ಚಿತ್ತಾಪುರ ತಾಲೂಕಿನ ದಂಡೋತಿ ಮುರಾರ್ಜಿ ದೇಸಾಯಿ ವಸತಿಶಾಲೆಗೆ ಕಾಂಗ್ರೆಸ್​ ಮುಖಂಡರ ನಿಯೋಗ ಗುರುವಾರ ಭೇಟಿ ನೀಡಿ ಮಾಹಿತಿ ಪಡೆಯಿತು. 
ರಾಜ್ಯ

ಪ್ರಚಾರ ಪಡೆಯಲು ಬಿಜೆಪಿ ನಾಯಕರು ವಸತಿಶಾಲೆಗೆ ಭೇಟಿ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್​ ಮುಖಂಡ ರಾಜಶೇಖರ ತಿಮ್ಮನಾಯಕ ಟೀಕೆ
  • ದಂಡೋತಿ ಮುರಾರ್ಜಿ ದೇಸಾಯಿ ಹಾಸ್ಟೆಲ್​ಗೆ ಕೈ ನಿಯೋಗ
ಚಿತ್ತಾಪುರ: ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಅವರ ಹೆಸರಲ್ಲಿ ಬಿಜೆಪಿ ಮುಖಂಡರು ಪ್ರಚಾರ ಪಡೆಯಲು ದಂಡೋತಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿಶಾಲೆಗೆ ಬಂದಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ರಾಜಶೇಖರ ತಿಮ್ಮನಾಯಕ ಟೀಕಿಸಿದರು.
ದಂಡೋತಿ ಮುರಾರ್ಜಿ ದೇಸಾಯಿ ವಸತಿಶಾಲೆಗೆ ಕಾಂಗ್ರೆಸ್​ ಮುಖಂಡರ ನಿಯೋಗದೊಂದಿಗೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, ದಂಡೋತಿ ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣಕ್ಕೆ ಪ್ರಿಯಾಂಕ್​ ಖರ್ಗೆ ಅವರು ಸ್ಪಂದಿಸಿದ್ದರಿಂದಲೇ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆಗಮಿಸಿ ಪರಿಹಾರೋಪಾಯ ಕ್ರಮ ಕೈಗೊಂಡಿದ್ದಾರೆ. ಅಲ್ಲದೇ ವಸತಿಶಾಲೆ ಪ್ರಾಚಾರ್ಯ ಹಾಗೂ ವಾರ್ಡಮ್​ ಅವರನ್ನು ಅಮಾನತು ಮಾಡಲಾಗಿದೆ. ಆದರೂ ಬಿಜೆಪಿ ಮುಖಂಡರು ಸುಮ್ಮನೆ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ರಮೇಶ ಕವಡೆ ಮಾತನಾಡಿ, ಮಕ್ಕಳ ಓದಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಉದ್ದೇಶಿಸಿ ಗ್ರಾಮದ ಮುಖಂಡರಾದ ನಾವ್ಯಾರು ವಸತಿಶಾಲೆಗೆ ಬಂದಿಲ್ಲ. ಆದರೆ ಬಿಜೆಪಿ ಮುಖಂಡರು ಇಲ್ಲಿಗೆ ಆಗಮಿಸಿ ಸುದ್ದಿಗೋಷ್ಠಿ ಮಾಡಿದ್ದಾರೆ. ಇದೇ ಕೊನೇ, ಮತ್ತೆ ಬಂದು ರಾಜಕೀಯ ಮಾಡಲು ಮುಂದಾದರೆ ತಕ್ಕ ಉತ್ತರ ಕೊಡಲು ಸಿದ್ಧ ಎಂದು ಎಚ್ಚರಿಸಿದರು.
ಸಾಬಣ್ಣ ಭರಾಟೆ, ಡಾ.ದಾವುದ್​ ಪಟೇಲ್​ ಮಾತನಾಡಿದರು. ಮುನಿಯಪ್ಪ ಕೊಳ್ಳಿ, ರಶೀದ್​ ಪಠಾಣ್​, ಶಂಕರ ಕೊಳ್ಳಿ, ದೇವದಾಸ, ಶರೀಫ್​ ತೋಶವಾಲೆ, ಇಸಾಕ್​ ಜಲೀಲ್​, ಕಂಠೆಪ್ಪ ಮೂಕೆ, ನಾಗು ಭರಾಟೆ, ರವಿ ರಂಗಪ್ಪ, ವೆಂಕಟೇಶ್​, ವಾಹೇದ್​ ಇದ್ದರು.