ಬಿಜೆಪಿ ಕಾರ್ಯಕರ್ತರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ
- ಬಿಜೆಪಿ ಪಕ್ಷದವರನ್ನೇ ಎಷ್ಟು ಬಾರಿ ಸೇರಿಸಿಕೊಳ್ಳುತ್ತಿರಿ?
- ಯಮಕನಮರಡಿ ಕಾಂಗ್ರೆಸ್ ಮುಖಂಡರ ಪ್ರಶ್ನೇ
- ಪ್ರಚಾರಕ್ಕಾಗಿ ಸುಳ್ಳು ಸುದ್ದಿ ಹಬ್ಬಿಸಬೇಡಿ
ಬಿಜೆಪಿ ಕಾರ್ಯಕರ್ತರನ್ನೇ ಮರಳಿ ಪಕ್ಷಕ್ಕೆ ಸೇರ್ಪಡೆ
|ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡರಿಂದ ಆರೋಪ | ಸುದ್ದಿಗೋಷ್ಠಿ
ಯಮಕನಮರಡಿ ಕ್ಷೇತ್ರದ ಬೆಳ್ಳಂಕಿ ಗ್ರಾಮದ ಬಿಜೆಪಿ ಕಾರ್ಯಕರ್ತರೇ ಶಾಲು ಹಾಗೂ ಮಾಲೆ ಹಾಕಿ, ಅವರನ್ನು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ ಕಾಂಗ್ರೆಸ್ ಮುಖಂಡ ಮಹಾನಿಂಗ ಶಿರಗುಪ್ಪಿ ಆರೋಪಿಸಿದರು.
ಇಲ್ಲಿನ ಅಲದಾಳ ಅತಿಥಿ ಗೃಹದಲ್ಲಿ ಈಚೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ಮುಖಂಡ ಬಸವರಾಜ ಹುಂದ್ರಿ ಅವರು ಪಕ್ಷದಲ್ಲಿರುವ ಕಾರ್ಯಕರ್ತರನ್ನೇ ಮತ್ತೊಮ್ಮೆ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಮಾಡುವ ಮೂಲಕ ನಗೆಪಾಟಿಗೆ ಒಳಗಾಗಿದ್ದಾರೆ.ಈ ರೀತಿ ಕ್ಷುಲಕ ರಾಜಕಾರಣ ಮಾಡುವುದನ್ನು ಬಿಡಲಿ ಹೇಳಿದರು.
ನಿಮ್ಮದೇ ಕಾರ್ಯಕರ್ತರನ್ನು ನೀವೇ ಎಷ್ಟು ಬಾರಿ ಎಂದು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೀರಿ? ಚುನಾವಣೆಯ ನಂತರ ಕಳೆದ ಮೂರು ವರ್ಷಗಳಿಂದ ನೀವು ಎಲ್ಲಿದ್ದೀರಿ ಎಂಬುದು ಯಾರಿಗೂ ಗೊತ್ತಿಲ್ಲ. ಇದೀಗ ಚುನಾವಣೆ ಸಮೀಪಿಸುತ್ತಿರುವಂತೆ ಮತ್ತೆ ಕಾಣಿಸಿಕೊಂಡು ಅಸ್ವಿತ್ವಕ್ಕಾಗಿ ತಿಣುಕಾಡುತ್ತಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದರು ಪಡಿಸಿದರು.
ಶರತ ಪಾಟೀಲ, ವಿಶ್ವನಾಥ ಪಾಟೀಲ, ಶರದ ಪ್ರಧಾನ ಹಾಗೂ ದಯಾನಂದ ಶಿಂಧೆ ಮಾತನಾಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಹೇಳಲಾಗುತ್ತಿರುವ ಕಾರ್ಯಕರ್ತರು ಈ ಹಿಂದೆ ಪಕ್ಷದಲ್ಲಿದ್ದರು ಎಂದು ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ಪಡಿಸಬೇಕು ಎಂದು ಸವಾಲ್ ಹಾಕಿದರು.
ದಯಾನಂದ ಪಾಟೀಲ, ಚಂದ್ರಕಾಂತ ಮುಸಳೆ, ರಮೇಶ ದೇಸಾಯಿ, ಬಾಳು ನಾಯಿಕ, ದತ್ತಾ ಪಾಟೀಲ, ಬಸವರಾಜ ದೇಸಾಯಿ, ಉದಯ ಪಾಟೀಲ, ರಾಜು ಗೋಸರವಾಡಕರ, ಭರಮಾ ಹಳ್ಳೂಳಿ, ಈರಣ್ಣ ದೇಸಾಯಿ, ಅಪ್ಪು ಸುತಾರ ಇತರರು ಇದ್ದರು.