ನೆಲಮಂಗಲದಪವಾಡ ಶ್ರೀ ಬಸವಣ್ಣ ದೇವರ ಮಠದ ಅಧ್ಯಕ್ಷಶ್ರೀ ಸಿದ್ಧಲಿಂಗಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಶಾಸಕ ಎನ್​.ಶ್ರೀನಿವಾಸ್​ ಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ಶುಭಕೋರಿದರು. ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು ಇತರರು ಇದ್ದರು. 
ರಾಜ್ಯ

ಬಸವಣ್ಣದೇವರ ಮಠದ ಶ್ರೀಗಳಿಗೆ ಜನ್ಮದಿನ ಸಂಭ್ರಮ / NELAMANGAL

ನೆಲಮಂಗಲ : ನಗರದ ಪವಾಡಶ್ರೀ ಬಸವಣ್ಣ ದೇವರ ಮಠದ ಅಧ್ಯಕ್ಷಶ್ರೀ ಸಿದ್ದಲಿಂಗಸ್ವಾಮೀಜಿ ಅವರ ಜನ್ಮದಿನದ ಪ್ರಯುಕ್ತ ಮಠದ ವಿದ್ಯಾರ್ಥಿಗಳು, ಭಕ್ತರು ಭಕ್ತಿ ನಮನ ಸಲ್ಲಿಸಿ ಆಶೀರ್ವಾದ ಪಡೆದರು.
ಭಾನುವಾರ ಬೆಳಗ್ಗೆ ಇಷ್ಟ್ಟಲಿಂಗ ಪೂಜೆ ಬಳಿಕ ಶ್ರೀಗಳು ಪವಾಡ ಶ್ರೀ ಬಸವಣ್ಣದೇವರ ಗುದ್ದುಗೆ, ಲಿಂಗೈಕ್ಯ ಶ್ರೀ ಮರುಳಸಿದ್ದೇಶ್ವರ ಹಾಗೂ ಲಿಂ. ಶ್ರೀ ಸದಾಶಿವ ಸ್ವಾಮೀಜಿ ಮತ್ತು ಅಕ್ಕ ಮಹಾದೇವಿ ಮೂರ್ತಿಗೆ ಪೂಜೆ ಸಲ್ಲಿಸಿದರು. ನಂತರ ಶ್ರೀ ಮಠದ ವಿದ್ಯಾರ್ಥಿಗಳು ಹಾಗೂ ಭಕ್ತರು ಶ್ರೀಗಳ ಜನ್ಮದಿನದ ಅಂಗವಾಗಿ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಿದರು.
ನಗರ, ತಾಲೂಕು ಸೇರಿ ದೊಡ್ಡಬಳ್ಳಾಪುರ, ಬೆಂಗಳೂರು ಉತ್ತರ, ರಾಮಗನರ, ಮಾಗಡಿಯಿಂದಲೂ ಆಗಮಿಸಿದ್ದ ನೂರಾರು ಭಕ್ತರು ಶ್ರೀಗಳಿಗೆ ಶುಭ ಕೋರಿ ಆಶೀರ್ವಾದ ಪಡೆದುಕೊಂಡರು.
ಶಾಸಕ ಎನ್​.ಶ್ರೀನಿವಾಸ್​, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ಮಾಜಿ ಅಧ್ಯಕ್ಷ ಎಸ್​.ಮಲ್ಲಯ್ಯ, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ನಿಟಕ ಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಹಾಗೂ ಇತರರು ಶ್ರೀಮಠಕ್ಕೆ ಭೇಟಿ ನೀಡಿ ಶುಭಕೋರಿದರು. ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರಾದ ರುದ್ರಮಹೇಶ, ನೀಲಾ, ದೇವರಾಜು, ಉಪನ್ಯಾಸಕ ಪ್ರದಿಪ್​, ಹೇಮಂತ್​, ಶಿಕ್ಷಕ ಅಭಿ,ಜ್ಞಾನೇಶ್​ ಇದ್ದರು.