ತಮಿಳುನಾಡಿನ ಗಡಿ ತಳಿ ವಿಧಾನಸಭಾ ೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಆನೇಕಲ್ನ ಶ್ರೀಸಾಯಿ ರುಕ್ಮಿಣಿ ಮಹಲ್ನಲ್ಲಿ ಆಯೋಜಿಸಿದ್ದ ಬಿಜೆಪಿಯ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರ ಮಹತ್ವದ ಸಭೆಯನ್ನು ಕರ್ನಾಟಕ ವಿಧಾನಸಭೆ ವಿರೋಧಪದ ನಾಯಕ ಆರ್.ಅಶೋಕ್ ಉದ್ಘಾಟಿಸಿದರು. ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ,ಬೆಂಗಳೂರು ದಣ ಜಿಲ್ಲಾ ಬಿಜೆಪಿ ಉಪಾಧ್ಯ ಹುಲ್ಲಹಳ್ಳಿ ಸಿ.ಶ್ರೀನಿವಾಸ್, ತಾಲೂಕು ಅಧ್ಯ ಎಸ್.ಆರ್.ಟಿ.ಅಶೋಕ್ ರೆಡ್ಡಿ ಇದ್ದರು.
ಆನೇಕಲ್ : ತಮಿಳುನಾಡಿನ ಗಡಿ ತಳಿ ವಿಧಾನಸಭಾ ೇತ್ರದ ಚುನಾವಣೆಯಲ್ಲಿ ಬಿಜೆಪಿ&ಎಡಿಎಂಕೆ ಮೈತ್ರಿ ಅಭ್ಯರ್ಥಿ ಗೆಲುವಿವಾಗಿ ಆನೇಕಲ್ನ ಶ್ರೀಸಾಯಿ ರುಕ್ಮಿಣಿ ಮಹಲ್ನಲ್ಲಿ ಬಿಜೆಪಿಯ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರ ಮಹತ್ವದ ಸಭೆ ನಡೆಯಿತು.
ಕರ್ನಾಟಕ ವಿಧಾನಸಭೆ ವಿರೋಧಪದ ನಾಯಕ ಆರ್.ಅಶೋಕ್, ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹಾಗೂ ತಮಿಳುನಾಡಿನ ಮಾಜಿ ಸಂಸದ ನರಸಿಂಹಮೂರ್ತಿ, ತಮಿಳುನಾಡಿನ ಉಪಾಧ್ಯ ರಾಮಲಿಂಗಂ, ಹೊಸೂರು ಲೋಕಸಭಾ ೇತ್ರದ ನಿಕಟ ಪೂರ್ವ ಅಭ್ಯರ್ಥಿ ಜಯಪ್ರಕಾಶ್ ಭಾಗವಹಿಸಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ವಿರೋಧ ಪದ ನಾಯಕ ಆರ್.ಅಶೋಕ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕೇವಲ 3,000 ಇದ್ದ ಮತಗಳ ಸಂಖ್ಯೆಯನ್ನು 70,000ಕ್ಕೆ ಏರಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಈ ಬಾರಿ ಗೆಲುವು ನಿಶ್ಚಿತ. ತಳಿ ವಿಧಾನಸಭಾ ೇತ್ರದಲ್ಲಿ ಆನೇಕಲ್ ಭಾಗದ ಅನೇಕರ ಜಮೀನು ಹಾಗೂ ಸಂಬಂಧಗಳನ್ನು ಹೊಂದಿದ್ದಾರೆ. ಅಂತಹವರನ್ನು ಗುರುತಿಸಿ ಆಯಾ ಭಾಗಗಳ ಉಸ್ತುವಾರಿಗಳನ್ನಾಗಿ ನೇಮಕ ಮಾಡಿ ಪ ಸಂಟನೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದರು.
ಈ ಬಾರಿ ಮೈತ್ರಿ ಕೂಟಕ್ಕೆ ಉತ್ತಮ ವಾತಾವರಣವಿದ್ದು, ಚುನಾವಣಾ ಅಖಾಡದಲ್ಲಿ ಗೆಲುವಿನ ಹಾದಿ ಸುಗಮವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಯಂಗಾರೆಡ್ಡಿ, ದೊಡ್ಡಹಾಗಡೆ ಶಂಕರ್, ಬಿಜೆಪಿ ತಾಲೂಕು ಉಪಾಧ್ಯರಾದ ಹಾಲ್ದೇನಹಳ್ಳಿ ತಿಮ್ಮರಾಜು, ದೊಡ್ಡಹಗಡೆ ಶ್ರೀನಿವಾಸ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಪ್ಪ, ಭರತ್, ಅರವಿಂದ್, ಪುರಸಭಾ ಸದಸ್ಯ ಸುರೇಶ್ಬಾಬು, ಪ್ರಕಾಶ್, ವಕೀಲ ರಾಕೇಶ್ ಉಪಸ್ಥಿತರಿದ್ದರು.
ಗಡಿ ಭಾಗದ ಅನೇಕರು ಬಿಜೆಪಿಯ ಬಗ್ಗೆ ಸಾಕಷ್ಟು ಒಲವು ಹೊಂದಿದ್ದಾರೆ, ಈ ನಿಟ್ಟಿನಲ್ಲಿ ಆನೇಕಲ್ ಹಾಗೂ ಸುತ್ತಮುತ್ತಲ ಭಾಗದಿಂದ ತಳಿ ವಿಧಾನಸಭಾ ೇತ್ರದಲ್ಲಿ ನಡೆಯುವ ಚುನಾವಣೆಗೆ ಎಲ್ಲರೂ ಸಹಕಾರ ನೀಡಬೇಕು.