತ್ತದೆ ಎಂದು ಬೆಳಗಾವಿ ಬಿಮ್ಸ್ ರಕ್ತಭಂಡಾರ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಹೇಳಿದರು.
ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಸಭಾ ಭವನದಲ್ಲಿ ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸವದತ್ತಿ ತಾಪಂ, ಗ್ರಾಪಂ ಹಾಗೂ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಹೆರಿಗೆ ಮತ್ತು ಅಪಘಾತದಂತ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕ ಇರುವುದರಿಂದ ಯುವಕರು ಮುಂದೆ ಬರಬೇಕು ಎಂದರು.
ವೈದ್ಯಾಧಿಕಾರಿ ಡಾ.ಮೇರಾಜ ಶೀಲವಂತರ, ಶ್ರೂಷಾಧಿಕಾರಿ ವೀರೇಶ ದೇಮಶೆಟ್ಟಿ, ಪಿಡಿಒ ರಾವೇಂದ್ರಕುಮಾರ ಎಸ್.ಪಿ., ಡಾ.ಅರುಣಕುಮಾರ ಪಾಟೀಲ, ಾರ್ಮಸಿ ಅಧಿಕಾರಿ ಆರತಿ ಹೊಳ್ಳಿಕೇರಿ, ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ಎಸ್.ಎಸ್.ಉಪ್ಪಿನ, ಯಲ್ಲಪ್ಪ ಹಲಗಲಿ, ಭೀಮವ್ವ ಭಜಂತ್ರಿ, ಬಸವ್ವ ಕಂಬಾರ, ಶಾಂತವ್ವ ಜಡೆರ, ನೀಲವ್ವ ಬೆನಕಟ್ಟಿ, ರಾಜೇಶ್ವರಿ ನಾಯ್ಕರ, ಮಹಾವೀರ ಜೊಡಟ್ಟಿ, ಶಂಕರ ಲಮಾಣಿ ಇತರರಿದ್ದರು.