Bike parked in front of hotel stolen
ಚಿಂತಾಮಣಿ: ನಗರದ ಮಾರುತಿ ಸರ್ಕಲ್ ಬಳಿಯ ತನ್ನದೇ ಹೋಟೆಲ್ ಮುಂದೆ ಶೇಖ್ ಮುಬಾರಕ್ ಪಾಷಾ (38) ನಿಲ್ಲಿಸಿದ್ದ ಬೈಕ್ ಕಳುವಾಗಿದೆ. ಜು.9ರಂದು ಮುಬಾರಕ್ ಹೋಟೆಲ್ ಮುಂದೆ ಬೈಕ್ ನಿಲ್ಲಿಸಿ ಒಳಗೆ ಹೋಗಿದ್ದರು. ಮಧ್ಯಾಹ್ನ ಬಂದು ನೋಡಿದಾಗ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.