ಆಳಂದನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಡಕಲ್​ನಲ್ಲಿ ಸೆ.23ರಂದು ನಡೆಯಲಿರುವ ಅಂಬಾ ಭವಾನಿ ಮಂದಿರದ ಲೋಕಾರ್ಪಣೆ ಸಮಾರಂಭದ ಕರಪತ್ರಗಳನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಬಿಡುಗಡೆ ಮಾಡಿದರು. ಅಪ್ಪಾಸಾಹೇಬ್​ ಗುಂಡೆ, ಮಲ್ಲಿಕಾರ್ಜುನ ಕಂದಗೂಳೆ, ಸೀತಾರಾಮ ಜಮಾದಾರ, ಪ್ರಕಾಶ ಮಾನೆ ಇತರರಿದ್ದರು. 
ರಾಜ್ಯ

ಭವಾನಿ ಮಂದಿರ ಉದ್ಘಾಟನೆ, ಅಡ್ಡಪಲ್ಲಕ್ಕಿ ಉತ್ಸವ 23ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಮಾಹಿತಿ
  • ತಾಯಿ ಸ್ಮರಣಾರ್ಥ ತಡಕಲ್​ನಲ್ಲಿ ವಿವಿಧ ಕಾರ್ಯಕ್ರಮ
ಆಳಂದ: ತಡಕಲ ಗ್ರಾಮದಲ್ಲಿ ತಾಯಿ ಅಂಬವ್ವ ಗುತ್ತೇದಾರ್​ ಅವರ ಸ್ಮರಣಾರ್ಥ ನಿರ್ಮಿಸಿರುವ ಅಂಬಾ ಭವಾನಿ ಮಂದಿರ ಉದ್ಘಾಟನೆ ಹಾಗೂ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಸೆ.23ರಂದು ವೈಭವದಿಂದ ಜರುಗಲಿವೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ್​ ತಿಳಿಸಿದರು.
23ರಂದು ಬೆಳಗ್ಗೆ 10ಕ್ಕೆ ಅಂಬಾ ಭವಾನಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, 11ಕ್ಕೆ ಧರ್ಮಸಭೆ, 1008 ಮುತ್ತೆದೆಯರಿಗೆ ಉಡಿ ತುಂಬುವುದು, ಪುರವಂತರ ಕುಣಿತ, ಡೊಳ್ಳು ಹಾಗೂ ಸಕಲ ವಾದ್ಯಗಳೊಂದಿಗೆ ಪಂಚ ಪೀಠದ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವದ ಭವ್ಯ ಮೆರವಣಿಗೆ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ, ಕಾಶಿ ಪೀಠದ ಜಗದ್ಗುರುಗಳು ದಿವ್ಯ ಸಾನ್ನಿಧ್ಯ ವಹಿಸುವರು. ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು ನೇತೃತ್ವ, ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು, ಜಿಡಗಾದ ಶ್ರೀ ಡಾ.ಮುರುರಾಜೇಂದ್ರ ಸ್ವಾಮೀಜಿ, ನಂದಗಾಂವ್​ನ ಶ್ರೀ ರಾಜಶೇಖರ ಸ್ವಾಮೀಜಿ, ನಿಂಬಾಳದ ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ, ಮುತ್ಯಾನ ಬಬಲಾದನ ಶ್ರೀ ಡಾ.ಗುರುಪಾದಲಿಂಗ ಶಿವಯೋಗಿ, ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಸಮ್ಮಿಖ ವಹಿಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್​.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಭಗವಂತ ಖುಬಾ, ಮಾಜಿ ಸಂಸದರಾದ ಡಾ.ಉಮೇಶ ಜಾಧವ್​, ರವೀಂದ್ರ ಗಾಯಕವಾಡ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್​, ರೇವುನಾಯಕ ಬೆಳಮಗಿ, ಸುನೀಲ್​ ವಲ್ಲಾಪುರೆ, ರಾಜುಗೌಡ, ಬಾಬುರಾವ ಚವ್ಹಾಣ್​, ಬಸವರಾಜ ಪಾಟೀಲ್​ ಮುರುಮ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್​, ಶಶೀಲ್​ ನಮೋಶಿ, ಡಾ.ಬಿ.ಜಿ.ಪಾಟೀಲ್​, ಜಗದೇವ ಗುತ್ತೇದಾರ್​, ಪ್ರಭು ಚವ್ಹಾಣ್​, ಶರಣು ಸಲಗರ, ಡಾ.ಸಿದ್ದು ಪಾಟೀಲ್​, ಡಾ.ಶೈಲೇಂದ್ರ ಬೆಲ್ದಾಳೆ, ಸಚಿನ್​ ಕಲ್ಯಾಣಶೆಟ್ಟಿ, ಶಿವರಾಜ ಪಾಟೀಲ್​, ಮಾಜಿ ಶಾಸಕರಾದ ದತ್ತ್ತಾತ್ರೇಯ ಪಾಟೀಲ್​, ದೊಡ್ಡಪ್ಪಗೌಡ ಪಾಟೀಲ್​, ಅಮರನಾಥ ಪಾಟೀಲ್​, ಜ್ಞಾನರಾಜ ಚೌಗುಲೆ, ಪ್ರಕಾಶ ಖಂಡ್ರೆ, ಅರುಣ ಶಹಾಪುರ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್​, ಗ್ರಾಮೀಣ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಜಿಪಂ ಮಾಜಿ ಅಧ್ಯಕ್ಷ ನಿತೀನ್​ ಗುತ್ತೇದಾರ್​ ಸೇರಿ ಹಲವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಅಪ್ಪಾಸಾಹೇಬ್​ ಗುಂಡೆ, ಮಲ್ಲಿಕಾರ್ಜುನ ಕಂದಗೂಳೆ, ಸೀತಾರಾಮ ಜಮಾದಾರ, ಪ್ರಕಾಶ ಮಾನೆ, ಶಿವಪುತ್ರ ನಡಗೇರಿ, ಫಯಾಜ್​ ಪಟೇಲ್​, ಹುಸೇನಯ್ಯ ಗುತ್ತೇದಾರ್​, ಜಗದೀಶ ಕಿಣಗಿ ಇತರರಿದ್ದರು.