ಇಂಡಿ ನ್ಯಾಯಾಲಯಕ್ಕೆ ಪೊಲೀಸ್ ಬಿಗಿಭದ್ರತೆಯಲ್ಲಿ ಆರೋಪಿಗಳನ್ನು ಹಾಜರುಪಡಿಸಲಾಯಿತು. 
ರಾಜ್ಯ

ಭೀಮಾತೀರದ ಭೀಕರ ಹತ್ಯಾಕಾಂಡ ಪ್ರಕರಣ, ಗೋವಿಂದಪುರದ 12 ಆರೋಪಿಗಳ ಬಂಧನ

ಪ್ರಮುಖ ಮುಖ್ಯಾಂಶಗಳು

  • ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು
  • ಇಂಡಿ ನ್ಯಾಯಾಲಯಕ್ಕೆ ಆರೋಪಿಗಳು ಹಾಜರು
  • ಹೆಚ್ಚುವರಿ ತನಿಖೆಗಾಗಿ ಮತ್ತೆ ಪೊಲೀಸ್ ವಶಕ್ಕೆ
ವಿಜಯಪುರ: ಭೀಮಾತೀರದಲ್ಲಿ ನಡೆದ ಭೀಕರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋಮವಾರ 12 ಆರೋಪಿಗಳನ್ನು ಬಂಧಿಸಿದ್ದಾರೆ.
ಚಡಚಣ ತಾಲೂಕಿನ ಗೋವಿಂದಾಪುರ ಗ್ರಾಮದಲ್ಲಿ ಮೇ 29 ರಂದು ನಡೆದ ಆರು ಜನರ ಹತ್ಯೆ ಪ್ರಕರಣವನ್ನು ತ್ವರಿತವಾಗಿ ಭೇದಿಸಿರುವ ಪೊಲೀಸರು ಅದೇ ಗ್ರಾಮದ 12 ಆರೋಪಿತರನ್ನು ಬಂಧಿಸಿ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಗೋವಿಂದಪುರದ ಮಹಾಸಿದ್ದ ಶ್ರೀಮಂತ ಬಿರಾದಾರ(44), ಮಹೇಶ ಲಕ್ಷ್ಮಣ ಬಿರಾದಾರ(22), ರಾಜಕುಮಾರ ಸಿದ್ದರಾಮ ಕೋಳಿ (28), ರಾಜು ಚಂದ್ರಕಾಂತ ಉಗಾರ (20), ಯಲ್ಲಪ್ಪ ಮಹದೇವ ಅರಕೇರಿ(25), ಕಲ್ಲಾಣಗೌಡ ಈಶ್ವರಗೌಡ ಪಾಟೀರ(65), ಲಾಯಪ್ಪ ನೆನಪ್ಪ ಬಿರಾದಾರ (65), ಸುಭಾಸ ಮಹಾಸಿದ್ದ ಬಿರಾದಾರ (21), ರಾವಸಾಬ ಅವಧೂತ ಬಿರಾದಾರ (20), ಗಜಾನಂದ ಭೂತಾಲೆ ಬಿರಾದಾರ(20), ಮಲಕರಿ ಹನಮಂತ ಕೋಲಿ (18), ಸಂಜು ಮಹದೇವ ಅರಕೇರಿ(31) ಬಂಧಿತ ಆರೋಪಿಗಳು.
ಇಂಡಿ ನ್ಯಾಯಾಲಯಕ್ಕೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರೋಪಿಗಳನ್ನು ಹಾಜರುಪಡಿಸಲಾಯಿತು. ಇವರ ಹೊರತಾಗಿ ಇನ್ನೂ ಕೆಲವರು ಪ್ರಕರಣದಲ್ಲಿ ಭಾ

ಗೋವಿಂದಪುರ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗಿದೆ. ಹೆಚ್ಚುವರಿ ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ. ಈ ಆರೋಪಿಗಳನ್ನು ಹೊರತುಪಡಿಸಿ ಇನ್ನೂ ಕೆಲವರು ಇರುವ ಮಾಹಿತಿ ಇದೆ. ಘಟನೆಯಲ್ಲಿ ಗುಂಡು ಹಾರಿಸಿರುವ ಮಾಹಿತಿ ಕೂಡ ಲಭ್ಯವಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಮುಕ್ತಾಯಗೊಳಿಸಲಾಗುವುದು.

— ಲಕ್ಷ್ಮಣ ನಿಂಬರಗಿ, ಎಸ್‌ಪಿ

ಗಿಯಾಗಿದ್ದು, ಆ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ

ಗೋವಿಂದಪುರದಲ್ಲಿ ಮೇ 29 ರಂದು ಮಧ್ಯಾಹ್ನ 2.30 ರಿಂದ 3 ಗಂಟೆಯ ನಡುವಿನ ಅವಧಿಯಲ್ಲಿ ನಿರಾಳೆ ಕುಟುಂಬ ಐವರು ಸೇರಿ ಒಟ್ಟು ಆರು ಜನರ ಹತ್ಯೆಯಾಗಿತ್ತು. ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಉಂಟಾದ ಕಲಹ ಸಾಮೂಹಿಕ ಹತ್ಯೆಯಲ್ಲಿ ಅಂತ್ಯವಾಗಿತ್ತು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಮೇ 30 ರಂದು ಮರೋಣತ್ತರ ಪರೀಕ್ಷೆ ಬಳಿಕ ಚಡಚಣದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಗಾಯಾಳುಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಡೆಸಲಾಗಿತ್ತು. ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತಲ್ಲದೇ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಎಸ್‌ಪಿ ಲಕ್ಷ್ಮಣ ನಿಂಬರಿ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ತನಿಖಾ ತಂಡ 12 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದಿದೆ.