ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದ ಪ್ರಭು ಪಸಂದ ಭವನದಲ್ಲಿ ರಾಜಯೋಗಿನಿ ದಾದಿ ಪ್ರಕಾಶ ಮಾಣಿ ಅವರ 19ನೇ ಪುಣ್ಯಸ್ಮೃತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ನೀಡಲಾಯಿತು. ರಾಜಯೋಗಿನಿ ಬಿಕೆ ಸರಸ್ವತಿ, ಎಂಎಲ್ಸಿ ಎಂ.ಜಿ.ಮುಳೆ, ಶಿವಾನಂದ ಮೇತ್ರೆ, ನರಸಿಂಗರಡ್ಡಿ, ಭರತ್ ಎಸ್.ಬಿ., ಬಿಕೆ ಬೀರಪ್ಪ ಗುಂಜೆಟ್ಟೆ, ಅನಿಲ ಕಾಂಬಳೆ ಇದ್ದರು
- ಎಂಎಲ್ಸಿ ಎಂ.ಜಿ.ಮುಳೆ ಅನಿಸಿಕೆ
- ಪ್ರಭು ಪಸಂದ ಭವನದಲ್ಲಿ ಶಿಬಿರ ರಕ್ತದಾನ ಜೀವ ಉಳಿಸಲು ಸಹಕಾರಿ
ಬಸವಕಲ್ಯಾಣ: ರಕ್ತದಾನ ಶ್ರೇಷ್ಠವಾಗಿದ್ದು, ರಕ್ತದ ಕೊರತೆಯಿಂದ ಸಂಕಷ್ಟದಲ್ಲಿ ಇರುವರ ಜೀವ ಉಳಿಸಲು ಸಹಾಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಜಿ.ಮುಳೆ ಹೇಳಿದರು.
ನಗರದ ಖಾನಾಪುರ ರಸ್ತೆ ಬದಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದ ಪ್ರಭು ಪಸಂದ ಭವನದಲ್ಲಿ ರಾಜಯೋಗಿನಿ ದಾದಿ ಪ್ರಕಾಶ ಮಾಣಿ ಅವರ 19ನೇ ಪುಣ್ಯಸ್ಮೃತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ ಯುವಕರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ರಾಜಯೋಗಿನಿ ಬಿಕೆ ಸರಸ್ವತಿ ಮಾತನಾಡಿ, ರಾಜಯೋಗಿನಿ ದಾದಿ ಪ್ರಕಾಶಮಣಿಜಿ ಅವರ 19ನೇ ಪುಣ್ಯಸ್ಮೃತಿ ದಿನವನ್ನು ವಿಶ್ವದಾದ್ಯಂತ ವಿಶ್ವ ಬಂಧುತ್ವ ದಿನವನ್ನಾಗಿ ಆಚರಿಸಲಾಗುತ್ತಿದ್ದು, ವಿಶ್ವದಲ್ಲಿಯ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಎಲ್ಲ ಕೇಂದ್ರಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ಉಪನ್ಯಾಸಕ ನರಸಿಂಗರಡ್ಡಿ ಗದಲೇಗಾಂವ ಮಾತನಾಡಿದರು. ಬಿಕೆ ಬೀರಪ್ಪ ಗುಂಜಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಬೀದರ್ ಅಪೆಕ್ಸ್ ಆಸ್ಪತ್ರೆಯ ಬ್ಲಡ್ ಸೆಂಟರ್ನ ನಿರ್ದೇಶಕ ಭರತ ಎಸ್.ಬಿ., ಪ್ರಮುಖರಾದ ಮಾಧವರಾವ ಪಾಟೀಲ, ಅನಿಲ ಕಾಂಬಳೆ, ರವೀಂದ್ರ, ಬಿಕೆ ರೇಣುಕಾ ಇದ್ದರು.