ದೇವನಹಳ್ಳಿ :
ಬಿದಲೂರು ವಿಎಸ್ಸೆಸ್ಸೆನ್ಗೆ ಅಪೆಕ್ಸ್ ಬ್ಯಾಂಕ್ನಿಂದ ರಾಜ್ಯದ ಎರಡನೇ ಅತ್ಯುತ್ತಮ ಸಂ ಎಂದು ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ 68.27 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂದ ಅಧ್ಯಕ್ಷ ಕೆ.ವಿ.ಮಂಜುನಾಥ್ ಹೇಳಿದರು.
ಕಸಬಾ ಹೋಬಳಿಯ ಬಿದಲೂರು ವ್ಯವಸಾಯ ಸೇವಾ ಸಹಕಾರ ಸಂದಲ್ಲಿ ಹಮ್ಮಿಕೊಂಡಿದ್ದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷರು, ಸಹಕಾರಿ ಸಂಗಳು ಇರುವುದು ರೈತರ ಅಭ್ಯುದಯಕ್ಕಾಗಿ. ಸಂದ ಸೌಲಭ್ಯಗಳ ಸದುಪಯೋಗ ಪಡೆದು ರೈತರು ಪ್ರಗತಿಕಾಣಬೇಕು ಎಂದು ಸಲಹೆ ನೀಡಿದರು.
ಹೈನುಗಾರಿಕೆ ಮಾಡಲು ಆಸ್ತಿ ಇರುವವರಿಗೆ ತಲಾ 2 ಲಕ್ಷ ರೂ.ದಂತೆ 100 ರೈತರಿಗೆ ಒಟ್ಟು 2 ಕೊಟಿ ರೂ ಸಾಲ ವಿತರಿಸಲಾಗುತ್ತಿದೆ. ಸಾಲಪಡೆದವರು ಸಕಾಲದಲ್ಲಿ ಮರುಪಾವತಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಹಕಾರಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್.ಅಶೋಕ್ ಮಾತನಾಡಿ, ಸಹಕಾರಿ ಸಂಗಳು ಕೇವಲ ಲಾಭದ ಗುರಿಯಷ್ಟೇ ಹೊಂದಿಲ್ಲ. ರೈತರ ಸೇವೆಯನ್ನೂ ಮುಖ್ಯಗುರಿಯಾಗಿಸಿಕೊಂಡಿವೆ. ರೈತರಿಗೆ ಬೆಳೆ ಸಾಲ ಸಿಗಲಿ, ಬೆಳೆ ನಷ್ಟವಾದರೆ ಸರ್ಕಾರದಿಂದ ಒಂದಿಷ್ಟು ನೆರವಾಗಲಿ ಎಂಬ ಉದ್ದೇಶದಿಂದ ಸಹಕಾರಿ ಸಂಗಳ ಮೂಲಕ ಕುರಿ ಮೇಕೆ, ಕೋಳಿ, ಹಂದಿ ಸಾಕಣೆಗೆ 15 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವೆಂಕಟೇಶ್ ಮಾತನಾಡಿ, ಸಂದಿಂದ ಕೃಷಿ ಕಾರ್ಯಕ್ಕೆ ರಸಗೊಬ್ಬರ, ಹೈನುಗಾರಿಕೆಗೆ ಪಶು ಆಹಾರ, ತೋಟಗಾರಿಕೆಗೆ ಔಷಧ, ಪಡಿತರ ವಿತರಣೆ ಸೇರಿದಂತೆ ಚಿನ್ನದ ಮೇಲೆ, ಮನೆಕಟ್ಟಲು, ವೈಯಕ್ತಿಕ ಸಾಲಸೌಲಭ್ಯವಿದೆ ಎಂದರು.
ಮಾಜಿ ಅಧ್ಯಕ್ಷ ಆರ್.ರಾಮಾಂಜಿನಪ್ಪ, ನಿರ್ದೇಶಕರಾದ ಕೆ.ಮಹೇಶ್, ವಾಸುದೇವ್, ಬಿ.ಎಂ.ಮಹೇಶ್, ಲ್ಮನಾರಾಯಣ ಎಂ., ಶಿವಕುಮಾರ್ ಎಂ., ಡಿ.ಆರ್.ವೆಂಕಟೇಶ್, ಎನ್.ಕಮಲಾ, ಟಿ.ಎನ್.ಆಶಾ, ಬಿ.ಆರ್.ಶಂಕರಪ್ಪ, ಆರ್.ತಿಮ್ಮಯ್ಯ ಸಿ., ಪ್ರಕಾಶ್, ಮತ್ತಿತರು ಇದ್ದರು.