ಕೆಂಭಾವಿ ವಲಯದ ಜಮೀನೊಂದರಲ್ಲಿ ಹತ್ತಿ ಬೀಜ ನಾಟಿ ಮಾಡಿದ್ದು ಮಳೆ ಬಾರದ ಕಾರಣ ಒಣಗುತ್ತಿರುವ ಬೆಳೆಗಳು.
- ಕೈಕೊಟ್ಟ ಮೃಗಾರಿದ್ರಾ
- ಮುಗಿಲಿನತ್ತ ಮುಖ ಮಾಡಿದ ರೈತರು
- ಒಣಗುತ್ತಿರುವ ಬೆಳೆ
ಕೆಂಭಾವಿ: ರಾಜ್ಯದ ಹಲವು ಭಾಗಗಳಲ್ಲಿ ಅತೀ ಮಳೆಯಾಗಿ ನೆರೆ ಹಾವಳಿ ಉಂಟಾಗಿದ್ದರೆ ಇತ್ತ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಮಳೆ ಬಾರದೆ ರೈತ ಕಂಗಾಲಾಗಿದ್ದಾನೆ. ಮಳೆಗಾಲ ಆರಂಭವಾಗಿ ಬರೋಬ್ಬರಿ ಒಂದು ತಿಂಗಳಾದರೂ ಸಮರ್ಪಕ ಮಳೆಯಾಗದ ಕಾಕರಣ ಕೆಂಭಾವಿ ಸೇರಿ ವಲಯದ ಹಲವು ಗ್ರಾಮಗಳ ರೈತರು ಚಿಂತೆಗೀಡಾಗಿದ್ದು, ಮುಗಿಲತ್ತ ಮುಖಮಾಡಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಮೃಗಶಿರಾ ಮತ್ತು ಆರಿದ್ರಾ ಮಳೆ ಈ ಬಾರಿ ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಇಲಾಖೆ ಪ್ರಕಾರ ವಲಯದಲ್ಲಿ ಸುಮಾರು ೨೫ ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ೧೩ ಸಾವಿರ ಹೆಕ್ಟೇರ್ ನೀರಾವರಿ ಹಾಗೂ ೧೨ ಸಾವಿರ ಹೆಕ್ಟೇರ್ ಒಣ ಬೇಸಾಯ ಭೂಮಿ ಇದೆ. ಇದುವರೆಗೆ ಹದಿನೈದು ಸಾವಿರಕ್ಕೂ ಅಽಕ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ ಆದರೆ ಮಳೆಯ ಕೊರತೆಯಿಂದಾಗಿ ಬಿತ್ತನೆ ಮಾಡಿದ ಬೀಜ ಭೂಮಿಯಿಂದ ಮೇಲೇಳುತ್ತಲೇ ಇಲ್ಲ. ಇನ್ನೂ ಕೆಲವು ಕಡೆ ಮೇಲೆದ್ದ ಬೆಳೆ ಒಣಗುವ ಹಂತಕ್ಕೆ ಬಂದಿವೆ.
ಹಲವು ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬಿತ್ತಿದ ಹತ್ತಿ ಬೀಜ ತೇವಾಂಶದ ಕೊರತೆಯಿಂದ ನಾಟಿ ಬಾರದೆ ಮತ್ತೊಮ್ಮೆ ಬಿತ್ತನೆ ಮಾಡಿದ್ದು ಇದರಿಂದ ಬಿತ್ತನೆ ಬೀಜದ ಖರ್ಚು ದ್ವಿಗುಣಗೊಂಡು ರೈತರನ್ನು ಸಾಲದ ಶೂಲಕ್ಕೆ ಸಿಲುಕಿಸಿದೆ. ಈ ಭಾಗದಲ್ಲಿ ಈ ಬಾರಿ ಹೆಚ್ಚಾಗಿ ಹತ್ತಿ ಬೆಳೆಯನ್ನೆ ರೈತರು ಬಿತ್ತನೆ ಮಾಡಿದ್ದು ಕೆಲ ಕಡೆಗಳಲ್ಲಿ ಮಾತ್ರ ತೊಗರಿ ಬಿತ್ತನೆ ಮಾಡಲಾಗಿದೆ.
ಇನ್ನೂ ಕೆಲ ಪ್ರದೇಶಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ಮಳೆಯಾಗಿದ್ದು, ಅದನ್ನೆ ನಂಬಿ ರೈತರು ಹತ್ತಿ, ತೊಗರಿ ಬೆಳೆಗಳ ಬಿತ್ತನೆಯಲ್ಲಿ ತೊಡಗಿದ್ದಾರೆ. ಒಟ್ಟಾರೆ ಸಮರ್ಪಕ ಮಳೆ ಬೀಳದೆ ರೈತರು ಕಂಗಾಲಾಗಿದ್ದು , ಈ ಬಾರಿಯೂ ಮುಂಗಾರಿನ ಬರಗಾಲದ ಛಾಯೆ ಮೂಡಲಿದೆ ಎಂಬ ಪ್ರಶ್ನೆ ಹಲವು ರೈತರನ್ನು ಕಾಡಲಾರಂಭಿಸಿದೆ.
ಮಳೆಗಾಗಿ ಪ್ರಾರ್ಥಿಸಿ ಈಗಾಗಲೇ ಕೆಂಭಾವಿ ಸೇರಿ ಸುತ್ತಲಿನ ಗ್ರಾಮಗಳಲ್ಲಿನ ಜನತೆ ವಾಡಿಕೆಯಂತೆ ಹಲವು ದೇವರುಗಳಿಗೆ ಮೊರೆ ಹೋಗಿ ಪೂಜೆ ಅಭಿಷೇಕ ಸೇರಿ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ಪ್ರಾರ್ಥಿಸುತ್ತಿದ್ದಾರೆ. ಆದರೆ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತರ ಗೋಳು ಹೇಳತೀರದಾಗಿದೆ.
"
ವಲಯದಲ್ಲಿ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ರೈತರು ಈಗಾಗಲೇ ಹೆಚ್ಚು ಕೃಷಿ ಭೂಮಿಯಲ್ಲಿ ಹತ್ತಿ ಬಿತ್ತನೆ ಮಾಡಿದ್ದಾರೆ. ಇಂದಿನಿAದ ವಲಯದ ಹಲವೆಡೆ ಮೊಬೈಲ್ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.| ಎಸ್. ಶ್ರೀಧರಕೃಷಿ ಅಽಕಾರಿ ರೈತ ಸಂಪರ್ಕ ಕೇಂದ್ರ ಕೆಂಭಾವಿ