ಯಾದಗಿರಿ ಸಮೀಪದ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದಲ್ಲಿ ಬುಧವಾರ ಗುರುಪೂರ್ಣಮೆ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪೀಠಾಽಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಮಾತನಾಡಿದರು. ಶಿವಶೇಖರ ವಿಶ್ಯಾರಾಧ್ಯ ಶ್ರೀ ಇತರರಿದ್ದರು. 
ರಾಜ್ಯ

ಗುರು ಕರುಣೆಯಿಂದ ಜೀವನ ಪಾವನ

ಪ್ರಮುಖ ಮುಖ್ಯಾಂಶಗಳು

  • ಡಾ.ಗಂಗಾಧರ ಸ್ವಾಮೀಜಿ ಹೇಳಿ
  • ಜಿಲ್ಲಾದ್ಯಂತೆ ಸಂಭ್ರಮದ ಗುರುಪೂರ್ಣಿಮೆ
  • ಶ್ರೀಗಳ ಆಶೀರ್ವಾದ ಪಡೆದ ಭಕ್ತಗಣ
ಯಾದಗಿರಿ : ಹರ ಮುನಿದರೂ ಗುರು ಕಾಯುವನು ಎಂಬ ಮಾತಿನಂತೆ ಪ್ರತಿಯೊಬ್ಬರಿಗೂ ಗುರುವಿನ ಕರುಣೆ ಇರಬೇಕು. ಈ ನಿಟ್ಟಿನಲ್ಲಿ ಧಾರ್ಮಿಕ ಮನೋಭಾವದಿಂದ ಗುರುಗಳನ್ನು ಪೂಜಿಸಬೇಕು ಎಂದು ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಽಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ನುಡಿದರು.
ಬುಧವಾರ ಮಠದ ಆವರಣದಲ್ಲಿ ಗುರುಪೂರ್ಣಿಣೆ ನಿಮಿತ್ತ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜನ್ಮ ನೀಡಿದವರು ತಾಯಿ, ತಂದೆಯವರಾಗಿದ್ದರೇ ಸಂಸ್ಕಾರ, ವಿದ್ಯೆ, ಬುದ್ದಿ ಕಲಿಸುವವರು ಗುರುಗಳು. ಕಾರಣ ನಾವೂ ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳದರೂ, ಅದೇಷ್ಟು ಸಂಪತ್ತು ಗಳಿಸಿದರೂ ಗುರು ಕರುಣೆ ಪಡೆಯಲೇಬೇಕು. ಅಂದಾಗ ಜೀವನಕ್ಕೆ ಒಂದು ಮುಕ್ತಿ ಸಿಗಲು ಸಾಧ್ಯ ಎಂದರು.
ಗುರುವಿನ ಅರ್ಥ ಕತ್ತಲೆಯಿಂದ ಬೆಳಕನಡೆಗೆ ಕರೆದುಕೊಂಡು ಹೋಗುವುದಾಗಿದೆ. ಹೆತ್ತವರಿಂದ ಈ ಜಗತ್ತು ನೋಡುವ ಪ್ರತಿಯೊಬ್ಬರಿಗೂ ಗುರುವಿನ ಕರುಣೆ, ಪ್ರೀತಿ, ವಿಶ್ವಾಸ ಸಿಗಲೇಬೇಕು. ಇದಕ್ಕೆ ಮಠ, ಮಂದಿರಗಳಲ್ಲಿನ ದೇವರು, ಗುರುಗಳನ್ನು ಪೂಜಿಸಬೇಕು ಎಂದರು.
ಮಠದ ಕಿರಿಯ ಶ್ರೀಗಳಾದ ಶಿವಶೇಖರ ವಿಶ್ವಾರಾಧ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು. ಬೆಳಗ್ಗೆ ವಿಶ್ವಾರಾಧ್ಯರ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ನಡೆಯಿತು. ನಂತರ ವಿವಿಧ ಊರುಗಳ ಭಕ್ತರಿಂದ ಶ್ರೀಗಳ ಪಾದಪೂಜೆ ಮತ್ತು ತುಲಾಭಾರ ನಡೆಯಿತು. ಪ್ರಕಾಶ ಸೇಡಂ ಅವರು ಗುರುಗಳಿಗೆ ಹೂವಿನ ಅಭಿಷೇಕ ಮಾಡಿದರು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಚನ್ನಪ್ಪಗೌಡ ಮೊಸಂಬಿ, ಡಾ.ಸುಭಾಷಚಂದ್ರ ಕೌಲಗಿ, ವಿಶ್ವನಾಥ ಸಿರವಾರ, ಯುವ ಉದ್ಯಮಿ ಶಿವರೆಡ್ಡಿ ಪಾಲಪ್, ಮಲ್ಲಿಕಾರ್ಜುನ ರೆಡ್ಡಿ ಇಜಾರ, ಗುರುಸ್ವಾಮಿ, ಶಿವಕುಮಾರ ಚಿತ್ತಾಪುರ ಇತರರಿದ್ದರು. ಬಸವರಾಜ ಶಾಸಿö ಶಹಾಪುರ ನಿರೂಪಿಸಿದರು.