ಹುಲಸೂರು ಪಟ್ಟಣದ ಹೊರವಲಯದ ಶ್ರೀ ಸಾಯಿಬಾಬಾ ದೇವಸ್ಥಾನ ಮುಂಭಾಗದ ಪಂಡಿತರಾವ ಭೂಸಾರೆ ಹೊಲದಲ್ಲಿ ಮಂಗಳವಾರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶಾಸಕ ಶರಣು ಸಲಗರ ಭೂಮಿ ಪೂಜೆ ನೆರವೇರಿಸಿದರು. ಜಿಪಂ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಗ್ರಾ ಪಂ ಅಧ್ಯೆ ದೀಪಾರಾಣಿ ಭೋಸ್ಲೆ, ಉಪಾಧ್ಯೆ ಮೀರಾಬಾಯಿ ಗಾಯಕವಾಡ, ಎಂ.ಜಿ.ರಾಜೋಳೆ, ರೂಪಾವತಿ ಜಾಧವ್​ ಇತರರಿದ್ದರು. 
ರಾಜ್ಯ

ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ಹುಲಸೂರು: ಪಟ್ಟಣದ ಹೊರವಲಯದ ಶ್ರೀ ಸಾಯಿಬಾಬಾ ದೇವಸ್ಥಾನ ಮುಂಭಾಗದ ಪಂಡಿತರಾವ ಭೂಸಾರೆ ಹೊಲದಲ್ಲಿ ಮಂಗಳವಾರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶಾಸಕ ಶರಣು ಸಲಗರ ಭೂಮಿ ಪೂಜೆ ನೆರವೇರಿಸಿದರು.
ಪ್ರಜಾಸೌಧ ಕಟ್ಟಡಕ್ಕಾಗಿ ಕಂದಾಯ ಇಲಾಖೆಗೆ ಪಂಡಿತ ರಾವ ಭೂಸಾರೆ ಮೂರು ಎಕರೆ ಜಮೀನು ದಾನ ನೀಡಲಾಗಿದ್ದು, ಆ ಸ್ಥಳ ಗುರುತಿಸಿ ಪ್ರಮುಖರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಜಿಪಂ ಮಾಜಿ ಹಿರಿಯ ಸದಸ್ಯ ಮಲ್ಲಪ್ಪ ಧಬಾಲೆ, ಬಸವಕಲ್ಯಾಣ ಜಿಲ್ಲಾ ಕೇಂದ್ರ ರಚನೆ ಹೊರಟ ಸಮಿತಿ ಅಧ್ಯಕ್ಷ ಎಂಜಿ ರಾಜೋಳೆ, ಡಿಸಿಸಿ ಬ್ಯಾಂಕ್​ ನಿರ್ದೇಶಕ ಓಂಕಾರ ಪಟ್ನೆ, ಗ್ರಾಪಂ ಅಧ್ಯಕ್ಷ ದೀಪಾರಾಣಿ ಭೋಸ್ಲೆ, ಉಪಾಧ್ಯೆ ಮೀರಾಬಾಯಿ ಗಾಯಕವಾಡ, ಪಿಕೆಪಿಎಸ್​ ಸಹಕಾರ ಸಂಘದ ಅಧ್ಯಕ್ಷ ಭಾಗವತ ಜಾನಬಾ, ಪ್ರಮುಖರಾದ ಕಾಶಿನಾಥ ಪಾರಶೆಟ್ಟೆ, ರೂಪಾವತಿ ಜಾಧವ್​, ಚಂದ್ರಕಾಂತ ದೇಟ್ನೆ, ಸಂಗಮೇಶ ಕುಡಂಬ್ಲೆ, ನಾಗೇಶ ಮೇತ್ರೆ, ರಾಜ ಕುಮಾರ ನಿಡೋದೆ, ಬಸವರಾಜ ಡೋಣಗಾಂಕರ, ಬಾಬುರಾವ ಬಾಲಕುಂದೆ ಇತರರಿದ್ದರು.