ಉಸ್ತುವಾರಿ ಸಚಿವರಿಂದ ಪಕ್ಷಪಾತ incharge Minister
- ಶಾಸಕ ಸಮೃದ್ಧಿ ವಿ. ಮಂಜುನಾಥ್ ಆರೋಪ
- ಕಗ್ಗನಹಳ್ಳಿಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಮುಳಬಾಗಿಲು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ನೀಡಿರುವ ಅಮೃತ ಯೋಜನೆಗಳನ್ನು ನಗರಾಭಿವೃದ್ಧಿ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಪಕ್ಷಪಾತ ಧೋರಣೆ ಮೂಲಕ ಕೇಂದ್ರದ ಅನುದಾನವನ್ನು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ವಾತ್ರ ಹಂಚಿಕೆ ವಾಡಿ ತಾರತಮ್ಯ ವಾಡಿದ್ದಾರೆ ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್ ಆರೋಪಿಸಿದರು. incharge
ತಾಲೂಕಿನ ಕೆಜಿಎಫ್ ರಸ್ತೆಯ ಕಗ್ಗನಹಳ್ಳಿಯಲ್ಲಿ 80 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ವಾತನಾಡಿ, ಮುಳಬಾಗಿಲಿನಲ್ಲಿ ಕುರುಬರ ಸಂದಿಂದ ನಿರ್ಮಿಸಿರುವುದು ಕನಕ ಭವನವೋ ಅಥವಾ ಕಾಂಗ್ರೆಸ್ ಭವನವೋ ಎಂಬ ಗೊಂದಲ ಉಂಟು ವಾಡಿದ್ದಾರೆ. ನನಗೆ ಭಾನುವಾರ ಉದ್ಘಾಟನೆ ಕಾರ್ಯಕ್ರಮ ಎಂದು ಹೇಳಿ ಆಹ್ವಾನ ಪತ್ರಿಕೆ ನೀಡಿ ಶನಿವಾರವೇ ಜಿಲ್ಲಾ ಮತ್ತು ತಾಲೂಕು ಆಡಳಿತದೊಂದಿಗೆ ಸಚಿವರು ಆಗಮಿಸಿ ಉದ್ಘಾಟನೆ ವಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪಶ್ನಿಸಿದರು.
ಸಮಾಜ ಇಬ್ಭಾಗವೇ ಸಚಿವರ ಸಾಧನೆ: ಸಚಿವ ಬೈರತಿ ಸುರೇಶ್ ಅವರ ಕೊಡುಗೆ ಕನಕ ಭವನಕ್ಕೆ ಎಷ್ಟು ಎಂಬುದನ್ನು ಹೇಳಲಿ, ನನ್ನ ಅನುದಾನದಲ್ಲಿ 15 ಲಕ್ಷ ರೂ., ವೈಯಕ್ತಿಕವಾಗಿ 10 ಲಕ್ಷ ರೂ. ನೀಡಿದ್ದೇನೆ. ಅದೇ ರೀತಿ ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಸೇರಿ ಹಲವರು ಭವನ ನಿರ್ವಾಣಕ್ಕೆ ಲಕ್ಷಾಂತರ ರೂ. ನೀಡಿದ್ದಾರೆ. ವಾಜಿ ಸಚಿವ ಆಲಂಗೂರು ಶ್ರೀನಿವಾಸ್ ಶಾಸಕರಾಗಿದ್ದಾಗ ಎಲ್ಲ ಸಮುದಾಯಗಳಿಗೆ ನಿವೇಶನ ನೀಡಿ ಸಮುದಾಯ ಭವನಗಳನ್ನು ಕಟ್ಟಿಕೊಟ್ಟಿದ್ದಾರೆ. ಅದೇ ರೀತಿ ಕನಕ ಭವನಕ್ಕೂ ಕೊಡುಗೆ ನೀಡಿದ್ದಾರೆ. ಆದರೆ, ಬೈರತಿ ಸುರೇಶ್ ಕೊಡುಗೆ ಶೂನ್ಯವಾಗಿದ್ದರೂ, ಶಾಸಕರನ್ನು ಬಿಟ್ಟು ಉದ್ಘಾಟಿಸಿದ್ದಾರೆ. ಅವರು ಸವಾಜವನ್ನು ಇಬ್ಭಾಗ ವಾಡಿರುವುದೇ ಅವರ ಸಾಧನೆ ಎಂದು ಶಾಸಕರು ಕಿಡಿಕಾರಿದರು.
ಅವನಿ ಗ್ರಾಮದಲ್ಲಿ ಹೈಟೆಕ್ ಅಂಗನವಾಡಿ ಕೇಂದ್ರ ನಿರ್ವಾಣ, ಕಗ್ಗಿನಹಳ್ಳಿಯಲ್ಲಿ ಹೈಮಾಸ್ಟ್ ವಿದ್ಯುತ್ ಬೀದಿ ದೀಪ, ನಂಗಲಿ ಸಮೀಪದ ಕಗ್ಗನಹಳ್ಳಿಯ ರಸ್ತೆ ಅಭಿವೃದ್ಧಿಗೆ 1.5 ಕೋಟಿ ರೂ. ಹಣ ಬಿಡುಗಡೆ ವಾಡಿರುವುದಾಗಿ ಶಾಸಕರು ಹೇಳಿದರು.
ಅವನಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಪ್ರಿಯ, ಅಂಗೊಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಅಮರಾವತಿ, ಸದಸ್ಯರಾದ ಸುಮಿತ್ರಮ್ಮ, ಬ್ಯಾಟಪ್ಪ, ಬಲ್ಲ ಹರೀಶ್, ಮುಖಂಡರಾದ ಗೊಲ್ಲಹಳ್ಳಿ ಪ್ರಭಾಕರ್, ಜಗದೀಶ್, ಯಡಹಳ್ಳಿ ವೈ.ಸೋಮಶೇಖರ್, ಕೇಶವ ರೆಡ್ಡಿ, ಚಂದ್ರಾರೆಡ್ಡಿ, ಕಗ್ಗಿನಹಳ್ಳಿ ಶ್ರೀನಿವಾಸ್, ಶ್ರೀನಾಥ್, ಮೋಹನ್, ನೀಲಕಂಠಗೌಡ, ರಾಮಕೃಷ್ಣ ರೆಡ್ಡಿ, ಸುರೇಶ್ ರೆಡ್ಡಿ, ನಾರಾಯಣ ರೆಡ್ಡಿ, ರಾಮರೆಡ್ಡಿ, ಗೋಪಾಲ್ ರೆಡ್ಡಿ, ಬಲ್ಲ ಶ್ರೀನಿವಾಸ್, ರಾಮೇಗೌಡ ಇದ್ದರು.