Bike parked in front of house stolen 
ರಾಜ್ಯ

ಮನೆ ಮುಂದೆ ನಿಲ್ಲಿಸಿದ್ದ ಬೈಕ್​ ಕಳವು

ಚಿಂತಾಮಣಿ: ತಾಲೂಕಿನ ಕರಿಯಪಲ್ಲಿ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ನ್ನು ಅಪರಿಚಿತರು ಕಳವು ಮಾಡಿದ್ದಾರೆ. ಗ್ರಾಮದ ನಿವಾಸಿ ಅಕ್ತರ್​ (34) ವಾಹನ ಕಳೆದುಕೊಂಡವರು.
ಜೂ.3ರಂದು ರಾತ್ರಿ ಅಕ್ತರ್​ ಕೆಲಸ ಮುಗಿಸಿಕೊಂಡು ಕರಿಯಪಲ್ಲಿ ಗ್ರಾಮದಲ್ಲಿ ಬಾಡಿಗೆಗೆ ಇರುವ ಮನೆ ಮುಂದೆ ವಾಹನ ನಿಲ್ಲಿಸಿದ್ದರು. ಜೂ.4ರ ಮುಂಜಾನೆ ನೋಡಿದಾಗ ಬೈಕ್​ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಜೂ.8ರಂದು ನಗರದ ಪೊಲೀಸ್​ ಠಾಣೆಗೆ ಅಕ್ತರ್​ ದೂರು ನೀಡಿದ್ದಾರೆ.