ಆನೇಕಲ್ : ಬ್ಯಾಗಡದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸೊಪ್ಪಹಳ್ಳಿ ಹಾಗೂ ಕಮ್ಮಸಂದ್ರ ಅಗ್ರಹಾರ, ದೊಡ್ಡಹಾಗಡೆ ಸುತ್ತಮುತ್ತ ಎರಡು ದಿನದಿಂದ ಕಾಡೆಮ್ಮೆ ಓಡಾಡುತ್ತಿದ್ದು, ಕಾಡೆಮ್ಮೆ ನೋಡಲು ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ. ಇದರಿಂದ ಭಯಪಟ್ಟು ಕಾಡೆಮ್ಮೆ ಒಂದೆಡೆಯಿಂದ ಇನ್ನೊಂದೆಡೆ ಓಡಾಡುತ್ತಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಜನರನ್ನು ನೋಡಿ ಭಯಪಟ್ಟಿರುವ ಕಾಡೆಮ್ಮೆ ಆಗಾಗ ಬೈಕ್ಗಳನ್ನು ಗುದ್ದಿ ದ್ವಂಸ ಮಾಡುತ್ತಿದ್ದು, ಕೆಲ ಕಾಲ ಆತಂಕ ಮನೆಮಾಡಿತ್ತು. ಗುರುವಾರ ಬೆಳಗ್ಗೆ ಗ್ರಾಮದ ಬಡಾವಣೆಗೆ ನುಗ್ಗಿ ಒಂದು ಬೈಕ್ ಅನ್ನು ಕೊಂಬಿನಿಂದ ಎತ್ತಿ ಎಸೆದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯರು ಸ್ಥಳಕ್ಕೆ ಆಗಮಿಸಿದ್ದು, ಕಾಡೆಮ್ಮೆ ಹಿಡಿಯುವುದಿರಲಿ, ಅದರ ಹತ್ತಿರವೂ ಹೋಗಲು ಬಿಡುತ್ತಿಲ್ಲ.
ಇದೇ ಕಾಡೆಮ್ಮೆ ಎರಡು ದಿನದ ಹಿಂದೆ ಆನೇಕಲ್ನ ಸೊಪ್ಪಳ್ಳಿ ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಡಿದರೂ ಸಿಕ್ಕಿರಲಿಲ್ಲ. ಗುರುವಾರ ಕಮ್ಮಸಂದ್ರ ಅಗ್ರಹಾರ ಬಳಿ ಪ್ರತ್ಯಕ್ಷವಾಗಿದೆ. ಕಾಡೆಮ್ಮೆ ಕೆರೆ ಕಟ್ಟೆಯ ಬಳಿ ಪೊದೆಗಳಲ್ಲಿ ಸೇರಿಕೊಂಡಿದ್ದು, ಅರಿವಳಿಕೆ ನೀಡುವುದೂ ವೈದ್ಯರಿಗೆ ದೊಡ್ಡ ಸವಾಲಾಗಿದೆ.
ಕಾರ್ಯಾಚರಣೆ ಬಂದ್ : ಬೆಳಗ್ಗೆ ಮೂರು ಗಂಟೆಗೆ ಬಂದ ಪಶು ವೈದ್ಯರು ಅರಿವಳಿಕೆ ಇಲ್ಲ, ಮೈಸೂರಿನಿಂದ ಬರಬೇಕೆಂದು ಹೇಳಿದರು. ಅನಂತರ ಮೈಸೂರಿನಿಂದ ಸಂಜೆ 6 ಗಂಟೆಗೆ ವೈದ್ಯರು ಬಂದಿದ್ದು, ಕತ್ತಲಾದ್ದರಿಂದ ಕಾಡೆಮ್ಮೆ ಕಾರ್ಯಾಚರಣೆ ಸಾಧ್ಯವಿಲ್ಲವೆಂದು ವಾಪಸ್ ಹೋಗಿದ್ದಾರೆ. ಡಿಎ್ಒ, ಆರ್ಎಫ್ಒ ಸಹ ಕನಿಷ್ಠ ಸ್ಥಳಕ್ಕೂ ಬಂದಿಲ್ಲ ಎಂಬ ಆರೋಪ ಗಾಮಸ್ಥರದ್ದಾಗಿದೆ.