ಸುರಪುರ ಗರುಡಾದ್ರಿ ಕಲಾಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡ ರಕ್ತದಾನ ಶಿಬಿರವನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದರು. ರಾಜಾ ಮುಕುಂದ ನಾಯಕ, ಜಿಪಂ ಮಾಜಿ ಅಧ್ಯ ರಾಜಶೇಖರಗೌಡ ವಜ್ಜಲ್ ಮಲ್ಲಣ್ಣ ಸಾಹುಕಾರ ಮುಧೋಳ ಇತರರಿದ್ದರು.
- ಶಾಸಕ ಆರ್ವಿ ನಾಯಕ ಹೇಳಿಕೆ
- ಸುರಪುರ ಗರುಡಾದ್ರಿ ಕಲಾಮಂದಿರದಲ್ಲಿ ಶಿಬಿರ
ಸುರಪುರ: ರಕ್ತದಾನ ಮೊತ್ತೊಬ್ಬರ ಜೀವ ಉಳಿಸುವ ಮಹತ್ವದ ಸೇವೆಯಾಗಿದ್ದು, ರಕ್ತದಾನದಿಂದ ದೇಹಕ್ಕೆ ಯಾವುದೇ ಹಾನಿಯಿಲ್ಲ, ಬದಲಾಗಿ ಆರೋಗ್ಯಕರ ಜೀವನ ಶೈಲಿಗೆ ಸಹಕಾರಿಯಾಗುತ್ತದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ನಲ್ಲಿ ಶುಕ್ರವಾರ ಅದಾನಿ ಸಿಮೆಂಟ್ ಮತ್ತು ಪೂರ್ಣಿಮಾ ಟ್ರೇರ್ಸ್ ಮುಧೋಳ ಅವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಆರೋಗ್ಯವಂತ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಪಘಾತ, ತುರ್ತು ಚಿಕಿತ್ಸೆ, ವಿವಿಧ ಚಿಕಿತ್ಸೆಗಳು ಮತ್ತು ಮನುಷ್ಯನಿಗೆ ಅನಾರೋಗ್ಯ ಉಂಟಾದಾಗ ರಕ್ತದ ಅವಶ್ಯಕತೆ ಇರುತ್ತದೆ. ಅದನ್ನು ಯಾವುದೇ ಕಾರ್ಖಾನೆಯಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ ಶಿಬಿರಗಳ ಮೂಲಕ ಲಭ್ಯವಾಗುವ ರಕ್ತವೇ ಜೀವ ಉಳಿಸಲು ಏಕೈಕ ದಾರಿ. ಇಂತಹ ಜನೋಪಕಾರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಸಿಮಿಂಟ್ ಗ್ರೂಪ್ ಕಾರ್ಯ ಶ್ಲಾನೀಯ ಎಂದರು.
ಮುಖ್ಯ ಅತಿಥಿಯಾಗಿದ್ದ ಎಸಿಸಿ ಕಂಪನಿಯ ಕಲ್ಯಾಣ ಕರ್ನಾಟಕದ ವ್ಯವಸ್ಥಾಪಕ ಹರೀಶ್ ಜಕ್ಕಪ್ಪನವರ್ ಮಾತನಾಡಿ, ಸಮಾಜದ ಒಳಿತಿಗಾಗಿ ಮತ್ತು ರಕ್ತದ ಅವಶ್ಯಕತೆಯನ್ನು ನೀಗಿಸುವ ನಿಟ್ಟಿನಲ್ಲಿ ಅದಾನಿ ಸಿಮೆಂಟ್ ಸಮೂಹವು ದೇಶಾದ್ಯಂತ ಒಂದು ತಿಂಗಳ ಕಾಲ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಅಭಿಯಾನವು ಪ್ರತಿಯೊಂದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ವಿಸ್ತರಣೆಯಾಗಲಿದೆ. ಈ ವರ್ಷ ಭಾರತದಾದ್ಯಂತ ಕನಿಷ್ಠ ಒಂದು ಲ ಯೂನಿಟ್ ರಕ್ತವನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಸಿಮೆಂಟ್ ಉದ್ದಿಮೆಗೂ ರಕ್ತದಾನಕ್ಕೂ ನೇರ ಸಂಬಂಧವಿಲ್ಲದಿದ್ದರೂ ಜೀವಪರ ಕಾಳಜಿಯಿಂದ ಇದು ಮಾಡುತ್ತಿದ್ದೇವೆ ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಎಪಿಎಂಸಿ ಮಾಜಿ ಅಧ್ಯ ರಾಜಾ ಮುಕುಂದ ನಾಯಕ ಮಾತನಾಡಿದರು. ಜಿಪಂ ಮಾಜಿ ಅಧ್ಯ ರಾಜಶೇಖರ ಪಾಟೀಲ್ ವಜ್ಜಲ್, ಪ್ರಮುಖರಾದ ಮಲ್ಲಣ್ಣ ಸಾಹುಕಾರ ಮುಧೋಳ, ವೆಂಕೋಬ ಮಂಗಳೂರು, ವೈದ್ಯಾಧಿಕಾರಿ ಡಾ.ಹರ್ಷವರ್ಧನ ರಫಗಾರ್, ಲಯನ್ಸ್ ಕ್ಲಬ್ ಅಧ್ಯ ಪಂಕಜ್ ಕುಮಾರ ಜೋಷಿ, ಎಸಿಸಿ ಸಿಮೆಂಟ್ ಕಂಪನಿಯ ಆರ್ಟಿಎಸ್ಎಂ ಸೋಮಶೇಖರ ಪಾಟೀಲ್, ಸುರಪುರ ಎಂಜನಿಯರ್ ಸಂದ ಅಧ್ಯ ಬಸವರಾಜ ಬೂದಿಹಾಳ, ಎಸಿಸಿ ಸೇಲ್ಸ್ ಮ್ಯಾನೇಜರ್ ಸತೀಶರಡ್ಡಿ, ಟೆಕ್ನಿಕಲ್ ಆಫೀಸರ್ ಅಶೋಕ ಸೇರಿ ಇತರರಿದ್ದರು. ಶಿಬಿರದಲ್ಲಿ 25 ದಾನಿಗಳಿಂದ ರಕ್ತದಾನ ನಡೆಯತು. ಸಿದ್ದಣ್ಣ ಸಾಹುಕಾರ ಮುಧೋಳ ಸ್ವಾಗತಿಸಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿ ವಂದಿಸಿದರು.