ಭಾರತೀಯ ರೈಲ್ವೆಯ ’ಭಾರತ್ ಗೌರವ್ ಪ್ರವಾಸಿ ರೈಲು’ ಯೋಜನೆ
ಬೆಂಗಳೂರು: ಭಾರತೀಯ ರೈಲ್ವೆಯ ’ಭಾರತ್ ಗೌರವ್ ಪ್ರವಾಸಿ ರೈಲು’ ಯೋಜನೆಯಡಿ, ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಮಾನ್ಯತೆ ಪಡೆದ ಅಗ್ರಗಣ್ಯ ಪ್ರವಾಸಿ ಸಂಸ್ಥೆಯಾದ 'ಟೂರ್ ಟೈಮ್ಸ್' ಬೆಂಗಳೂರಿನಿಂದ ಅ.21 ರಂದು ಹೊರಡಲಿರುವ ವಿಶೇಷ ಖಾಸಗಿ ಪ್ರವಾಸಿ ರೈಲು ಪ್ರಯಾಣಗಳನ್ನು ಘೋಷಿಸಿದೆ.
ಪ್ರಯಾಣಿಕರು ಚಾರ್ ಧಾಮ್ ಯಾತ್ರೆ, ಮಾ ವೈಷ್ಣೋ ದೇವಿ ಸಹಿತ ಶಕ್ತಿ ಪೀಠ ಯಾತ್ರೆ ಹಾಗೂ ಕಾಶ್ಮೀರ ಸಹಿತ ಲೇಹ್-ಲಡಾಖ್ ಪ್ರವಾಸಗಳ ಆಯ್ಕೆಯನ್ನು ಹೊಂದಿದ್ದಾರೆ.
ವಿಮಾನ, ರೈಲು, ಹೋಟೆಲ್ ಹಾಗೂ ಸ್ಥಳೀಯ ಸಾರಿಗೆಯನ್ನು ಪ್ರತ್ಯೇಕವಾಗಿ ಬುಕ್ ಮಾಡುವ ಶ್ರಮವನ್ನು ತಪ್ಪಿಸಿ, ವಿಶ್ರಾಂತಿದಾಯಕ ಪ್ರಯಾಣವನ್ನು ಬಯಸುವ ಕುಟುಂಬಗಳು, ಹಿರಿಯ ನಾಗರಿಕರು ಮತ್ತು ಗುಂಪು ಪ್ರವಾಸಿಗರಿಗಾಗಿ ಈ ಪ್ರವಾಸಗಳನ್ನು ವಿನ್ಯಾಸಗೊಳಿಸಲಾಗಿದೆ. ಭಾರತೀಯ ರೈಲ್ವೆಯ ಭಾರತ್ ಗೌರವ್ ಯೋಜನೆಯಡಿ ಶೇ.33 ಸಬ್ಸಿಡಿ ದರದೊಂದಿಗೆ ಈ ಯಾತ್ರೆಗಳು ಲಭ್ಯವಿವೆ.
ಬುಕಿಂಗ್‌ಗಾಗಿ www.tourtimes.in ಭೇಟಿ ನೀಡಬಹುದು.
ಪ್ರವಾಸದ ವಿವರಗಳು ಮತ್ತು ದರಗಳು
ಚಾರ್ ಧಾಮ್ ಯಾತ್ರೆ:ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥದ ಜೊತೆಗೆ ಹರಿದ್ವಾರ ಮತ್ತು ಋಷಿಕೇಶ ಒಳಗೊಂಡಿದೆ.
ಹಿಮಾಲಯನ್ ನವ ಶಕ್ತಿ ಪೀಠ ಯಾತ್ರೆ (16 ದಿನಗಳು):
ವೈಷ್ಣೋ ದೇವಿ, ಚಾಮುಂಡಾ ದೇವಿ, ಬ್ರಜೇಶ್ವರಿ, ಜ್ವಾಲಾಮುಖಿ, ಚಿಂತಪೂರ್ಣಿ, ಬಾಗಲಾಮುಖಿ, ನೈನಾ ದೇವಿ, ಕಾಲ್ಕಾ ದೇವಿ, ಮಾನಸಾ ದೇವಿ ಹಾಗೂ ಕುರುಕ್ಷೇತ್ರ, ಹರಿದ್ವಾರ, ಋಷಿಕೇಶ, ದೆಹಲಿ, ಮಥುರಾ ಮತ್ತು ಬೃಂದಾವನಗಳನ್ನು ಒಳಗೊಂಡಿರುತ್ತದೆ.
ಲೇಹ್-ಲಡಾಖ್ ಮತ್ತು ಕಾಶ್ಮೀರ ಪ್ರವಾಸ (16 ದಿನಗಳು):
ಬೋರ್ಡಿಂಗ್ ಪಾಯಿಂಟ್‌ಗಳು ಜೊಲಾರ್‌ಪೇಟೈ, ಬಂಗಾರಪೇಟೆ, ವೈಟ್‌ಫೀಲ್ಡ್, ಯಲಹಂಕ ಮತ್ತು ಧರ್ಮಾವರಂ. ಈ ಪ್ಯಾಕೇಜ್‌ನಲ್ಲಿ ವಿಶೇಷ ಪ್ರವಾಸಿ ರೈಲು ಪ್ರಯಾಣ, ಹೋಟೆಲ್ ವಸತಿ, ದರ್ಶನ/ವೀಕ್ಷಣೆ, ಸ್ಥಳೀಯ ಸಾರಿಗೆ, ರೈಲಿನಲ್ಲಿ ಮತ್ತು ಹೊರಗೆ ಊಟದ ವ್ಯವಸ್ಥೆ, ಮೀಸಲಾದ ಟೂರ್ ಮ್ಯಾನೇಜರ್‌ಗಳು, ಬೋಗಿ ಭದ್ರತೆ, ಪ್ರಯಾಣ ವಿಮೆ ಮತ್ತು ಪ್ರಯಾಣದುದ್ದಕ್ಕೂ ನೆರವು ಸೇರಿವೆ. ಒಂದೇ ಕುಟುಂಬ ಅಥವಾ ಗುಂಪಿನ ಸದಸ್ಯರು ಒಂದೇ ಬೋಗಿ ಮತ್ತು ಬೇನಲ್ಲಿ ಪ್ರಯಾಣಿಸಲು ಸೌಕರ್ಯ ಒದಗಿಸಲಾಗುತ್ತದೆ. ದೈನಂದಿನ ಅಗತ್ಯ ವಸ್ತುಗಳನ್ನು ಮಾತ್ರ ಪ್ರವಾಸಕ್ಕೆ ಕೊಂಡೊಯ್ದು, ಮುಖ್ಯ ಲಗೇಜ್‌ಗಳನ್ನು ರೈಲಿನಲ್ಲಿಯೇ ಸುರಕ್ಷಿತವಾಗಿ ಇಡಬಹುದು.