ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮೇಲಿನ ಸುಳ್ಳು ಎಫ್ಐಆರ್ ಖಂಡಿಸಿ ಬಿಜೆಪಿ ಕಾರ್ಯಕರ್ತರು, ಬಡಾವಣೆಗಳ ನಾಗರಿಕರು ಕಲಬುರಗಿ ರಾಮಮಂದಿರ ವೃತ್ತದ ಬಳಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ಮಲ್ಲು ಉದನೂರು, ರಾಜು ದೇವದುರ್ಗ, ಶ್ರೀನಿವಾಸ ದೇಸಾಯಿ, ಮಹಾದೇವ ಬೆಳಮಗಿ, ವಿಶ್ವನಾಥ ಸಾಲೀಮಠ್, ಸುಂದರ ಕುಲಕರ್ಣಿ, ರಾಜು ವಾಡೇಕರ್ ಇತರರಿದ್ದರು.
- ತಿಕ್ಕಾಟ, ನೂಕಾಟ ಕೆಲಕಾಲ ಪರಿಸ್ಥಿತಿ ಉದ್ವಿಗ್ನ
- ಅಪ್ಪುಗೌಡರ ವಿರುದ್ಧ ಸುಳ್ಳು ಎಫ್ಐಆರ್ಗೆ ಖಂಡನೆ
ಕಲಬುರಗಿ: ರಾಜ್ಯ ಸರ್ಕಾರ, ಶಾಸಕ ಅಲ್ಲಮಪ್ರಭು ಪಾಟೀಲರ ವಿರುದ್ಧ ಹಾಗೂ ಕ್ಷೇತ್ರದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ (ಅಪ್ಪುಗೌಡ) ಮೇಲಿನ ಸುಳ್ಳು ಎಫ್ಐಆರ್ ಖಂಡಿಸಿ ಹಾಗೂ ಅವರ ಮೇಲೆ ಚಎಂದು ಆಗ್ರಹಿಸಿ ಕಲಬುರಗಿ ದಣ ಮಂಡಲ ಬಿಜೆಪಿ ಕಾರ್ಯಕರ್ತರು, ವಿವಿಧ ವಾರ್ಡ್ಗಳ ನಾಗರಿಕರು ನಗರದ ರಾಮಮಂದಿರ ಬಳಿ ಗುರುವಾರ ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ಪೊಲಿಸರೊಂದಿಗೆ ಮಾತಿನ ಚಕಮಕಿ, ತಿಕ್ಕಾಟ, ನೂಕಾಟ ನಡೆದು ಕೆಲಕಾಲ ಪರಿಸ್ಥಿತಿ ಉದ್ವಿಗ್ನವಾಗಿತ್ತು.
ನಗರದ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ವಿಶೇಷವಾಗಿ ಪಾಲಿಕೆ ವ್ಯಾಪ್ತಿಗೆ ಒಳಪಡುವ ವಿವಿಧ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ಉದ್ಯಾನವನ, ಬೀದಿ ದೀಪ ಸೇರಿ ಯಾವುದೇ ಮೂಲಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ದೂರಿ ಬಿಜೆಪಿ ಕಾರ್ಯಕರ್ತರು, ವಿವಿಧ ಬಡಾವಣೆಗಳ ಜನರು ರಾಮಮಂದಿರ ಬಳಿ ಗುರುವಾರ ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ಮತ್ತು ಪ್ರತಿಭಟನಾ ನಿರತ ಕಾರ್ಯಕರ್ತರ ಮಧ್ಯೆ ನಡೆದ ತಿಕ್ಕಾಟ, ನೂಕಾಟದಿಂದಾಗಿ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ವಿವಿಧ ತಾಲೂಕುಗಳಿಂದ ನಗರಕ್ಕೆ ಸೇರುವ ಪ್ರಮುಖ ರಸ್ತೆಗಳ ವೃತ್ತದಲ್ಲಿ ಗುಂಡಿ ಮುಚ್ಚುವುದು, ಸ್ವಚ್ಛತೆ ಕಾಪಾಡುವುದು, ಶ್ರೀಶರಣಬಸವೇಶ್ವರ ದೇವಸ್ಥಾನದ ಬಳಿಯ ಲಾಲಗೇರಿ ಕ್ರಾಸ್ನಲ್ಲಿನ ರಸ್ತೆ ಡಾಂಬರೀಕರಣ ಮಾಡುವುದು, ಚರಂಡಿ ದುರಸ್ತಿಗೊಳಿಸುವಗೊಳಿಸುವ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ನಿರತರು ಶಾಸಕ ಅಲ್ಲಮಪ್ರಭು ಪಾಟೀಲರ ಭಾವಚಿತ್ರದ ಬ್ಯಾನರ್ ಹಿಡಿದು ೂಷಣೆ ಕೂಗಿ, ದಕ್ಷಿಣ ಕ್ಷೇತ್ರದ ಶಾಸಕರು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಕೇವಲ ಇನ್ನೊಬ್ಬರನ್ನು ನಿಂದಿಸುವುದು, ತಮ್ಮ ಪಕ್ಷದ ನಾಯಕರನ್ನು ಓಲೈಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಕ್ಷೇತ್ರದ ಜನ ಅದರಲ್ಲೂ ಕಲಬುರಗಿ ಮಹಾನಗರದ ಜನ ಬೇಸತ್ತು ಹೋಗಿದ್ದಾರೆ ಎಂದು ದೂರಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಮೇಲೆ ವೈಯುಕ್ತಿಕ ನಿಂದನೆ ಮಾಡಿದ ಕಿಡಿಗೇಡಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕು, ಕೇಂದ್ರ ಬಸ್ನಿಲ್ದಾಣದ ಎದುರಿನ ರಸ್ತೆ ಕಾಮಗಾರಿ ಶ್ರೀ ಪೂರ್ಣಗೊಳಿಸಬೇಕು, ವಾರ್ಡ್ 53, 54 ರಾಮಮಂದಿರ ದಿ.ಚಂದ್ರಶೇಖರ ಪಾಟೀಲ್ ರೇವೂರ್ ಮಾರ್ಗದ ರಸ್ತೆಯಿಂದ ಮೋಹನ್ ಲಾಡ್ಜ್ವರೆಗಿನ ರಸ್ತೆಗುಂಡಿ ಮುಚ್ಚಬೇಕು, ರಸ್ತೆ ಪಕ್ಕದಲ್ಲಿರುವ ಚರಂಡಿ ದುರಸ್ತಿಗೊಳಿಸಿ, ಮಳೆ ನೀರು ಸುಗಮವಾಗಿ ಹರಿಯುವಂತೆ ಮಾಡಬೇಕು. ವಾರ್ಡ್ 54ರ ಧರಿಯಾಪುರ ಜಿಡಿಎ ಬಡಾವಣೆ ವ್ಯಾಪ್ತಿಯ ಎಲ್ಲ ಒಳರಸ್ತೆಗಳ ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿದರು.
