ಕಲಬುರಗಿ ಜಿಲ್ಲೆಯ ವಾಡಿ ರೈಲು ನಿಲ್ದಾಣದಲ್ಲಿ ಜಮಾಗೊಂಡಿದ್ದ ಹಿಂದು ಕಾರ್ಯಕರ್ತರತ್ತ ಕೈ ಬೀಸಿದ ಮೋಹನ ಭಾಗವತ್​. 
ರಾಜ್ಯ

ಯೋಗಕ್ಷೇಮ ವಿಚಾರಿಸಿದ ಭಾಗವತ್​

ಪ್ರಮುಖ ಮುಖ್ಯಾಂಶಗಳು

  • ವಾಡಿಯಲ್ಲಿ ಹಿಂದೂ ಕಾರ್ಯಕರ್ತರ
ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​)ದ ರಾಷ್ಟ್ರೀಯ ಸರಸಂಚಾಲಕ ಮೋಹನ ಭಾಗವತ್​ ಅವರು ಬಿಗಿ ಭದ್ರತೆಯನ್ನು ಲೆಕ್ಕಿಸದೆ ರೈಲಿನಿಂದ ಇಳಿದು ಹಿಂದುಪರ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿದ ಪ್ರಸಂಗಕ್ಕೆ ವಾಡಿ ಪಟ್ಟಣ ಗುರುವಾರ ಸಂಜೆ ಸಾಕ್ಷಿಯಾಯಿತು. ಭಾಗವತ್​ ಅವರು ರೈಲಿನ ಬಾಗಿಲಿಗೆ ಬರುತ್ತಿದ್ದಂತೆ ನಿಲ್ದಾಣದಲ್ಲಿ ಸೇರಿದ್ದ ನೂರಾರು ಜನ ಅಭಿಮಾನಿಗಳು ಜಯಘೋಷಗಳನ್ನು ಮೊಳಗಿಸಿದರು. ಜೈ ಶ್ರೀರಾಮ್​, ವಂದೇ ಮಾತರಂ, ಭೋಲೊ ಭಾರತ್​ ಮಾತಾ ಕೀ ಜೈ ಮೊದಲಾದ ಘೋಷಣೆಗಳು ಜೋರ್ದಾರ್​ ಆಗಿ ಕೇಳಿದವು.
ಗುರುವಾರ ಸಂಜೆ ಉದ್ಯಾನ ಎಕ್ಸ್​ಪ್ರೆಸ್​ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ವಾಡಿ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಭದ್ರತೆ ಲೆಕ್ಕಿಸದೆ ಕೆಳಗೆ ಇಳಿದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರನ್ನು ಭೇಟಿ ಮಾಡಿದರು. ಆಗ ಭದ್ರತಾ ಸಿಬ್ಬಂದಿ ಅವರನ್ನು ಮತ್ತೇ ರೈಲಿನ ಬಾಗಿಲು ಬಳಿ ಕರೆದುಕೊಂಡು ಹೋದರು.
ಈ ವೇಳೆ ವಾಡಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ವೀರಣ್ಣ ಯಾರಿ ಭದ್ರತೆ ಬೇಧಿಸಿ ಮೋಹನ್​ ಭಾಗವತ್​ ಅವರಿಗೆ ಅಪ್ರತಿಮ ದೇಶಭಕ್ತ ವೀರ ಸಾವರ್ಕರ್​ ಕೃತಿ ನೀಡಿ ಗೌರವಿಸಿದರು.
ಭಾಗವತರಿಗೆ ಹೂಗುಚ್ಚ ನೀಡಲು ಯುವಕರು ನೂಕುನುಗ್ಗಲು ಆಯಿತು. ಭದ್ರತಾ ಸಿಬ್ಬಂದಿ ಯಾರನ್ನೂ ಹತ್ತಿರಕ್ಕೆ ಬಿಡಲಿಲ್ಲ. ಕೆಲವರು ಮೊಬೈನಲ್ಲಿ ದೃಶ್ಯ ಸೆರೆ ಹಿಡಿಯಲು ಮತ್ತು ಪೋಟೋ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸಿದಾಗ ಸಿಬ್ಬಂದಿ ತಡೆದು ಮೊಬೈಲ್​ ಕಸಿದುಕೊಂಡ ಪ್ರಸಂಗ ಸಹ ನಡೆಯಿತು.