Biker injured after hitting bus
ಚಿಂತಾಮಣಿ: ಚಿಂತಾಮಣಿ& ಮುರುಗಮಲ್ಲಾ ಮುಖ್ಯರಸ್ತೆಯಲ್ಲಿ ಶನಿವಾರ ಸಂಜೆ ಖಾಸಗಿ ಬಸ್ನಹಿಂಬದಿಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದರಿಂದಸವಾರ ಗಾಯಗೊಂಡಿದ್ದಾನೆ.
ಶಿಡ್ಲಘಟ್ಟ ತಾಲೂಕಿನ ಆಜಾದ್ ನಗರದ ನಿವಾಸಿ ಅತೀಕ್ ಪಾಷಾ (27) ಗಾಯಗೊಂಡವರು. ಗಾಯಾಳು ಚಿಂತಾಮಣಿ ಮಾರ್ಗವಾಗಿ ಮುರಗಮಲ್ಲಾಗೆ ತೆರಳುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.