ಗುಲ್ಬರ್ಗ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಬೆಳ್ಳಿ ಮಹೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರೊ.ಎ.ಎಚ್​.ರಾಜಾಸಾಬ್​, ಪ್ರೊ.ಶಶಿಕಾಂತ ಉಡಿಕೇರಿ, ಪ್ರೊ.ರಮೇಶ ಲಂಡನಕರ್​, ಪ್ರೊ.ಎಂ.ಬಿ.ಸುಲೋಚನಾ, ಪ್ರೊ.ಕೆಳಮನಿ ಚಂದ್ರಕಾಂತ, ಪ್ರೊ.ಜಿ.ಎಂ.ವಿದ್ಯಾಸಾಗರ್​, ಪ್ರೊ.ಪ್ರಕಾಶ್​ ಕರಿಯಜ್ಜನವರ್​, ಪ್ರೊ.ವಿಜಯಕುಮಾರ ಮಲಶೆಟ್ಟಿ, ಪೊ.ಶಶಿಕಾಂತ ಮಜ್ಜಿಗೆ, ಪೊ.ಕೆ.ಲಿಂಗಪ್ಪ, ಪೊ.ಶಿವಣ್ಣ ಇತರರಿದ್ದರು. 
ರಾಜ್ಯ

ಸುಸ್ಥಿರ ಸಾಧನೆಗೆ ಜೈವಿಕ ತಂತ್ರಜ್ಞಾನ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಪ್ರೊ.ಎ.ಎಚ್​.ರಾಜಾಸಾಬ್​ ಅಭಿಮತ
  • ಗುಲ್ಬರ್ಗ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ
ಕಲಬುರಗಿ: ಮಾನವ ಜೀವಿಯ ಸುರಕ್ಷತೆ ಮತ್ತು ಸುಸ್ಥಿರ ಸಾಧನೆಗೆ ಜೈವಿಕ ತಂತ್ರಜ್ಞಾನದ ಕೊಡುಗೆ ಅಪಾರ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎ.ಎಚ್​. ರಾಜಾಸಾಬ್​ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಬೆಳ್ಳಿ ಮಹೋತ್ಸವ ನಿಮಿತ್ತ ಸಸ್ಯಶಾಸ ವಿಭಾಗದ ಬೋಸ್​ ಹಾಲ್​ನಲ್ಲಿ ಶನಿವಾರ ಆಯೋಜಿಸಿದ್ದ ಜೈವಿಕ ತಂತ್ರಜ್ಞಾನ ಸುಸ್ಥಿರ ಅಭಿವೃದ್ಧಿ ಗುರಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ತಲುಪಲು ಸಸ್ಯ ಮತ್ತು ಪ್ರಾಣಿ ಸಂಪತ್ತು ಪುನಶ್ಚೇತನಗೊಳಿಸುವುದು ನಮ್ಮ ಆದ್ಯತೆಯಾಗಬೇಕು ಎಂದರು.
ತಂತ್ರಜ್ಞಾನದ ಹೊಸ ನಾವೀನ್ಯತೆ ಒಳಗೊಂಡ ಕ್ರಿಸ್ಪರ್​&ಡಿಎನ್​ಎ ಟೆಕ್ನಾಲಜಿ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಯಶಸ್ವಿಯಾಗಿ ಬಳಸಿಕೊಂಡರೆ ಜೈವಿಕ ವಿಜ್ಞಾನ ೇತ್ರದಲ್ಲಿ ಮತ್ತಷ್ಟು ಏಳಿಗೆ ಸಾಧ್ಯ. ಜೀವ ವಿಜ್ಞಾನ ವಿವಿಧ ಆಯಾಮಗಳ ವೈಜ್ಞಾನಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆ ಮೂಲಕ ಅಸಾಧ್ಯವನ್ನೂ ಸಾಧಿಸಬಹುದು. ವಿಶ್ವಸಂಸ್ಥೆ ಯೋಜಿಸಿರುವ 17 ಗುರಿಗಳ ಪಾಲನೆಯಿಂದ ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ನೀರು, ಪರಿಸರ ಸಂರಕ್ಷಣೆ ಜತೆ ಸುಸ್ಥಿರ ಅಭಿವೃದ್ಧಿಗಾಗಿ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಮೂಲಕ ದೇಶದ ಹಿತ ಕಾಪಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಎಸ್​.