ಕಲಬುರಗಿ ವಿಟಿಯು ಯುಕ್ತಿ ಸಾಂಸತಿಕ ಉತ್ಸವದಲ್ಲಿ ವಿವಿಧ ಸ್ಪರ್ಧೆ ವಿಜೇತ ಬಳ್ಳಾರಿಯ ಬಿಐಟಿಎಂ ತಂಡ ಸಮಗ್ರ ಚಾಂಪಿಯನ್ಷಿಪ್ನೊಂದಿಗೆ ಸಂಭ್ರಮಿಸಿದ್ದು ಹೀಗೆ. ಎಂಎಲ್ಸಿ ಶಶೀಲ್ ನಮೋಶಿ, ಬಸವರಾಜ ದೇಶಮುಖ, ಡಾ.ಶುಭಾಂಗಿ ಡಿಸಿ, ಡಾ.ಬಸವರಾಜ ಗಾದಗೆ, ಮಹಾಂತೇಶ ಕೌಲಗಿ ಇತರರಿದ್ದರು.
- ಕಲಬುರಗಿ ವಿಟಿಯು ಯುಕ್ತಿ ಸಂಸ್ಕೃತಿಕ ಉತ್ಸವ
- ಭಾಲ್ಕಿ ಬಿಕೆಐಟಿಗೆ ರನ್ನರ್ಅಪ್
ಕಲಬುರಗಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪ್ರಾದೇಶಿಕ ಕೇಂದ್ರದಲ್ಲಿ ಆಯೋಜಿಸಿದ್ದ ಎರಡು ದಿನದ ಯುಕ್ತಿ-2026 ಸಾಂಸ್ಕ್ರತಿಕ ಉತ್ಸವದಲ್ಲಿ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಮ್ಯಾನೇಜ್ಮೆಂಟ್ ಸಮಗ್ರ ಚಾಂಪಿಯನ್ಷಿಪ್ ಪಡೆದರೆ, ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಕೆಐಟಿ) ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿದೆ.
ಪ್ರಕಲ್ಪ ಪ್ರಸ್ತುತಿಯಲ್ಲಿ ಕಲಬುರಗಿ ಸಿಯುಕೆ ವಿನ್ನರ್, ಬೀದರ್ ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜು ರನ್ನರ್, ಚಾಣಾಕ್ಷ ಸ್ಪರ್ಧೆಯಲ್ಲಿ ಕಲಬುರಗಿ ಪಿಡಿಎ ವಿನ್ನರ್, ಭಾಲ್ಕಿ ಬಿಕೆಐಟಿ ರನ್ನರ್, ರೋಬೊ ಸಮರ (ರೋಬೊ ವಾರ್)ದಲ್ಲಿ ಕಲಬುರಗಿ ಎಸ್ಐಟಿ ವಿನ್ನರ್, ಕಲಬುರಗಿ ಕೆಸಿಟಿ ರನ್ನರ್, ರೋಬೊ ಓಟ (ರೊಬೊ ರೇಸ್)ನಲ್ಲಿ ಬಳ್ಳಾರಿಯ ಆರ್ವೈಎಂಇಸಿ ವಿನ್ನರ್, ಕಲಬುರಗಿ ವಿಟಿಯು ಸಿಪಿಜಿಎಸ್ ರನ್ನರ್ಅಪ್ ಆಗಿ ಹೊರಹೊಮ್ಮಿದೆ.
