ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಟಕ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜು ಕುರಡಗಿ, ಲಿಂಗರಾಜ ಪಾಟೀಲ, ಬಸವರಾಜ ಇಟಗಿ, ಶಂಕರ ಕರಿಬಿಷ್ಠಿ, ಬೂದಪ್ಪ ಹಳ್ಳಿ, ಎಂ. ಎಸ್. ಕರೀಗೌಡ್ರ, ಎಂ. ಎಂ.ಹಿರೇಮಠ, ರವಿ ದಂಡಿನ ಇತರರು ಇದ್ದರು.
BJP ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಮೆಕ್ಕೆಜೋಳ, ಈರುಳ್ಳಿ ಬೆಂಬಲ ಬೆಲೆ ಖರೀದಿ ಕೇಂದ್ರ ಕೂಡಲೆ ಆರಂಭಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧ್ಯ ರಾಜು ಕುರುಡಗಿ ಮಾತನಾಡಿ, ರಾಜ್ಯದಲ್ಲಿ ಈ ವರ್ಷ ಅತಿವೃಷ್ಟಿ ಅನಾವೃಷ್ಟಿ ಕಾರಣದಿಂದಾಗಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟಗೊಂಡಿವೆ. ಸಮೀೆಯ ನೆಪದಲ್ಲಿ ವಿಳಂಬನೀತಿ ಅನುಸರಿಸಿದ ರಾಜ್ಯ ಸರ್ಕಾರ ಈವರೆಗೂ ಬೆಳೆಹಾನಿಗೆ ಸಮರ್ಪಕ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡದೆ ಇರುವುದು ನಾಡಿನ ಅನ್ನದಾತರಿಗೆ ಮಾಡಿದ ಅವಮಾನ ಮತ್ತು ಅಪರಾಧವಾಗಿದೆ. ಮುಂಗಾರು ಹಂಗಾಮಿನ ಹೆಸರು ಬೆಳೆ ಸಂರ್ಪೂಣ ನಷ್ಟವಾಗಿದೆ. ಅಳಿದುಳಿದ ಹೆಸರು ಖರೀದಿಗೂ ರಾಜ್ಯ ಸರ್ಕಾರ ಮುಂದಾಗಲಿಲ್ಲ. ಗುಣಮಟ್ಟದ ನೆಪವೊಡ್ಡಿ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಂದ ಹೆಸರನ್ನು ಖರೀದಿಸುತ್ತಿಲ್ಲ. ಈ ಕಾರಣದಿಂದಾಗಿ ರೈತರು ಮಾರುಕಟ್ಟೆಯಲ್ಲಿ ಅತ್ಯಂತ ಕನಿಷ್ಠ ಬೆಲೆಗೆ ಹೆಸರು ಮಾರಾಟ ಮಾಡುತ್ತಿದ್ದು, ಕೃಷಿಗೆ ತೊಡಗಿಸಿದ ಹಣವು ಮರಳಿ ಬಾರದಂತಾಗಿದೆ. ರಾಜ್ಯದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಗೋವಿನ ಜೋಳ ಖರೀದಿಗೆ ಕೇಂದ್ರ ಸರ್ಕಾರ ನ. 13ರಂದೇ ಅನುಮತಿ ನೀಡಿದೆ. ಆದರೆ, ರಾಜ್ಯ ಸರ್ಕಾರ ನಿರ್ಲ ಧೋರಣೆ ಅನುಸರಿಸುತ್ತಿದ್ದು ಈವರೆಗೂ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ರೈತರ ನೆರವಿಗೆ ಬಂದಿಲ್ಲ ಎಂದರು.
ನಗರ ಮಂಡಲ ಅಧ್ಯ ಸುರೇಶ ಮರಳಪ್ಪನವರ ಮಾತನಾಡಿ, ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನ ಸ್ಥಾಪಿಸಿ ಗೋವಿನ ಜೋಳ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹೆಸರು ಶೇಂಗಾ ಈರುಳ್ಳಿ ಮೆಣಸಿನಕಾಯಿ ತೊಗರಿ ಹತ್ತಿ ಮುಂತಾದ ಬೆಳೆ ಹಾನಿ ಮೊತ್ತವನ್ನು ೂಷಿಸದ ಪ್ರಮಾಣಕ್ಕಿಂತ ಹೆಚ್ಚಿಸಿ ಪರಿಹಾರವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದಶಿರ್ ಲಿಂಗರಾಜ ಪಾಟೀಲ ಮಾತನಾಡಿ, ಸದ್ಯ ಹಿಂಗಾರು ಹಂಗಾಮಿನಲ್ಲಿ ಕಡಲೆಯು ಹೆಚ್ಚು ಬಿತ್ತನೆಯಾಗಿದೆ. ಬಿತ್ತನೆ ಪ್ರಮಾಣದ ಅಂಕಿ ಅಂಶಗಳನ್ನು ಆಧರಿಸಿ ಕಡಲೆ ಖರೀದಿಗೆ ಈಗಿನಿಂದಲೇ ಪೂರ್ವ ತಯಾರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿ, ಅನಾವೃಷ್ಟಿಯಿಂದ ಅಥವಾ ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗದಿರುವ ಕಾರಣ ರೈತರು ಪ್ರತಿ ವರ್ಷ ಹಾನಿಗೆ ಒಳಗಾಗುತ್ತಲೇ ಇದ್ದಾರೆ. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರ ಕನಿಷ್ಠ 30 ಸಾವಿರ ಕೋಟಿ ಅನುದಾನವನ್ನು ಆವರ್ತನಿಧಿಗೆ ಮೀಸಲಿಡಬೇಕು ಎಂದರು.
ರೈತ ಮೋರ್ಚಾ ಜಿಲ್ಲಾಧ್ಯ ಬಸವರಾಜ ಇಟಗಿ, ಶಂಕರ ಕರಿಬಿಷ್ಠಿ, ಬೂದಪ್ಪ ಹಳ್ಳಿ, ಎಂ. ಎಸ್. ಕರೀಗೌಡ್ರ, ಎಂ. ಎಂ.ಹಿರೇಮಠ, ಜಗನ್ನಾಥಸಾ ಭಾಂಡಗೆ, ವಿಜಯಕುಮಾರ ಗಡ್ಡಿ, ಬಿ. ಎಸ್. ಲದ್ವಾ, ಬಸವರಾಜ ಯಂಕಂಚಿ, ಶಶಿಮೌಳಿ ಕುಲಕಣಿರ್, ಎಲ್. ಟಿ. ರಾಜೊಳ್ಳಿ, ಭದ್ರೇಶ ಕುಸ್ಲಾಪೂರ, ರವಿ ದಂಡಿನ, ಶಿವು ಹಿರೇಮನಿ ಪಾಟೀಲ, ಅಶೋಕ ಸಂಕಣ್ಣವರ, ರಾವೇಂದ್ರ ಯಳವತ್ತಿ, ಅನೀಲ ಅಬ್ಬಿಗೇರಿ, ಸುಧೀರ ಕಾಟಿಗರ, ಚಂದ್ರು ತಡಸದ, ಅಶ್ವೀನಿ ಜಗತಾಪ, ವಿಜಯಲಕ್ಷಿ$್ಮ ಮಾನ್ವಿ, ಸ್ವಾತಿ ಅಕ್ಕಿ, ಜಯಶ್ರೀ ಅಣ್ಣಿಗೇರಿ, ಪಾರ್ವತಿ ಪಟ್ಟಣಶೆಟ್ಟಿ ಹಲವರು ಇದ್ದರು.