ಬೈಕಿಗೆ ಕಾರು ಡಿಕ್ಕಿಯಾಗಿ ಗಾಯ Bike hit by car
ಚಿಂತಾಮಣಿ: ಮದನಪಲ್ಲಿ&ಚಿಂತಾಮಣಿ ರಸ್ತೆಯ ಚೀಮನಹಳ್ಳಿ ಗೇಟ್ ಬಳಿ ಮುಂದೆ ಹೋಗುತ್ತಿದ್ದ ಬೈಕ್ಗೆ ಕಾರು ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಇಬ್ಬರು ಸವಾರರು ಮತ್ತು ಕಾರಿನಲ್ಲಿದ್ದ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.Bike hit by car
ಬೈಕ್ ಸವಾರರು ನಗರದ ಸೊಣ್ಣಶೆಟ್ಟಹಳ್ಳಿ ಬಡಾವಣೆಯ ನಿವಾಸಿಗಳಾದ ಚೆನ್ನಕೇಶವರೆಡ್ಡಿ ಮತ್ತು ನಾಗರಾಜ್, ಕಾರಿನ ಚಾಲಕ ಕಾರು ಬೆಂಗಳೂರಿನ ಕೆ.ಆರ್.ಪುರಂ ಬಾಬು ಎಂದು ಗುರುತಿಸಲಾಗಿದೆ.
ನಾಗರಾಜ್ ಮತ್ತು ಚೆನ್ನಕೇಶವರೆಡ್ಡಿ ಚೀಮನಹಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಹೋಗಿ ಚಿಂತಾಮಣಿಗೆ ವಾಪಾಸ್ ಬರುತ್ತಿದ್ದರೆ, ಕಾರಿನ ಚಾಲಕ ಬೆಂಗಳೂರಿನ ಕೆ.ಆರ್.ಪುರಂ ನಿವಾಸಿ ಬಾಬು ಆಂಧ್ರದ ಮದನಪಲ್ಲಿಗೆ ಹೋಗಿ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ರಸ್ತೆಯ ಪಕ್ಕದಿಂದ ದೂರದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡರೆ ಕಾರು ಬೈಕ್ಗೆ ಡಿಕ್ಕಿ ಹೊಡೆದ ನಂತರ ರಸ್ತೆಯ ಪಕ್ಕದ ಜಮೀನಿಗೆ ಹಾಕಿದ ಕಲ್ಲಿನ ಕೂಚುಗಳಿಗೆ ಹೋಗಿ ಡಿಕ್ಕಿ ಹೊಡೆದಿದ್ದು ಕಾರಿನ ಚಾಲಕನ ತಲೆಗೆ ಏಟು ಬಿದ್ದಿದೆ. ಸ್ಥಳಕ್ಕೆ ಬಂದ ಪೊಲೀಸರು ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ಬಾರದ ಕಾರಣ ಖಾಸಗಿ ವಾಹನದಲ್ಲಿ ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಗಂಭಿರವಾಗಿ ಗಾಯಗೊಂಡಿದ್ದ ಚೆನ್ನಕೇಶವರೆಡ್ಡಿಗೆ ಪ್ರಥಮ ಚಿಕಿತ್ಸೆ ನೀಡಿ ಚಿಕಿತ್ಸೆಗಾಗಿ ಕೋಲಾರಕ್ಕೆ ರವಾನಿಸಲಾಗಿದೆ. ನಾಗರಾಜ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.