ಬಡವರಿಗೆ ನ್ಯಾಯ ಒದಗಿಸಲು ಬಿಜೆಪಿ ಸನ್ನದ್ದ justice
- ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಹೇಳಿಕೆ
ಬಾಗೇಪಲ್ಲಿ: ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಅವರ ನೂರಾರು ಎಕರೆಯ ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿ ಹೋರಾಟದ ಮೂಲಕ ಬಡವರಿಗೆ ನ್ಯಾಯ ದೊರಕಿಸಿಕೊಡಲು ರಾಜ್ಯ ಬಿಜೆಪಿ ಸನ್ನದ್ದವಾಗುತ್ತಿದೆ' ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದರು. justice
ಪಟ್ಟಣದ ಟಿ.ಬಿ.ಕ್ರಾಸ್ನಲ್ಲಿರುವ ಬಿಜೆಪಿಯ ಸಿ.ಮುನಿರಾಜು ಗೃಹ ಕಚೇರಿ ಬಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟು ಹಬ್ಬದ ಪ್ರಯುಕ್ತ ೇತ್ರದ ಜನರಿಗೆ ಹೆಲ್ಮೆಟ್ ವಿತರಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಮಂತ್ರಿಗಳ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ದಾಖಲೆ ಬಿಡುಗಡೆ ಮಾಡಿ ಕಾಂಗ್ರೆಸ್ಸಿಗರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದೆ, ಇದೀಗ ಕಂದಾಯ ಸಚಿವರು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ತೋಟ ಮಾಡಿಕೊಂಡಿರುವ ಬಗ್ಗೆ ದಾಖಲೆ ಬಿಡುಗಡೆಗೊಳಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿದೆ ಎಂದರು.
"ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕರು ಗುಡಿಬಂಡೆ, ಬಾಗೇಪಲ್ಲಿಯ ಹೊಸಹುಡ್ಯ, ಜಿಲಾರ್ಜಿಲ, ಚೇಳೂರಿನ ರಾಶ್ಚೇರುವು ಕಡೆ ಸಾವಿರಾರು ಎಕರೆ ಜಮೀನುಗಳನ್ನು ಕಬಳಿಸಿ ಶಾಸಕರ ಮಾಲೀಕತ್ವದ ಹೋಟೆಲ್ಗಳಲ್ಲಿ ಕೆಲಸ ಮಾಡುವವರ, ಸಂಬಂಧಿಕರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಸರ್ಕಾರ ಮುಟ್ಟುಗೋಲಿಗೆ ಆದೇಶ ಮಾಡಿರುವ ಹೊಸಹುಡ್ಯ ಗ್ರಾಮದ ನೂರಾರು ಎಕರೆ ಸರ್ಕಾರಿ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಕುಟುಂಬ ಸದಸ್ಯರ ಹೆಸರಿಗೆ ನೋಂದಣಿ ಮಾಡಿಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಿಂದ ನೂರಾರು ಕೋಟಿ ಪಡೆಯಲು ಮುಂದಾಗಿರುವ ಬಗ್ಗೆ ದಾಖಲೆ ಇದ್ದು ಶ್ರೀದಲ್ಲೆ ಬಿಡುಗಡೆ ಮಾಡುವೆ' ಎಂದರು.
ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ್ದೇವೆ, ಇದರ ಭಾಗವಾಗಿ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲೂಕುಗಳ ವ್ಯಾಪ್ತಿಯ 4 ಸಾವಿರ ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಲಾಗಿದ್ದು, ಮುಂದುವರಿದ ಭಾಗವಾಗಿ ಸ್ಥಳಿಯ ಬಿಜೆಪಿ ಮುಖಂಡರ, ಕಾರ್ಯಕರ್ತರ ಮೂಲಕ ಹಳ್ಳಿಯಲ್ಲಿರುವ ಪ್ರತಿಯೊಬ್ಬ ಬೈಕ್ ಸವಾರರಿಗೂ ಹೆಲ್ಮೆಟ್ ವಿತರಿಸಲಾಗುವುದು. ದೇಶಕ್ಕೆ ಬೆನ್ನೆಲುಬಾಗಿರುವ ಯುವಕರ ಪ್ರಾಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ದ್ವಿಚಕ್ರ ವಾಹನ ಚಾಲನೆ ಸಮಯದಲ್ಲಿ ಸವಾರರ ಪ್ರಾಣ ಉಳಿಸುವ ಹೆಲ್ಮೆಟ್ವನ್ನು ಪ್ರತಿಯೊಬ್ಬರು ಧರಿಸಿ ಸಂಚಾರಿ ನಿಯಮ ಪಾಲಿಸಿ ಎಂದರು.
ಮುಖಂಡರಾದ ಗುಜ್ಜೇಪಲ್ಲಿ ಸುಧಾಕರರೆಡ್ಡಿ, ಆರ್.ಪ್ರತಾಪ್, ಗುಡಿಬಂಡೆ ಗಂಗಿರೆಡ್ಡಿ, ಆದಿರೆಡ್ಡಿ, ಕೆ.ಟಿ.ವೀರಾಂಜನೇಯ, ಮರವಪಲ್ಲಿ ಕೃಷ್ಣಾರೆಡ್ಡಿ, ಆರ್.ವೆಂಕಟೇಶ್, ಚೇಳೂರು ಆಂಜನೇಯರೆಡ್ಡಿ, ಎಂ.ಬಿ.ಲಕ್ಷಿ$್ಮನರಸಿಂಹಯ್ಯ, ಜಿನ್ನಿ, ಚಿನ್ನಪೂಜಪ್ಪ, ಸೆಂಟ್ರಿಂಗ್ ಸೀನಾ, ಗಂಗರಾಜು, ಕೊತ್ತಕೋಟೆ ಲೋಕೇಶ್, ರಾಮಚಂದ್ರ, ಈಶ್ವರರೆಡ್ಡಿ, ರಂಗಾರೆಡ್ಡಿ, ರವಿಕುಮಾರ್, ಮಂಜುಳಾ, ರೂಪಾ, ನಂದಿನಿ, ಕೃಷ್ಣವೇಣಿ ಮತ್ತಿತರರು ಇದ್ದರು.