Kite string gets stuck in biker 
ರಾಜ್ಯ

ಬೈಕ್ ಸವಾರನ ಕತ್ತಿಗೆ ಸಿಲುಕಿದ ಗಾಳಿಪಟದ ದಾರ: ಸ್ಥಳದಲ್ಲೇ ಸಾವು! | Kite

ಬೀದರ್‌: ಬೈಕ್‌ ಮೇಲೆ ತೆರಳುವಾಗ ಗಾಳಿಪಟ( Kite ) ಹಾರಿಸುವ ದಾರಾ (ಮಾಂಜಾ) ಕತ್ತಿಗೆ ಸಿಕ್ಕಿಕೊಂಡು ಬೈಕ್ ಸವಾರ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿಯಲ್ಲಿ ಬುಧವಾರ ನಡೆದಿದೆ.
ಸಂಜುಕುಮಾರ (48) ಮೃತ ವ್ಯಕ್ತಿ. ಹುಮನಾಬಾದ್‌ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಕರೆತರಲು ಬೈಕ್‌ ಮೇಲೆ ಬಂಬುಳಗಿಯಿಂದ ತೆರಳುವಾಗ ಈ ಘಟನೆ ನಡೆದಿದೆ.
ತಾಳಮಡಗಿ ಗ್ರಾಮದ ಸೇತುವೆ ಬಳಿ ಈ ಘಟನೆ ಜರುಗಿದೆ. ಕತ್ತಿಗೆ ಮಾಂಜಾ ಸಿಲುಕಿ ರಕ್ತಸ್ರಾವವಾಗಿ ಕೆಳಗೆ ಬಿದ್ದು ಹೊರಳಾಡಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಹುಮನಾಬಾದ್‌ ತಾಲೂಕಿನಲ್ಲಿ ಸಂಕ್ರಾಂತಿ ನಿಮಿತ್ಯ ಗಾಳಿಪಟ ಹಾರಿಸುವ ಸಂಪ್ರದಾಯ ಇದೆ. ಈ ಭಾಗದಲ್ಲಿ ಮಾಂಜಾ ಹೆಚ್ಚಾಗಿ ಬಳಸುವ ರೂಢಿಯಿದ್ದು, ಇದರ ಬಳಕೆ ನಿರ್ಬಂಧಿಸಿ ಕಳೆದ ಮೂರು ವರ್ಷದಿಂದ ಆದೇಶ ಹೊರಡಿಸಲಾಗಿದೆ. ಆದರೂ, ಮಾಂಜಾ ಧಾರಾ ಈ ಭಾಗದಲ್ಲಿ ಬಳಕೆ ಇದೆ.