Biker injured in collision with unknown vehicle
ಚಿಂತಾಮಣಿ: ಚಿಂತಾಮಣಿ-&ಶ್ರೀನಿವಾಸಪುರ ಹೆದ್ದಾರಿಯ ಬಳಿ ಗುರುವಾರ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡಿದ್ದಾನೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮುತ್ತುಕಪಲ್ಲಿಯ ಶ್ರೀರಾಮಪ್ಪ(44) ಗಾಯಗೊಂಡವರು.
ಚಿಂತಾಮಣಿಗೆ ತರಕಾರಿ ತರಲು ಬೆಳಗಿನ ಜಾವ ಬೈಕ್ನಲ್ಲಿ ಬರುತ್ತಿದ್ದಾಗ ಹೆದ್ದಾರಿಯ ಸಿದ್ಧಿಮಠ&ದೊಡ್ಡ ಗಂಜೂರು ಮಧ್ಯ ಅಪರಿಚಿತ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಬೈಕ್ ಸವಾರನಿಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.