ಪಶ್ಚಿಮ ಬಂಗಾಳ, ಪುದುಚೆರಿ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಜಯಸಾಧಿಸಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಬಿಜೆಪಿ ಕಚೇರಿಯಲ್ಲಿ ಯುವ ಮುಖಂಡ ಎಸ್.ಸಚ್ಚಿದಾನಂದ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಪೀಹಳ್ಳಿ ಡಾ.ಸಿದ್ದರಾಮಯ್ಯ, ಕೆ.ಎಸ್.ನಂಜುಂಡೇಗೌಡ, ಟಿ.ಶ್ರೀಧರ್ ಇತರರಿದ್ದರು. 
ರಾಜ್ಯ

ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

ಶ್ರೀರಂಗಪಟ್ಟಣ: ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಮೆಚ್ಚಿ ಮತದಾರರು ಪಕ್ಷವನ್ನು ಗೆಲ್ಲಿಸಿದ್ದಾರೆ ಎಂದು ಯುವ ಮುಖಂಡ ಎಸ್.ಸಚ್ಚಿದಾನಂದ ತಿಳಿಸಿದರು.
ಪಶ್ಚಿಮ ಬಂಗಾಳ, ಪುದುಚೆರಿ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಜಯಸಾಧಿಸಿದ ಬಳಿಕ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿ, ಸಿಹಿ ಹಂಚಿ ಬಳಿಕ ಮಾತನಾಡಿದರು.
ಟಿಎಂಸಿಯ ಜನವಿರೋಧಿ ಆಡಳಿತ ವಿರೋಧಿಸಿರುವ ಪಶ್ಚಿಮಬಂಗಾಳದ ಮತದಾರರು, ಬಿಜೆಪಿಯ ಜನಪರ ಆಡಳಿತ ಮೆಚ್ಚಿ ಮೊದಲ ಬಾರಿಗೆ ಪಕ್ಷವನ್ನು ಬೆಂಬಲಿಸಿ ಅಧಿಕಾರ ನೀಡಿದ್ದಾರೆ. ಅಂತೆಯೇ ಪುದುಚೆರಿಯಲ್ಲಿ ಮತದಾರರು ಜನಪರ ಆಡಳಿತಕ್ಕೆ ಬೆಂಬಲ ನೀಡಿ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಅಸ್ಸಾಂ ರಾಜ್ಯದಲ್ಲಿ ಆಡಳಿತರೂಢ ಪಕ್ಷದ ಅಭಿವೃದ್ಧಿ ಮೆಚ್ಚಿ ಮತ ನೀಡುವ ಮೂಲಕ ಪುನಾ ಬಿಜೆಪಿ ಅಧಿಕಾರಕ್ಕೆ ತಂದಿದ್ದಾರೆ. 2028ಕ್ಕೆ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ರಾಜ್ಯಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ರೈತ ಮೋರ್ಚಾ ಮುಖಂಡ ಕೆ.ಎಸ್.ನಂಜುಂಡೇಗೌಡ, ಜಿಲ್ಲಾ ಕಾರ್ಯದರ್ಶಿ ಟಿ.ಶ್ರೀಧರ್, ಶ್ರೀರಂಗಪಟ್ಟಣ ನಗರ ಘಟಕದ ಅಧ್ಯಕ್ಷ ಸುಧಾಕರ್, ಮುಖಂಡರಾದ ಗಂಜಾಂ ಶಿವು, ಉಮೇಶ್ ಕುಮಾರ್, ಹೇಮಂತ್ ಕುಮಾರ್, ಕಿರಣ್ ಸಿಂಗ್, ಮಹಿಳಾ ನಾಯಕಿ ಜಯಕ್ಷ್ಮೀ ಇತರರಿದ್ದರು.