ಸರ್ಕಾರಿ ವಾಹನ ಬಿಟ್ಟು ಸೈಕಲ್ ಸವಾರಿ 
ರಾಜ್ಯ

ಸರ್ಕಾರಿ ವಾಹನ ಬಿಟ್ಟು ಸೈಕಲ್ ಸವಾರಿ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ವಾಹನ ಬಿಟ್ಟು ಸೈಕಲ್ ಸವಾರಿ
  • ಚಿಕ್ಕೋಡಿ ಅಧಿಕಾರಿಗಳಿಂದ ಬೈಸಿಕಲ್ ಬಳಕೆ
  • ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ


ಸರ್ಕಾರಿ ವಾಹನ ಬಿಟ್ಟು ಸೈಕಲ್ ಸವಾರಿ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ : ಪಟ್ಟಣದ ಹಿರಿಯ ಅಧಿಕಾರಿಗಳ ತಂಡವೊಂದು ಸಾಮೂಹಿಕವಾಗಿ ಪಟ್ಟಣ ವ್ಯಾಪ್ತಿಯ ಕಾರ್ಯಗಳಿಗೆ ಸೈಕಲ್ ಬಳಸುವ ವಿಶೇಷ ಯೋಜನೆಗೆ ಚಾಲನೆ ನೀಡಿದ್ದಾರೆ.

ಇತ್ತೀಚಿನ ದಿನಮಾನಗಳಲ್ಲಿ ಸರ್ಕಾರಿ ಅಧಿಕಾರಿಗಳಿಗೆ ವ್ಯಾಯಾಮದ ಕೊರತೆ,ಹಾಗೂ ಕಾರ್ಯ ಒತ್ತಡದಿಂದ ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಪರಿಸರ ರಕ್ಷಣೆ ಹಾಗೂ ಸದೃಢ ಶರೀರಕ್ಕಾಗಿ ಚಿಕ್ಕೋಡಿ ಶಿಕ್ಷಣ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎಸ್ ಸೀತಾರಾಮು ,ತಹಶಿಲ್ದಾರ ರಾಜೇಶ ಬುರ್ಲಿ, ಮುಖ್ಯಾಧಿಕಾರಿ ಜಗದೀಶ ಈಟಿ ಉನ್ನತ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಬೈಸಿಕಲ್ ಬಳಸುವ ಮೂಲಕ ತಮ್ಮ ಇಲಾಖೆಯ ಸಿಬ್ಬಂದಿಗೆ ಪ್ರೇರಣೆಯಾಗಿದ್ದಾರೆ.