ಹೊಸಕೋಟೆಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಭೀಮ್ ಕೋರೆಗಾವ್ ವಿಜಯ್ ದಿವಸ್ ಆಚರಣೆಯಲ್ಲಿ ಅಂಬೇಡ್ಕರ್ ಭಾವಾಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಪ್ರಗತಿಪರ ಸಂಟನೆಗಳ ಒಕ್ಕೂಟದ ಅಧ್ಯಕ್ಷ ಚಿನ್ನಸ್ವಾಮಿ, ದಸಂಸ ಅಧ್ಯಕ್ಷ ಜಿ.ಆನಂದ್, ಮುಖಂದರಾದ ದರ್ಶನ್, ಅಣ್ಣಯ್ಯಪ್ಪ, ತಾಪಂ ಮಾಜಿ ಅಧ್ಯಕ್ಷ ಡಾ.ಡಿ.ಟಿ.ವೆಂಕಟೇಶ್ ಇದ್ದರು.
ಹೊಸಕೋಟೆ : ಕೇವಲ 500 ಜನ ಮಹರ್ ಸೈನಿಕರು 25 ಸಾವಿರ ಪೇಶ್ವೆಯವರನ್ನು ಸೋಲಿಸಿದ ಭೀಮ ಕೋರೆಗಾಂವ್ ವಿಜಯೋತ್ಸವವು ಸ್ವಾಭಿಮಾನದ ಸಂಕೇತ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು ತಿಳಿದರು.
ನಗರದಲ್ಲಿ ದಲಿತಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಯಿಂದ ಆಯೋಜಿಸಿದ್ದ 208ನೇ ಭೀಮ ಕೋರೆಗಾವ್ ವಿಜಯ್ ದಿನ ಆಚರಣೆಯಲ್ಲಿ ಮಾತನಾಡಿದ ಅವರು, ಕೇವಲ ಅಸ್ತಿತ್ವ ಉಳಿಸಿಕೊಳ್ಳಲು ಭೀಮ ಕೋರೆಗಾಂವ್ ಯುದ್ಧ ನಡೆದಿಲ್ಲ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ನಡೆದ ಹೋರಾಟವಾಗಿದೆ ಎಂದರು.
ನಾಗಾ ಜನಾಂಗವನ್ನು ಓಡೆದು ಆಳಲು ಬಂದ ಕೆಲವರು ಚಾತುರ್ವರ್ಣ ಪದ್ಧತಿ ಜಾರಿಗೊಳಿಸಿ ನಮ್ಮನ್ನೇ ಆಳುವ ಮಟ್ಟಕ್ಕೆ ಜನರಲ್ಲಿ ಭೇದಭಾವ ಹುಟ್ಟಿಸಿದರು, ದಲಿತರು ಊರ ಹೊರಗೆ ಉಳಿಯಬೇಕು, ಬಾವಿಗಳಲ್ಲಿ ನೀರು ಮುಟ್ಟಬಾರದು, ಸೊಂಟಕ್ಕೆ ಪೊರಕೆ ಕಟ್ಟಿ ಓಡಾಡಬೇಕು ಎಂಬ ಅನಿಷ್ಟ ಪದ್ಧತಿಗಳಿಂದ ಶೋಷಣೆ ಮಾಡಿದ್ದರು. ಇದರ ಫಲವಾಗಿ ಪೇಶ್ವೆಗಳ ವಿರುದ್ದ 1818ರಲ್ಲಿ ಸಿಡೆದೆದ್ದ ಭೀಮ್ ಕೋರೆಗಾವ್ನ ಸೈನಿಕರು ಹೋರಾಟ ಮಾಡಿ ತಮ್ಮ ಅಸ್ತಿತ್ವದ ಜತೆ ಸ್ವಾಭಿಮಾನ ಉಳಿಸಿಕೊಂಡರು. ಅದನ್ನೇ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಮೂಲಕ ದೇಶದಲ್ಲಿ ಜಾರಿಗೆ ತಂದರು ಎಂದರು.
