ಯಾದಗಿರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲಾಯಿತು. ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್, ರಾಚಣ್ಣಗೌಡ ಮುದ್ನಾಳ್, ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ದೇವೇಂದ್ರನಾಥ ನಾದ್, ಪರಶುರಾಮ ಕುರಕುಂದಾ ಇತರರಿದ್ದರು.
- ಮಾಜಿ ಸಚಿವ ರಾಜುಗೌಡ ಹೇಳಿಕೆ
- ಶಹಾಪುರದಲ್ಲಿ ಸಂಸ್ಥಾಪನಾ ದಿನ ಆಚರಣೆ
ಶಹಾಪುರ: ರಾಷ್ಟ್ರ ನಿರ್ಮಾಣದಲ್ಲಿ ಬಿಜೆಪಿ ಪಾತ್ರ ಮಹತ್ವದ್ದಾಗಿದ್ದು, ಅಲ್ಲದೆ ದೇಶ ಕಟ್ಟುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪದ 46ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಹಲವು ಜಾತಿಗಳಿದ್ದರೂ ನಾವೇಲ್ಲರೂ ಹಿಂದೂಗಳೆಂಬ ಭಾವನೆಯಿಂದ ರಾಷ್ಟ್ರ ಮೊದಲು ಎಂಬ ಗುರಿಯೊಂದಿಗೆ ಪಕ್ಷ ಕೆಲಸ ಮಾಡುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಜಗತ್ತಿನ ಪ್ರಗತಿಪರ ರಾಷ್ಟ್ರಗಳಲ್ಲಿ ಮುನ್ನಡೆಯುತ್ತಿದೆ. ದೇಶದಲ್ಲಿ ಹಿಂದೂಗಳನ್ನು ಕಡೆಗಣಿಸುವ ಪಗಳನ್ನು ತೊಡೆದು ಹಾಕಿ, ದೇಶ ಒಡೆಯುವ ಶಕ್ತಿಗಳನ್ನು ಹಿಮೆಟ್ಟಿಸಿ ಬೆಳೆದ ಪ ನಮ್ಮದು. ನಾವೆಲ್ಲರೂ ಪದ ತತ್ವ, ಸಿದ್ಧಾಂತದ ತಳಹದಿ ಮೇಲೆ ಕೆಲಸ ಮಾಡೋಣ ಎಂದರು.
ಸಂಸ್ಥಾಪನ ದಿನ ಕುರಿತು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಮಾಜಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಮಾತನಾಡಿದರು. ಈ ವೇಳೆ ನಗರ ಮಂಡಲ ಅಧ್ಯ ಚಂದ್ರಶೇಖರ ಯಾಳಗಿ, ಗ್ರಾಮೀಣ ಮಂಡಲ ಅಧ್ಯ ತಿರುಪತಿ ಹತ್ತಿಕಟಿಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಗೂಗಲ್, ರಾಜ್ಯ ಓಬಿಸಿ ಮೋರ್ಚಾ ಕಾರ್ಯದರ್ಶಿ ಶರಣಗೌಡ ಐಕೂರ, ಓಬಿಸಿ ಮೋರ್ಚಾ ಜಿಲ್ಲಾಧ್ಯ ಮಲ್ಲಿಕಾರ್ಜುನ ಕಂದಕೂರ, ಮುಖಂಡರಾದ ರಾವೇಂದ್ರ ಯಂತಿ, ವೇಣುಗೊಪಾಲ ನಾಯಕ,ರಾಜುಗೌಡ ಪಾಟೀಲ ಉಕ್ಕಿನಾಳ, ಮೌನೇಶ ಹಯ್ಯಾಳಕರ, ವೆಂಕಟೇಶ ಗೌನಳ್ಳಿ, ಪ್ರಭು ದೊಡ್ಡಮನಿ, ನಿಖಿಲ್ ಸಗರ, ಸ್ನೇಹಲ್ ಏಕಬೋಟೆ, ಅರುಣ ಗಾಂಜಿ, ಶರಣು ಟೊಕಾಪೂರ, ರಾಮರೆಡ್ಡಿ ತಳವಾರ, ಭೀಮರಾಯ ಕುರಿ ಸೇರಿದಂತೆಯೇ ಇತರರಿದ್ದರು.