Biker injured in car collision 
ರಾಜ್ಯ

ಕಾರು ಡಿಕ್ಕಿಯಾಗಿ ಬೈಕ್​ ಸವಾರನಿಗೆ ಗಾಯ

ಚಿಂತಾಮಣಿ: ರಾಜ್ಯ ಹೆದ್ದಾರಿ ಚಾಪುರ ಗೇಟ್​ ಬಳಿ ಕಾರು ಡಿಕ್ಕಿಯಾಗಿ ಬೈಕ್​ ಸವಾರ, ಶ್ರೀರಾಮಪುರ ನಿವಾಸಿ ನಾರಾಯಣಸ್ವಾಮಿ (57) ತೀವ್ರವಾಗಿ ಗಾಯಗೊಂಡಿದ್ದಾರೆ.
ನಾರಾಯಣಸ್ವಾಮಿ ಜು.17ರಂದು ಸಂಜೆ ಬೈಕ್​ನಲ್ಲಿ ಪೆರಮಾಚನಹಳ್ಳಿಗೆ ಟೀ ತರಲು ಹೋಗಿದ್ದರು. ವಾಪಸ್​ ಬರುವಾಗ ಸಂಜೆ ಚಾಪುರ ಗೇಟ್​ ದಾಟುವಾಗ ಬೆಂಗಳೂರು ಕಡೆಯಿಂದ ಬಂದ ಕಾರು ಬೈಕ್​ಗೆ ಡಿಕ್ಕಿಯಾಗಿದೆ.
ನಾರಾಯಣಸ್ವಾಮಿ ಎಡಗೈ, ಎರಡೂ ಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಸ್ಥಳಿಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್​ಎನ್​ಆರ್​ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.