ಭಜನೆಗಳು ಗ್ರಾಮಗಳ ಐಕ್ಯತೆಗೆ ಪ್ರೇರಣೆ villages 
ರಾಜ್ಯ

ಭಜನೆಗಳು ಗ್ರಾಮಗಳ ಐಕ್ಯತೆಗೆ ಪ್ರೇರಣೆ villages

ಮುಳಬಾಗಿಲು: ಗ್ರಾಮಗಳಲ್ಲಿ ರೈತರು ಒಗ್ಗಟ್ಟಿನಿಂದ ಸಾಮರಸ್ಯದ ಜೀವನ ನಡೆಸುವುದನ್ನು ಮಾಡಿದರೆ, ಆ ಗ್ರಾಮ ದೇಶಕ್ಕೆ ಮಾದರಿ ಗ್ರಾಮವಾಗಲಿ ಸಾಧ್ಯವಾಗುತ್ತದೆ ಎಂದು ಭಾರತೀಯ ಕಿಸಾನ್​ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೆ. ಸಾಯಿ ರೆಡ್ಡಿ ತಿಳಿಸಿದರು.villages
ತಾಲೂಕಿನ ದುಗ್ಗಸಂದ್ರ ಹೋಬಳಿ ಅರಹಳ್ಳಿಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ಕಿಸಾನ್​ ಸಂಘದ ಗ್ರಾಮ ಸಮಿತಿಯಿಂದ ಹಮ್ಮಿಕೊಂಡಿದ್ದ ಭೂ ಸುಪೋಷನ ಪೂಜೆ, ಓ ಪೂಜೆ, ಗಂಗಾ ಪೂಜೆ ಹಾಗೂ ಗ್ರಾಮ ಸಮಿತಿ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಹಿಂದೆ ನಮ್ಮ ಎಲ್ಲರ ಪೂರ್ವಿಕರು ಪ್ರತಿದಿನ ದೇವಾಲಯಗಳು ಬಳಿ ಭಜನೆ ಸತ್ಸಂಗ ಕಾರ್ಯಕ್ರಮಗಳ ಮೂಲಕ ಒಂದೆಡೆ ಸೇರುತ್ತಿದ್ದರು. ಆ ರಾತ್ರಿ ಗ್ರಾಮದಲ್ಲಿ ಅಣ್ಣತಮ್ಮಂದಿರ ಸಮಸ್ಯೆಗಳು ಇತರೆ ಯಾವುದೇ ಸಮಸ್ಯೆಗಳು ಬಂದರು, ಅದನ್ನು ಪಂಚರು ಗಮನಿಸಿ ಇತ್ಯರ್ಥ ಮಾಡುತ್ತಿದ್ದರು. ಆದ್ದರಿಂದ ಸಣ್ಣಪುಟ್ಟ ವಿಷಯಗಳಿಂದ ದೊಡ್ಡ ವಿಷಯಗಳವರೆಗೂ ಸರ್ಕಾರಿ ಕಚೇರಿಗೆ, ಪೊಲೀಸ್​ ಠಾಣೆ ಹೋಗುತ್ತಿದ್ದೇವೆ. ಇದಲ್ಲದೆ ನ್ಯಾಯಾಲಯಗಳಿಗೆ ಹೋಗಿ ನೆಮ್ಮದಿ ಮತ್ತು ಆಯಸ್ಸು ಕಳೆದುಕೊಳ್ಳುವುದರ ಜತೆಗೆ ವೈಮನಸುಗಳು ಹೆಚ್ಚಾಗಿ ಅಪರಾಧಗಳ ಸಂಖ್ಯೆಯು ಬೆಳೆಯುತ್ತಿದೆ ಇವು ಉತ್ತಮ ಬೆಳವಣಿಗೆಗಳಲ್ಲ ಎಂದರು.
ಕಿಸಾನ್​ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ನಮ್ಮ ದೇಶದ ಸಂಸತಿ ಪರಂಪರೆಗಳು ಪ್ರಕೃತಿಗೆ ಅನುಗುಣವಾಗಿ ನಡೆದುಕೊಂಡು ಬಂದಿದೆ. ನಮ್ಮ ಪೂರ್ವಿಕರು ಇದನ್ನು ಅನುಸರಿಸಿಕೊಂಡು ಬಂದು ಪರಿಣಾಮ ಶುದ್ಧ ಕುಡಿಯುವ ನೀರು, ಶುದ್ಧವಾದ ಆಹಾರ ಪದಾರ್ಥಗಳು ಬೆಳೆಯುತ್ತಿದ್ದರು. ಜತೆಗೆ ಉತ್ತಮವಾದ ಗಿಡಮರಗಳ ಮೂಲಕ ಪ್ರಕೃತಿಯೊಂದಿಗೆ ಜೀವನ ಸಾಗಿಸುತ್ತಿದ್ದರು ಎಂದರು.
ಮುಡಿಯನೂರು ಜಯಲಕ್ಷ್ಮಮ್ಮ, ಪ್ರೇಮಮ್ಮ, ತಾಲೂಕು ಅಧ್ಯಕ್ಷ ಉಗಿನಿ ಆರ್​. ನಾರಾಯಣಗೌಡ, ಕಾರ್ಯದರ್ಶಿ ಪಿ ಗಂಗಾಪುರ ಮುನಿರಾಮಯ್ಯ, ನಗರ ಘಟಕದ ಅಧ್ಯಕ್ಷ ಬೆಮೆಲ್​ ಧನಂಜಯ, ಕಾರ್ಯದರ್ಶಿ ಕೆ. ಮಧುಸೂದನ್​,ಅರಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಆರ್​.ರಮೇಶ್​, ಕಾರ್ಯದರ್ಶಿ ತಮ್ಮಣ್ಣ, ಸದಸ್ಯರಾದ ಜಿ.ಕೆ. ಜನಾರ್ಧನ್​, ಮುನೇಗೌಡ, ಮಣಿಕಂಠಗೌಡ, ಅಂಗಪ್ಪ, ಗೋವಿಂದಸ್ವಾಮಿ, ಡಿ. ಶ್ರೀನಿವಾಸ್​, ಕೆಂಪಮ್ಮ, ಪದ್ಮಮ್ಮ ಇದ್ದರು.