ಕ್ವಿಜ್ ಸ್ಪರ್ಧೆಯಲ್ಲಿ ವಿಟಿಯು ಸಿಪಿಜಿಎಸ್ ವಿನ್ನರ್, ಶರಣಬಸವ ವಿವಿ ರನ್ನರ್, ಭಾಷಣದಲ್ಲಿ ಬಳ್ಳಾರಿಯ ಬಿಐಟಿಎಂ ವಿನ್ನರ್, ಕಲಬುರಗಿ ಪಿಡಿಎ ರನ್ನರ್, ಥೋಡ್ಜೋಡ್ನಲ್ಲಿ ಕಲಬುರಗಿ ಕೆಸಿಟಿ ಇಂಜಿನಿಯರಿಂಗ್ ಕಾಲೇಜು ವಿನ್ನರ್, ಶರಣಬಸವ ವಿವಿ ರನ್ನರ್, ಪಾಪ್ಸಿಕಲ್ ಮಾಡೆಲ್ ಮೇಕಿಂಗ್ (ಸಿವಿಲ್) ಬೀದರ್ ಗುರುನಾನಕದೇವ ಇಂಜಿನಿಯರಿಂಗ್ ಕಾಲೇಜು ವಿನ್ನರ್, ಕಲಬುರಗಿ ಕೆಸಿಟಿ ರನ್ನರ್ ಆಗಿದೆ.
ಕಲಾ ಚಿತ್ರಣ ವಿಭಾಗದಲ್ಲಿ ಸ್ಪಾಟ್ ಫೋಟೋಗ್ರಾಫಿಯಲ್ಲಿ ಶರಣಬಸವ ವಿವಿ ವಿನ್ನರ್, ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ರನ್ನರ್, ಶಾರ್ಟ್ ಫಿಲ್ಮ್ನಲ್ಲಿ ಬಳ್ಳಾರಿಯ ಆರ್ಬಿವೈಎಂ ಕಾಲೇಜು ವಿನ್ನರ್, ಶರಣಬಸವ ವಿವಿ ರನ್ನರ್, ಸ್ಕೆಚ್ ಆರ್ಟ್ನಲ್ಲಿ ಕಲಬುರಗಿ ಪಿಡಿಎ ವಿನ್ನರ್, ಶರಣಬಸವ ವಿವಿ ರನ್ನರ್, ಪೇಂಟಿಂಗ್ನಲ್ಲಿ ಕಲಬುರಗಿ ಪಿಡಿಎಸ್ಎಸ್ಎಸ್ ವಿನ್ನರ್, ವಿಟಿಯು ಸಿಪಿಜಿಎಸ್ ರನ್ನರ್, ಸೆಲ್ಫಿ ಪಾಯಿಂಟ್ನಲ್ಲಿ ಹೊಸಪೇಟೆಯ ಪಿಡಿಐಟಿ ವಿನ್ನರ್, ಭಾಲ್ಕಿಯ ಬಿಕೆಐಟಿ ರನ್ನರ್ಅಪ್ ಪಡೆದುಕೊಂಡಿದೆ.
ಕಲ್ಚರಲ್ ವಿಭಾಗದ ಸಿಂಗಿಂಗ್ ಸೋಲೊದಲ್ಲಿ ವಿಟಿಯು ಸಿಪಿಜಿಎಸ್ ವಿನ್ನರ್, ಕಲಬುರಗಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರನ್ನರ್, ಸಮೂಹ ಗಾಯನದಲ್ಲಿ ಭಾಲ್ಕಿ ಬಿಕೆಐಟಿ ವಿನ್ನರ್, ಬಳ್ಳಾರಿಯ ಬಿಐಟಿಎಂ ರನ್ನರ್, ಡಾನ್ಸ್ ಸೋಲೊದಲ್ಲಿ ಶರಣಬಸವ ವಿವಿ ವಿನ್ನರ್, ಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ಸ್ಕೂಲ್ ಆಫ್ ಆರ್ಕಿಟೆಕ್ಚರ್ ರನ್ನರ್, ಸಮೂಹ ನೃತ್ಯದಲ್ಲಿ ಭಾಲ್ಕಿಯ ಬಿಕೆಐಟಿ ವಿನ್ನರ್, ಶರಣಬಸವ ವಿವಿ ರನ್ನರ್, ರ್ಯಾಂಪ್ ವಾಕ್ನಲ್ಲಿ ಭಾಲ್ಕಿ ಬಿಕೆಐಟಿ ವಿನ್ನರ್, ಬೀದರ್ ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜು ರನ್ನರ್ ಅಪ್ ಆಗಿದೆ.