ವಾರ್ಡ್ 52 ಅಕ್ಕಮಹಾದೇವಿ ಬಡಾವಣೆಯ ಹೊಸ ಜೇವರ್ಗಿ ರಸ್ತೆಗೆ ಸಂಪರ್ಕಿಸುವ ಮಾರ್ಗ ಡಾಂಬರೀಕಣ ಮಾಡಬೇಕು, ಭಾಗ್ಯವಂತಿ ನಗರದಲ್ಲಿ ಮಳೆಗಾಲ ಬಂದರೆ ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗುತ್ತಿದೆ. ತಕ್ಷಣ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು. ನಿರಂತರ ನೀರು ಯೋಜನೆ ಕಾಮಗಾರಿ ಕೈಗೆತ್ತಿಕೊಂಡು ಶ್ರೀ ಪೂರ್ಣಗೊಳಿಸಬೇಕು. ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರು 8&15 ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಪ್ರತಿ ಎರಡು ದಿನಕ್ಕೊಂದು ಬಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು. ಪಾಲಿಕೆ ಸದಸ್ಯರಾದ ಮಲ್ಲು ಉದನೂರು, ರಾಜು ದೇವದುರ್ಗ, ದಕ್ಷಿಣ ಮಂಡಲ ಅಧ್ಯಕ್ಷ ಶ್ರೀನಿವಾಸ ದೇಸಾಯಿ, ಬಿಜೆಪಿ ಯುವ ಮುಖಂಡರಾದ ಮಹಾದೇವ ಬೆಳಮಗಿ, ವಿಶ್ವನಾಥ ಸಾಲೀಮಠ್, ಸುಂದರ ಕುಲಕರ್ಣಿ, ರಾಜು ವಾಡೇಕರ್, ಶಿವರಾಜ ಪಾಟೀಲ ರದ್ದೆವಾಡಗಿ, ಸಿದ್ದಾಜಿ ಪಾಟೀಲ, ಶಿವಯೋಗಿ ನಾಗನಹಳ್ಳಿ, ಮಾಜಿ ಮೇಯರ್ ವಿಶಾಲ ದರ್ಗಿ, ಬಸವರಾಜ ಪಾಟೀಲ ಬಿರಾಳ, ಪ್ರಕಾಶ ಪಾಟೀಲ, ಹಣಮಂತ ಪಾಟೀಲ, ಮಂಜು ರೆಡ್ಡಿ, ರಾಮಚಂದ್ರ ಜಾಧವ, ಮಲ್ಲು ಜಿನಕೇರಿ, ರಮೇಶ ವಾಡೇಕರ, ನಾಗಲಿಂಗಯ್ಯಾ ಮಠಪತಿ, ಗಿರೀಶ ಮಾವೂರ, ಹಣಮಂತ ಪೂಜಾರಿ, ಶಿವು ಸ್ವಾಮಿ, ಶೋಭಾ ಪಾಟೀಲ, ಜ್ಯೋತಿ ಪಾಟೀಲ, ವಿಜಯಲಕ್ಷಿ$್ಮ ಗೊಬ್ಬೂರ, ಸಂಜೀವ ರೆಡ್ಡಿ, ಅರವಿಂದ ನಾಯಕ, ವಿರೇಶ ನಂದಿಕೂರ, ಆನಂದ ಚವ್ಹಾಣ, ಭೀಮು ತೆಗನೂರ, ಅಭಿಷೇಕ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು, ನಾಗರಿಕರು ಪಾಲ್ಗೊಂಡಿದ್ದರು.
"
ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲರು ಮಾಜಿ ಶಾಸಕ ದತ್ತಾತ್ರೇಯ ಪಾಟೀಲರ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಇದ್ಯಾವುದಕ್ಕೂ ನಾವು ಬಗ್ಗುವುದಿಲ್ಲ. ಪಕ್ಷದ ಅಪಾರ ಸಂಖ್ಯೆಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅಪ್ಪುಗೌಡರೊಂದಿಗಿದ್ದೇವೆ. ಇದನ್ನು ಅಲ್ಲಮಪ್ರಭು ಗೌಡರು ಅರಿತುಕೊಳ್ಳಬೇಕು.
— ರಾಜು ವಾಡೇಕರ್, ಬಿಜೆಪಿ ಮುಖಂಡ.