ಯಾದಗಿರಿಯಲ್ಲಿ ಗುರುವಾರ ಹಮ್ಮಿಕೊಂಡ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಸಾಧಕರನ್ನು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಸನ್ಮಾನಿಸಿದರು. ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್​, ಶ್ರೀಧರ ಗೊಟುರ, ಮಲ್ಲಿಕಾರ್ಜುನ ಕಟ್ಟಿಮನಿ ಇತರರಿದ್ದರು. 
ರಾಜ್ಯ

ಮನುಕುಲ ಉದ್ಧಾರ ಮಾಡಿದ ಭಗೀರಥ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ಹೇಳಿಕೆ
  • ಯಾದಗಿರಿಯಲ್ಲಿ ಅದ್ದೂರಿ ಜಯಂತಿ ಆಚರಣೆ
ಯಾದಗಿರಿ: ಗಂಗೆಯನ್ನೇ ಧರೆಗಿಳಿಸಿ ಪೂರ್ವಜರಿಗೆ ಮುಕ್ತಿ ನೀಡಿದ ಭಗೀರಥ ಮಹರ್ಷಿಗಳ ಪ್ರಯತ್ನದಿಂದ ಇಡೀ ಮನುಕುಲದ ಜೀವರಾಶಿಗಳ ಕಲ್ಯಾಣವಾಗಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ನಗರಸಭೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡ ಶ್ರೀಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಗೀರಥ ಉಪ್ಪಾರ ಸಮಾಜದ ಆರಾಧ್ಯದೈವ, ಮಹಾನ್​ ಛಲಗಾರ ಮತ್ತು ಪ್ರಯತ್ನಶಿಲ. ರಾಜ್ಯಭಾರ ತ್ಯಜಿಸಿ ಕಪಿಲ ಮಹರ್ಷಿಯ ಶಾಪದಿಂದ ಸುಟ್ಟು ಭಸ್ಮವಾಗಿದ್ದ ಸಗರ ಚಕ್ರವರ್ತಿಯ ಮಕ್ಕಳ ಸದ್ಗತಿಗಾಗಿ ಹಿಮಾಲಯದಲ್ಲಿ ಕಠಿಣ ತಪಸ್ಸು ಮಾಡಿದರು. ಭಗೀರಥನನ್ನು ಉಪ್ಪಾರ ಕುಲತಿಲಕ ಎಂದು ಕರೆಯಲಾಗುತ್ತದೆ. ಅವರ ನಿರಂತರ ಪರಿಶ್ರಮದ ಫಲವಾಗಿ ಗಂಗೆ ಧರೆಗಿಳಿದು ಲೋಕಕಲ್ಯಾಣ ಮಾಡುವಂತೆ ಮಾಡಿದರು ಎಂದು ಹೇಳಿದರು.
ಉಪ್ಪಾರ ಸಮಾಜ ಶ್ರಮಜೀವಿಗಳು.ಸ್ವಾತಂತ್ರ$್ಯಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಅವರೊಂದಿಗೆ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಮದ್ದು ಗುಂಡು,ತಯಾರಿಕೆ,ಗಾರೆ ಕೂಲಿಕೆಲಸ, ಕೋಟೆ ಕೊತ್ತಲಗಳ ನಿರ್ಮಾಣ ಮಾಡಿ ಸ್ವಾವಲಂಬಿ ಜೀವನ ನಡೆಸುವ ಸಮಾಜವಾಗಿದೆ. ಈ ಜನಾಂಗಕ್ಕೆ ಕೇಂದ್ರ ಸರ್ಕಾರದ ಎಸ್​ಸಿ, ಎಸ್​ಟಿ ಮೀಸಲು ಪಟ್ಟಿ ಗೆ ಸೇರಿಸಲು ಬೇಡಿಕೆಯಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು. ಜನಾಂಗದವರೂ ಕೂಡ ಈ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು.ಉಪನ್ಯಾಸ ನೀಡಿದ ಸಮಾಜ ಸೇವಕ ಬನ್ನಪ್ಪ ಹುಲಿಬೆಟ್​ ಅವರು ಉಪ್ಪಾರ ಸಮುದಾಯ ನಿಗದಿತ ಪ್ರಮಾಣದ ಶೈಣಿಕ , ಆರ್ಥಿಕ,ರಾಜಕೀಯ ಪ್ರಾತಿನಿಧ್ಯ ಪಡೆದಿಲ್ಲ. ಈ ಸಮುದಾಯದವರು ಆರ್ಥಿಕವಾಗಿ ಸಬಲರಾಗಬೇಕು. ಭಗೀರಥ ಮಹರ್ಷಿಯ ಛಲ, ಪ್ರಯತ್ನ ಮತ್ತು ಸಾಧನೆಯನ್ನು ಆದರ್ಶವಾಗಿಟ್ಟುಕೊಂಡು ಸಮಾಜವು ಸಂಟಿತವಾಗಬೇಕು.ಮಕ್ಕಳಿಗೆ ಶಿಣ ದೊರಕಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ ಬಾಬುರಾವ್​ ಕಾಡ್ಲೂರ್​, ಸಹಾಯಕ ಆಯುಕ್ತ ಶ್ರೀಧರ್​ ಗೋಟುರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರದೇವಿ ಮಠಪತಿ, ಉಪ್ಪಾರ ಸಮಾಜದ ಜಿಲ್ಲಾಧ್ಯ ಮಲ್ಲಿಕಾರ್ಜುನ ಕಟ್ಟಿಮನಿ ಇದ್ದರು. ಶರಣಪ್ಪ ದಳಪತಿ ಶೆಟ್ಟಿಕೇರಾ ಸ್ವಾಗತಿಸಿದರು. ಸಮಾಜದ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು. ಶರಣು ವಟಾರ್​ ನಾಡಗೀತೆ ಹಾಡಿದರು. ರೇಣುಕಾ