ಶಹಾಪುರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪ ದರ್ಶನಾಪುರ ವಿವಿಧ ಪಕ್ಷದ ಪ್ರಮುಖರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡರು. ಭೀಮಣ್ಣ ಚಿಟ್ಟೆನವರ್, ಮಲ್ಲಣ್ಣ ಗೋಗಿ ಉಳ್ಳಂಡಗೇರಿ, ಶಿವುಮಾಂತಪ್ಪ ಚಂದಾಪುರ ಇತರರಿದ್ದರು. 
ರಾಜ್ಯ

ಗ್ರಾಪಂ ಮಟ್ಟದಲ್ಲಿ ಭಾರತ್ ಜೋಡೊ ಸಂಘ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿಕೆ
  • ವಿವಿಧ ಪಕ್ಷದ ನೂರಾರು ಜನ ಕಾಂಗ್ರೆಸ್ ಸೇರ್ಪಡೆ
ಶಹಾಪುರ: ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ೧೬-೩೬ ವರ್ಷದ ಯುವಕರನ್ನು ಒಳಗೊಂಡ ಭಾರತ್ ಜೋಡೊ ಸಂಘ ರಚಿಸುವ ಉದ್ದೇಶವಿದೆ. ೧೫ ಜನರ ಸಮಿತಿ ಒಳಗೊಂಡು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡಲಾಗುವುದು. ಪ್ರತಿ ಸಂಘಕ್ಕೆ ವರ್ಷಕ್ಕೆ ೧೦ ಲಕ್ಷ ರೂ. ಅನುದಾನ ನೀಡುವ ಮೂಲಕ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ನಾಟಕ, ಕ್ರಿಕೆಟ್ ಇತರ ಪ್ರತಿಭೆಗಳಿಗೆ ಉತ್ತೇಜನ ನೀಡುವುದಾಗಿ ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿವೆ. ಹೀಗಾಗಿ ಪ್ರತಿ ಗ್ರಾಮದಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಿ ಚುನಾವಣೆಗೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಹಿರಿಯ ಮುಖಂಡ ಭೀಮಣ್ಣ ಚಿಟ್ಟೆನವರ್ ಸೇರಿ ಅನೇಕರನ್ನು ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು. ಕಾಂಗ್ರೆಸ್ ಜಿಲ್ಲಾ ವಕ್ತಾರ ಮಲ್ಲಣ್ಣ ಗೋಗಿ ಉಳ್ಳಂಡಗೇರಿ, ಶಹಾಪುರ ಬ್ಲಾಕ್ ಅಧ್ಯಕ್ಷ ಶಿವುಮಾಂತಪ್ಪ ಚಂದಾಪುರ, ಮುಖಂಡರಾದ ಸಣ್ಣ ನಿಂಗಣ್ಣ ನಾಯ್ಕೋಡಿ, ಪರಭಣ್ಣ ರಸ್ತಾಪುರ, ವಿನೋದಗೌಡ ದೋರನಹಳ್ಳಿ, ಸಿದ್ದಪ್ಪ ಕನ್ಯಾಕೊಳೂರು, ಗೌಡಪ್ಪಗೌಡ, ರಾಯಪ್ಪ ಚಲುವಾದಿ, ರವಿ ರಾಜಾಪುರ, ಅಲ್ಲಾ ಪಟೇಲ್ ಇತರರಿದ್ದರು.