Biker injured in accident
ಚಿಂತಾಮಣಿ: ನಾರಾಯಣಹಳ್ಳಿ ಬಳಿ ರಸ್ತೆ ಬದಿಯ ಸೇತುವೆಗೆ ಶನಿವಾರ ಬೈಕ್ ಡಿಕ್ಕಿಯಾಗಿ ಕಾಲುವೆಗೆ ಬಿದ್ದು, ಕೋಲಾರ ಜಿಲ್ಲೆ ಜಂಬಾಪುರದ ಸುರೇಶ್ (50) ಗಾಯಗೊಂಡಿದ್ದಾರೆ.
ಸುರೇಶ್ ಚಿಂತಾಮಣಿಯಿಂದ ನಾರಾಯಣಹಳ್ಳಿ ಮಾರ್ಗವಾಗಿ ಕೈವಾರಕ್ಕೆ ಬೈಕ್ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ತಡೆಗೊಡೆ ಮುರಿದು ಬೈಕ್ ಸಮೇತ ಕಾಲುವೆಗೆ ಬಿದ್ದಿದ್ದಾರೆ. ಅಪಘಾತದ ಬಗ್ಗೆ ಸ್ಥಳಿಯರು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸುರೇಶ್ ಅವರನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.