ಮಸ್ಕಿ ಗಾಂಧಿನಗರದ ಡಾ.ಅಂಬೇಡ್ಕರ್ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ದಿ.ಪ್ರೊ.ಬಿ.ಕೃಷ್ಣಪ್ಪ ಜನ್ಮದಿನ ಕಾರ್ಯಕ್ರಮದಲ್ಲಿ ಸಾಹಿತಿ ಸಿ. ದಾನಪ್ಪ, ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ, ಪುರಸಭೆ ಸದಸ್ಯರಾದ ದೊಡ್ಡ ಕರಿಯಪ್ಪ, ಮೌನೇಶ ಮುರಾರಿ ಇತರರಿದ್ದರು.
ಮಸ್ಕಿ: ಪ್ರೊ.ಬಿ.ಕೃಷ್ಣಪ್ಪ ಅವರು ದಲಿತರ ಪರವಾಗಿ ಹೋರಾಡಿದ, ದಲಿತರಿಗಾಗಿ ಬದುಕು ಮೀಸಲಿಟ್ಟ ಧೀಮಂತ ನಾಯಕರಾಗಿದ್ದರು ಎಂದು ಅವರ ಒಡನಾಡಿ ಹಾಗೂ ಸಾಹಿತಿ ಸಿ. ದಾನಪ್ಪ ಹೇಳಿದರು.
ವಿವಿಧ ದಲಿತ ಪರ ಸಂಘಟನೆಗಳಿಂದ ಗಾಂಧಿನಗರದ ಅಂಬೇಡ್ಕರ್ ಉದ್ಯಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೋರಾಟಗಾರ ದಿ.ಪ್ರೊ.ಬಿ.ಕೃಷ್ಣಪ್ಪ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುವ ಪೀಳಿಗೆ ಹೋರಾಟಗಾರರ ಜೀವನ ಚರಿತ್ರೆಯನ್ನು ಅರಿತು ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರಮುಖರಾದ ದುರ್ಗಾಪ್ರಸಾದ ತೊರಣದಿನ್ನಿ, ಕಾಶೀಮಪ್ಪ ಮುರಾರಿ, ಬಾಲಸ್ವಾಮಿ ಜಿನ್ನಾಪುರ, ಮರಿಸ್ವಾಮಿ ಬೆನಕನಾಳ ಇತರರಿದ್ದರು.