ಉಡಿಕೇರಿ ಮಾತನಾಡಿ, ಜೈವಿಕ ತಂತ್ರಜ್ಞಾನ ವಿಭಾಗದ ಬೆಳ್ಳಿ ಹಬ್ಬ, ವಿದ್ವಾಂಸರ ಉಪನ್ಯಾಸ ಮತ್ತು ಹಳೆಯ ವಿದ್ಯಾರ್ಥಿಗಳ ಆಗಮನ ಸಂತಸ ಮೂಡಿಸಿದೆ. ವಿಜ್ಞಾನ ಬೆಳೆದಂತೆ ಜೈವಿಕ ತಂತ್ರಜ್ಞಾನ ೇತ್ರವೂ ವ್ಯಾಪಕವಾಗಿ ಬೆಳೆದಿದೆ. ಕೃಷಿ ಕ್ರಾಂತಿ ನಂತರ ಕೃಷಿ, ಬೇಸಾಯ ಕ್ರಮಗಳಲ್ಲಿ ವೈಜ್ಞಾನಿಕತೆ ಬಂದಿದೆ. ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಲ್ಲಿ ಸುಧಾರಣೆ ಆಗಿದೆ ಎಂದು ಹೇಳಿದರು.
ವಿಚಾರ ಸಂಕಿರಣದ ಸ್ಮರಣಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಸಂಟನಾ ಕಾರ್ಯದರ್ಶಿ ಪ್ರೊ.ಎಂ.ಬಿ. ಸುಲೋಚನಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಹ ಸಂಯೋಜಕ ಪ್ರೊ.ಕೆಳಮನಿ ಚಂದ್ರಕಾಂತ ಅತಿಥಿ ಗಣ್ಯರನ್ನು ಪರಿಚಯಿಸಿದರು. ಪವಿತ್ರಾ ಪ್ರಾರ್ಥಿಸಿದರು. ತಭೀತ ತಳ್ಳೊಳ್ಳಿ ನಿರೂಪಣೆ ಮಾಡಿದರು. ಡಾ.ರಾಜೇಶ್ವರಿ ವಂದಿಸಿದರು.
ಕುಲಸಚಿವ ಪ್ರೊ.ರಮೇಶ ಲಂಡನಕರ್​, ಪ್ರೊ.ಜಿ.ಎಂ. ವಿದ್ಯಾಸಾಗರ್​, ಪ್ರೊ.ಪ್ರಕಾಶ್​ ಕರಿಯಜ್ಜನವರ್​, ಪ್ರೊ.ವಿಜಯಕುಮಾರ ಮಲಶೆಟ್ಟಿ, ಪೊ.ಶಶಿಕಾಂತ ಮಜ್ಜಿಗೆ, ನಿವೃತ್ತ ಪ್ರಾಧ್ಯಾಪಕ ಪೊ.ಕೆ.ಲಿಂಗಪ್ಪ, ಪೊ.ಶಿವಣ್ಣ ಇತರರಿದ್ದರು. ಸಂಶೋಧಕರು, ವಿದ್ವಾಂಸರು, ಪ್ರಾಧ್ಯಾಪಕರು, ಶಿಕ್ಷಣ ತರು, ಉದ್ದಿಮೆದಾರರು ಹಾಗೂ ಕೈಗಾರಿಕೋದ್ಯಮಿಗಳು ಸಂಶೋಧನಾ ಪ್ರಬಂಧ ಮಂಡಿಸಿದರು.
"

ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಆಹ್ವಾನಿಸಿರುವುದು ತವರು ಮನೆಗೆ ಬಂದಷ್ಟೇ ಸಂತಸವಾಗಿದೆ. ಇದೇ ವಿಭಾಗದ ಉಪನ್ಯಾಸಕ ವೃತ್ತಿ ಕುಲಪತಿ ಹಾಗೂ ಕೆಎಸ್​ಟಿಎ ಮುಖ್ಯಸ್ಥ ಸ್ಥಾನದವರೆಗೆ ನನ್ನನ್ನು ಬೆಳೆಸಿದೆ. ನೂರಾರು ಕಾರ್ಯಕ್ರಮ, ವಿಚಾರ ಸಂಕಿರಣ ಆಯೋಜಿಸಿರುವ ನೆನಪುಗಳು ಇಂದಿಗೂ ಹಸಿರಾಗಿವೆ.

— > ಪೊ.ಎ.ಎಚ್​.ರಾಜಾಸಾಬ್​ ಅಧ್ಯಕ್ಷ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