ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ಶುದ್ಧೀಕರಣ ಖಂಡಿಸಿ ಕಾಂಗ್ರೆಸ್ನಿಂದ ಸೇಡಂನ ಬಸವೇಶ್ವರ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟನೆ ಮಾಡಲಾಯಿತು. ಬಸವರಾಜ ಪಾಟೀಲ್, ಜೈಭೀಮ ಊಡಗಿ, ವಿಲಾಸಗೌತಂ ನಿಡಗುಂದಾ, ಶ್ರೀನಿವಾಸ ಸಂಗಾವಿ, ಹೇಮ್ಲಾನಾಯಕ, ನಾಗೇಶ್ವರರಾವ ಮಾಲಿಪಾಟೀಲ್ ಇತರರಿದ್ದರು.
- ಬಸವರಾಜ ಪಾಟೀಲ್ ಆಕ್ರೋಶ
- ಸೇಡಂನಲ್ಲಿ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ
ಸೇಡಂ: ಮನುವಾದಿ ತತ್ವ-ಸಿದ್ಧಾಂತಗಳನ್ನು ಹೊಂದಿರುವ ಬಿಜೆಪಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲು ಹೊರಟಿದ್ದು, ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಶಕ್ತಿಯಾಗಿ ನಿಂತಿದೆ ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್ ಊಡಗಿ ದೂರಿದರು.
ಉತ್ತರಾಖಂಡದ ಹಲ್ದವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಭಾಷಣ ಮಾಡಿದ ಮೈದಾನ ಸ್ವಚ್ಛಗೊಳಿಸಿದ ಘಟನೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ ಬಸವೇಶ್ವರ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಈ ದೇಶ ಕಂಡಂತಹ ಅಪ್ರತಿಮ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಾಗಿದ್ದಾರೆ. ಆದರೆ ಅಸ್ಪಶ್ಯತೆಯ ಭಾವನೆಯೊಂದಿಗೆ ಬದುಕು ನಡೆಸುತ್ತಿರುವ ಮನುವಾದಿಗಳು ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಸ್ವಚ್ಛಗೊಳಿಸಿ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ ಮಾಲಿಪಾಟೀಲ್ ಮಾತನಾಡಿ, ಜಗತ್ತು ಮಂಗಳ, ಚಂದ್ರನತ್ತ ಪಯಣ ಮಾಡುತ್ತಿರುವ ಸಂದರ್ಭದಲ್ಲಿ ನಾವು ಅಸ್ಪಶ್ಯತೆ ಮಧ್ಯೆ ಬದುಕು ನಡೆಸುತ್ತಿರುವುದು ನೋವಿನ ಸಂಗತಿ. ಕಲ್ಯಾಣ ಕರ್ನಾಟಕದ ಜನರ ಬಾಳು ಬೆಳಗಿದ ಮಹಾನ್ ಪುರುಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆದ ಅವಮಾನ ಸಹಿಸಲು ಸಾಧ್ಯವಿಲ್ಲ. ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಧೋಳ ಬ್ಲಾಕ್ ಎಸ್ಸಿ ಟಕದ ಅಧ್ಯಕ್ಷ ಜೈಭೀಮ ಊಡಗಿ, ಸೇಡಂ ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷ ಜಗನ್ನಾಥ ಚಿಂತಪಳ್ಳಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ, ತಾಪಂ ಮಾಜಿ ಅಧ್ಯಕ್ಷ ರಾಮಯ್ಯ ಪೂಜಾರಿ, ಯುವ ಟಕದ ತಾಲೂಕು ಉಪಾಧ್ಯಕ್ಷ ವಿಲಾಸಗೌತಂ ನಿಡಗುಂದಾ, ಶ್ರೀನಿವಾಸರೆಡ್ಡಿ ಪಾಟೀಲ್, ಹಾಜಿ ನಾಡೇಪಲ್ಲಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಶರಣರೆಡ್ಡಿ ಪಾಟೀಲ್ (ಸೇಡಂ), ರವೀಂದ್ರ ನಂದಿಗಾಮ (ಮುಧೋಳ), ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್ ಬೊಮ್ನಳ್ಳಿ, ಪ್ರಮುಖರಾದ ಜಗದೇವಪ್ಪ ಪಾಟೀಲ್ ಕೊಂಕನಹಳ್ಳಿ, ವೆಂಕಟರಾಮರೆಡ್ಡಿ ಕಡತಾಲ, ಹೇಮ್ಲಾನಾಯಕ, ಅಬ್ದುಲ್ ಗಫೂರ್, ಸೈಯದ್ ನಜಮೋದ್ದಿನ್, ರಾಜಶೇಖರ ಪುರಾಣಿಕ, ವೀರೇಂದ್ರ ರುದ್ನೂರ, ಶ್ರೀನಿವಾಸ ಸಂಗಾವಿ, ಗುರುನಾಥರೆಡ್ಡಿ ಹೂಡಾ, ಮಹೇಶ ಪಾಟೀಲ್ ತರನಳ್ಳಿ, ವಿಶ್ವನಾಥ ಪಾಟೀಲ್ ಕುಕ್ಕುಂದಾ, ಮಹೆಮೂದ್ ಮದನಾ, ಭೀಮಾಶಂಕರ ಕೊಳ್ಳಿ, ಸತೀಶ ಪೂಜಾರಿ, ಈರಣ್ಣಗೌಡ ರೆಮ್ಮಣ್ಣಿ, ಅಶೋಕ ಮಹಾಡಿಕ್, ಮುರಳಿಧರರೆಡ್ಡಿ ಕೊಂತನಪಲ್ಲಿ, ಸತೀಶ ಬಾಂಜಿ, ದೇವರಾಜ ತಡಕಲ್, ಜಗದೇವಯ್ಯ ಬಂಡಾ, ಲಿಂಗರಾಜ ಕುರಕುಂಟಾ, ಗೋಪಾಲ ರಾಠೋಡ್, ಅಶೋಕ ಮಹೇಂದ್ರಕರ್, ವಿಜಯಕುಮಾರ ಶರ್ಮಾ, ರಾವೇಂದ್ರ ವಾಲೀಕಾರ, ಈರಪ್ಪ ಗುಂಡಗುರ್ತಿ, ಮಹಾಂತೇಶ ಸುತಾರ, ಸಿದ್ದು ನಾಯ್ಕೋಡಿ, ಸತೀಶ ದುಧನಿ ಇತರರಿದ್ದರು.
ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ವೃತ ತಲುಪಿತು. ಬಳಿಕ ಕಾರ್ಯಕರ್ತರು ಸರ್ಕಲ್ನಲ್ಲಿ ಸಂಚಾರ ತಡೆದು 1 ಗಂಟೆಗೂ ಅಧಿಕ ಸಮಯ ಹೋರಾಟ ನಡೆಸಿದರು. ಇದರಿಂದಾಗಿ ಕೆಲ ಕಾಲ ವಾಹನ ಸವಾರರು ಪರದಾಡಿದರು.