- ಸಂಕೇಶ್ವರ ಪೊಲೀಸರಿಂದ ಬೈಕ್ ಕಳ್ಳರ ಬಂಧನ
- ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿದ್ದ ಕಳ್ಳರು
- ಬಂಧಿತರಿಂದ ೧೪ ಬೈಕ್ ಜಪ್ತಿ
ಬೈಕ್ ಕಳ್ಳರ ಬಂಧನ: 14 ದ್ವಿಚಕ್ರ ವಾಹನ ಜಪ್ತಿ
ಸಂಕೇಶ್ವರ : ಜಿಲ್ಲೆಯ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಕಳ್ಳರ ತಂಡವನ್ನು ಪತ್ತೆ ಹಚ್ಚುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದು,ಆರೋಪಿತರಿಂದ ಒಟ್ಟು 14 ದ್ವಿಚಕ್ರ ವಾಹನಗಳನ್ನು ವಶ ಪಡಿಸಲಾಗಿದೆ.
ಸಂಕೇಶ್ವರ ಪೊಲೀಸ್ ಠಾಣಾ ವಾಪ್ತಿಯಲ್ಲಿ ಈಚೆಗೆ ನಡೆದ ಎರಡು ಪ್ರತ್ಯೇಕ ಬೈಕ್ ಕಳ್ಳತನ ಪ್ರಕರಣ ಕುರಿತು ದಾಖಲಾದ ಪ್ರಕರಣದ ತನಿಖೆ ನಡೆಸಿ ಆರೋಪಿಗಳಾದ ಸುಮಿತ ಕಮ್ಮಾರ (೨೧),ಶಿವರಾಜ ಪಾಟೀಲ(೨೧),ಓಂಕಾರ ಕಡಲಗಿಕರ(೨೦), ಕಿರಣ ಕಮ್ಮಾರ(೧೮), ಅಮಿತ ಕೋಳಿ(೨೧),ಆನಂದ ಘಸ್ತಿ(೩೮) ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿರುವ ಒಟ್ಟು14 ಬೈಕ್‌ಗಳನ್ನು ವಶಕ್ಕೆ ಪಡೆದಿರುವ ಪ್ರಕರಣ ದಾಖಲಿಸಿಕೊಂಡ ಸಂಕೇಶ್ವರ ಪೋಲಿಸರು ತಿಳಿಸಿದ್ದಾರೆ.