ಮ್ಯಾನೇಜ್ಮೆಂಟ್ ವಿಭಾಗದ ಬೆಸ್ಟ್ ಮ್ಯಾನೇಜರ್ ಸ್ಪರ್ಧೆಯಲ್ಲಿ ಬಳ್ಳಾರಿಯ ಬಿಐಟಿಎಂ ವಿನ್ನರ್, ಶರಣಬಸವ ವಿವಿ ರನ್ನರ್, ಫೈನಾನ್ಸ್ನಲ್ಲಿ ಭಾಲ್ಕಿ ಬಿಕೆಐಟಿ ವಿನ್ನರ್, ಬಳ್ಳಾರಿಯ ಬಿಐಟಿಎಂ ರನ್ನರ್, ಎಚ್ಆರ್ನಲ್ಲಿ ಬಳ್ಳಾರಿಯ ಬಿಐಟಿಎಂ ವಿನ್ನರ್, ಗುಲ್ಬರ್ಗ ವಿವಿ ರನ್ನರ್, ಸ್ಟಾರ್ಟಪ್ ಸ್ಪರ್ಧೆಯಲ್ಲಿ ಬಳ್ಳಾರಿಯ ಬಿಐಟಿಎಂ ವಿನ್ನರ್, ಭಾಲ್ಕಿಯ ಬಿಕೆಐಟಿ ರನ್ನರ್, ಮಾರ್ಕೆಟಿಂಗ್ನಲ್ಲಿ ಬಳ್ಳಾರಿಯ ಬಿಐಟಿಎಂ ವಿನ್ನರ್, ಕಲಬುರಗಿ ಶರಣಬಸವ ವಿವಿ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.
ಗೇಮ್ಜೋನ್ ವಿಭಾಗದ ಬಿಜಿಎಂಐನಲ್ಲಿ ಕಲಬುರಗಿ ಕೆಬಿಎನ್ ವಿವಿ ವಿನ್ನರ್ ಮತ್ತು ರನ್ನರ್, ಮಿಷನ್ ತಲಾಶ್ನಲ್ಲಿ ಬೀದರ್ ಜಿಎನ್ಡಿಇಸಿ ವಿನ್ನರ್, ರಾಯಚೂರು ಎನ್ಐಟಿ ರನ್ನರ್, ಎಕ್ಸ್ಯಾರ್ಡ್ನಲ್ಲಿ ಬೀದರ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಿನ್ನರ್, ಭಾಲ್ಕಿ ಬಿಕೆಐಟಿ ರನ್ನರ್ಅಪ್ ಗಳಿಸಿದೆ.
