ಸೂಲಿಬೆಲೆ ಬಸ್​ ನಿಲ್ದಾಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ ಹಾಗೂ ಪಾಲಕರ ಶಿಕ್ಷಕರ ಮಹಾಸಭೆಯನ್ನು ಡಯಟ್​ ಉಪನ್ಯಾಸಕಿ ಪದ್ಮಾವತಿ, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ ಉದ್ಘಾಟಿಸಿದರು. ಶಾಲಾ ಅಧ್ಯಕ್ಷ ನಾಗರಾಜ್​, ಮುಖ್ಯಶಿಕ್ಷಕಿ ಸುಮಿತ್ರಮ್ಮ, ಜೇನುಗೂಡು ಟ್ರಸ್ಟ್​ನ ಬೆಟ್ಟಹಳ್ಳಿ ಗೋಪಿನಾಥ್​ ಇತರರು ಇದ್ದರು. 
ರಾಜ್ಯ

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಪಠ್ಯಕ್ರಮ / SULIBELE

ಸೂಲಿಬೆಲೆ : ಪಾಲಕರಲ್ಲಿರುವ ಆಂಗ್ಲ ಭಾಷಾ ವ್ಯಾಮೋಹ ತೊಡೆದುಹಾಕಲು ಸರ್ಕಾರಿ ಶಾಲೆಗಳಲ್ಲೂ ಕಡ್ಡಾಯವಾಗಿ ದ್ವಿ&ಭಾಷಾ ಪಠ್ಯಕ್ರಮ ಅಳವಡಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಯಟ್​ ಉಪನ್ಯಾಸಕಿ ಪದ್ಮಾವತಿ ಹೇಳಿದರು.
ಸೂಲಿಬೆಲೆ ಬಸ್​ ನಿಲ್ದಾಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ, ಪಠ್ಯಪುಸ್ತಕ ವಿತರಣೆ ಹಾಗೂ ಪಾಲಕರು& ಶಿಕ್ಷಕರ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಸೂಲಿಬೆಲೆ ಬಸ್​ಸ್ಟಾ$ಂಡ್​ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್​ಕೆಜಿಯಿಂದ 9ನೇ ತರಗತಿವರೆಗೆ ಕಲಿಯಲು ಅವಕಾಶ ಮಾಡಿಕೊಡಲಾಗಿದ್ದು, ಮುಂದಿನ ವರ್ಷದಿಂದ 10ನೇ ತರಗತಿ ಪ್ರಾರಂಭವಾಗಲಿದೆ ಎಂದರು.
ಗ್ರಾಪಂಅಧ್ಯಕ್ಷ ಜನಾರ್ಧನರೆಡ್ಡಿ ಮಾತನಾಡಿ, ಪಾಲಕರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವ ಮೂಲಕ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದರು.
ಮುಖ್ಯಶಿಕ್ಷಕಿ ಸುಮಿತ್ರಮ್ಮ ಮಾತನಾಡಿ, ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಕೇವಲ ಶಿಕ್ಷಕರಿಗೆ ಮಾತ್ರ ಸೀಮಿತವಲ್ಲ. ಪಾಲಕರು ಮತ್ತು ಶಿಕ್ಷಕರ ಹೊಣೆಗಾರಿಕೆ ನಿಭಾಯಿಸಬೇಕು. ಸರ್ಕಾರಿ ಶಾಲೆಗಳ ಸವಲತ್ತುಗಳು ಸದುಪಯೋಗವಾಗಬೇಕು ಎಂದರು.
ಎಸ್​ಡಿಎಂಸಿ ಅಧ್ಯಕ್ಷ ನಾಗರಾಜ ಮಾತನಾಡಿ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬದ್ಧರಾಗಿದ್ದೇವೆ ಎಂದರು. ಎಸ್​ಡಿಎಂಸಿ ಉಪಾಧ್ಯಕ್ಷೆ ಸಮಿತಾ, ಮುಖ್ಯಶಿಕ್ಷಕಿ ಸುಮಿತ್ರಮ್ಮ, ಸದಸ್ಯರಾದ ಶ್ರೀನಿವಾಸ್​, ನರಸಿಂಹಮೂರ್ತಿ, ಪಾರ್ವತಮ್ಮ, ಜೇನುಗೂಡು ಟ್ರಸ್ಟ್​ ನಿರ್ದೇಶಕ ಸೈಯದ್​ ಮಹಬೂಬ್​, ನಯಾಜ್​ಖಾನ್​, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್​, ಶಿಕ್ಷಕರಾದ ಸೌಮ್ಯಾ, ರಾಧಿಕಾ, ಶಿಲ್ಪಾ ಇದ್ದರು.