ವಿವಿಧ ಸಂಘಟನೆಗಳ ಅಧ್ಯಕ್ಷರಾದ ಶ್ರೀಕಾಂತ್ ರಾವಣ್, ಮಂಜುನಾಥ್, ಶಿವಕುಮಾರ್ ಚಕ್ರವರ್ತಿ, ಚೀಮಂಡಳ್ಳಿ ದೇವರಾಜ್, ಲೋಕೇಶ್, ತಿಮ್ಮರಾಯಪ್ಪ, ಶ್ರೀನಿವಾಸ್, ಅಭಿಮಾನಿ ಮುನಿರಾಜ್, ಆಂಜಿನಪ್ಪ, ಸಹದೇಶ್, ಪ್ರಶಾಂತ್ ಇದ್ದರು.
ಸಂಟನೆಗಳಲ್ಲಿ ಒಗ್ಗಟ್ಟಿರಲಿ : ಡಾ ಅಂಬೇಡ್ಕರ್ ಅವರ ಆದರ್ಶ ಹಾಗೂ ಮೌಲ್ಯಗಳ ಮುಖಾಂತರವೇ ನಾವುಗಳು ನಡೆದುಕೊಳ್ಳಬೇಕು, ಈ ಮೊದಲು ಶೋಷಿತರಿಗೆ ಒಂದು ಸಂಘಟನೆ ಇತ್ತು, ಆ ಸಂಘಟನೆ ಶೋಷಿಸುವವರ ವಿರುದ್ಧ ಧ್ವನಿಯಾಗಿ ನಿಲ್ಲುತಿತ್ತು. ಆದರೆ ಇಂದು ಶೋಷಿತರ ಪರ ಎಂದು ಹತ್ತಾರು ಸಂಘಟನೆಗಳಿದ್ದು ಒಗ್ಗಟ್ಟಿಲ್ಲದೆ ಮತ್ತೆ ಹಳೆಯ ಶೋಷಿತ ಸಮುದಾಯ ಕಡೆಗೆ ಸಮುದಾಯ ಸಾಗುತ್ತಿದೆ, ಸಂಘಟನೆಗಳು ನಿಸ್ವಾರ್ಥದಿಂದ ಶೋಷಿತರ ಪರ ನಿಲ್ಲುವುದರ ಜತೆ ಸಮುದಾಯವನ್ನು ಉತ್ತಮ ದಾರಿಯಲ್ಲಿ ಮುನ್ನೆಡೆಸುವ ಗುರಿ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಿ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಮುನಿಯಪ್ಪ ಹೇಳಿದರು.
ನಮ್ಮ ಚರಿತ್ರೆಯನ್ನು ನಾವೇ ಬರೆದುಕೊಳ್ಳಬೇಕು ಎಂಬ ಅಂಬೇಡ್ಕರ್ ಅವರ ಮಾತಿನಂತೆ ನಾವೆಲ್ಲ ಣಡೆದುಕೊಳ್ಳಬೇಕು, ದೇಶದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿ ರದ್ದು ಮಾಡುವ ಹುನ್ನಾರ ನಡೆಯುತ್ತಿದೆ, ಗುರುಕುಲ ಪದ್ದತಿ ಜಾರಿಗೆ ಒಳಸಂಚು ನಡೆಯುತ್ತಿದೆ, ಗುರುಕುಲ ಪದ್ದತಿ ಕೇವಲ ಬ್ರಾಹ್ಮಣರು ಹಾಗೂ ಕ್ಷತ್ರಿಯರಿಗೆ ಸೀಮಿತ ಎಂದು ಮತ್ತೆ ನಮ್ಮ ಶೋಷಿತ ವರ್ಗವನ್ನು ಶಿಕ್ಷಣದಿಂದ ದೂರ ತಳ್ಳುವ ಸ್ಥಿತಿ ಉಂಟಾಗಬಹುದು.