ಎಂಎಲ್ಸಿ ಶಶೀಲ್ ನಮೋಶಿ ಸಲಹೆ
ಜಾಗತಿಕ ಬದಲಾವಣೆ ಜತೆ ಹೊಂದಿಕೊಳ್ಳಿ
ಜಾಗತಿಕ ಬದಲಾವಣೆಯೊಂದಿಗೆ ಹೊಂದಿಕೊಳ್ಳುವುದು ಇಂದಿನ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಹೇಳಿದರು. ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಎರಡು ದಿನದ ಯುಕ್ತಿ&2026 ಸಾಂಸತಿಕ ಉತ್ಸವ ಸಮಾರೋಪದಲ್ಲಿ ಮಾತನಾಡಿದ ಅವರು, ವಿಾನ ತಂತ್ರಾನ ಸೇರಿ ವಿಶ್ವದಲ್ಲಿ ಅಪಾರ ಬದಲಾವಣೆಗಳಾಗುತ್ತಿವೆ. ಕೃತಕ ಬುದ್ಧಿಮತ್ತೆ ಮನೆ ಮಾತಾಗಿದೆ. ವಿಶ್ವವ್ಯಾಪಿ ಆಗುತ್ತಿರುವ ಈ ಬದಲಾವಣೆಗಳ ಜತೆ ಹೊಂದಿಕೊಳ್ಳಲು ಅಗತ್ಯ ಕೌಶಲ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಿಟಿಯು ಪ್ರಾದೇಶಿಕ ನಿರ್ದೇಶಕಿ ಡಾ.ಶುಭಾಂಗಿ ಡಿ.ಸಿ., ಕಾರ್ಯಕಾರಿ ಮಂಡಳಿ ಸದಸ್ಯ ಮಹಾಂತೇಶ ಕೌಲಗಿ ಮಾತನಾಡಿದರು. ಯುಕ್ತಿ ಮುಖ್ಯ ಸಂಯೋಜಕ ಡಾ.ಬಸವರಾಜ ಗಾದಗೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ, ದೊಡ್ಡಪ್ಪ ನಿಷ್ಠಿ, ಉದಯಶಂಕರ ಶೆಟ್ಟಿ, ದಿಲೀಪಕುಮಾರ ತಾಳಂಪಳ್ಳಿ, ಡಾ.ಅಂಬ್ರೇಶ್ ಭದ್ರಶೆಟ್ಟಿ ಇತರರಿದ್ದರು. ಆರ್.ಜೆ. ವಾಣಿ, ಆರ್.ಜೆ. ಮಂಜು ನಿರೂಪಣೆ ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಜೆ ನಡೆದ ಸಾಂಸತಿಕ ಕಾರ್ಯಕ್ರಮದಲ್ಲಿ ರ್ಯಾಂಪ್ ವಾಕ್ ಸೋಲೊ ಮತ್ತು ಗ್ರುಪ್, ಡಾನ್ಸ್ ಸೋಲೊ ಮತ್ತು ಗ್ರುಪ್, ಹಾಡುಗಾರಿಕೆ ಸೇರಿ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳು ಸಭಿಕರನ್ನು ರಂಜಿಸಿದರು.
ಅಧ್ಯಯನಕ್ಕೆ ಆದ್ಯತೆ ಜತೆ ಸಂಸ್ಕೃತಿಕ ಮತ್ತು ಕ್ರೀಡೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ತಮ್ಮಲ್ಲಿರುವ ಸುಪ್ತ ಪ್ರತಿಭೆ ಹೊರಹಾಕಬೇಕು. ವಿಟಿಯು ಆಯೋಜಿಸಿದ ಯುಕ್ತಿ ಕಾರ್ಯಕ್ರಮದಲ್ಲಿ ಕರ್ನಾಟಕದದ 18 ಇಂಜಿನಿಯರಿಂಗ್ ಕಾಲೇಜುಗಳು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿರುವುದು ಆರೋಗ್ಯಕರ ಬೆಳವಣಿಗೆ.
ವಿಟಿಯು ಕಾರ್ಯಕಾರಿ ಮಂಡಳಿ ಸದಸ್ಯ
ವಿಟಿಯು ಆಯೋಜಿಸಿದ್ದ ಯುಕ್ತಿ ಕಾರ್ಯಕ್ರಮದ ಆರೋಗ್ಯಕರ ಸ್ಪರ್ಧೆಗಳಲ್ಲಿ ಕಲ್ಯಾಣ ಭಾಗದ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಪ್ರತಿಭೆ ಹೊರಹಾಕಿದ್ದಾರೆ. ಸೋಲು ಗೆಲುವು ಮುಖ್ಯವಲ್ಲ. ಸಂಸ್ಕೃತಿಕ, ಕ್ರೀಡೆಗಳಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಸಾಧನೆ ಮಾಡಲು ಸಾಧ್ಯ.
ಪ್ರಾದೇಶಿಕ ನಿರ್ದೇಶಕಿ, ವಿಟಿಯು ಕಲಬುರಗಿ