ಕಳ್ಳನ ಬಂಧನ 
ರಾಜ್ಯ

ಬೈಕ್ ಕಳ್ಳನ ಬಂಧನ

ಧರ್ಮರಾಜ ರಾಮನಗೌಡ ಪಾಟೀಲ
ಹುಕ್ಕೇರಿ: ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಬೆಲ್ಲದ ಬಾಗೇವಾಡಿಯ ಉಮೇಶ ಗಾಡಿವಡ್ಡರನನ್ನು ಪಟ್ಟಣದಲ್ಲಿ ಮಂಗಳವಾರ ಬಂಧಿಸಿ 60 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನ ಹಾಗೂ 1 ಟ್ರ್ಯಾಕ್ಟರ್ ಟ್ರಾಲಿ ವಶಪಡಿಸಿಕೊಂಡಿದ್ದಾರೆ.
ಹುಕ್ಕೇರಿ, ಗೋಕಾಕ, ನಿಪ್ಪಾಣಿ ಭಾಗದಲ್ಲಿ ಬೈಕ್ ಕಳ್ಳತನ ಮಾಡಿದ್ದ ಎಂದು ಸಿಪಿಐ ಮಹಾಂತೇಶ ಬಸ್ಸಾಪುರ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ವಿಠ್ಠಲ ನಾಯಿಕ, ಸಿಬ್ಬಂದಿ ಅರ್ಜುನ ಮಸರಗುಪ್ಪಿ, ಮಂಜುನಾಥ ಕಬ್ಬೂರ, ಅಜಿತ ನಾಯಿಕ, ಎಸ್.ಎಂ.ಚಿಕ್ಕಣ್ಣವರ, ಕುಮಾರ ಕರೆನ್ನವರ ಪಾಲ್ಗೊಂಡಿದ್ದರು.