ಬಿಜಿಎಂಎಲ್, ಬೆಮೆಲ್‌ನಿಂದ 27 ಕೋಟಿ ರೂ. ತೆರಿಗೆ ಬಾಕಿ bemel 
ರಾಜ್ಯ

ಬಿಜಿಎಂಎಲ್, ಬೆಮೆಲ್‌ನಿಂದ 27 ಕೋಟಿ ರೂ. ತೆರಿಗೆ ಬಾಕಿ bemel

ಪ್ರಮುಖ ಮುಖ್ಯಾಂಶಗಳು

  • ಕೆಜಿಫ್ ನಗರಸಭೆ ಅಧಿಕಾರಿಗಳಿಗೆ ಡಿಸಿ ತರಾಟೆ ಬಾಕಿ ವಸೂಲಿ ಪೂರ್ಣಗೊಳಿಸಲು ತಾಕೀತು
ಕೆಜಿಎಫ್: ಬಿಜಿಎಂಎಲ್ ಮತ್ತು ಬೆಮೆಲ್ ಆಡಳಿತ ಮಂಡಳಿಗಳಿಂದ ನಗರಸಭೆಗೆ 27 ಕೋಟಿ ರೂ. ತೆರಿಗೆ ಬಾಕಿ ಇದ್ದು, ವಸೂಲಿ ವಾಡಲು ಏಕೆ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಡಾ.ಎಂ.ಆರ್.ರವಿ ನಗರಸಭೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. bemel
ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಗುರುವಾರ ನಗರಸಭೆಗೆ ಭೇಟಿ ನೀಡಿ ವಾತನಾಡಿದರು.
ಕಂದಾಯ ಅಧಿಕಾರಿಗಳು ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರೆ ಸಾಲದು. ಸರ್ಕಾರದಿಂದ ನೀವು ಪಡೆಯುವ ಸಂಬಳಕ್ಕೆ ಸರಿಯಾಗಿ ಕೆಲಸ ವಾಡಬೇಕು. ನಗರಸಭೆಯಿಂದ ಅನಾವಶ್ಯಕ ಅಕೌಂಟ್‌ಗಳನ್ನು ಏಕೆ ತೆರೆಯಲಾಗಿದೆ?, ನಗರಸಭೆಯಲ್ಲಿ 49 ಬ್ಯಾಂಕ್ ಖಾತೆಗಳನ್ನು ಏಕೆ ವಾಡಲಾಗಿದೆ?, ಇದರಿಂದ ಯಾರಿಗೆ ಉಪಯೋಗವಾಗಿದೆ. ಮೊದಲು ಅನಾವಶ್ಯಕ ಖಾತೆಗಳನ್ನು ಬಂದ್ ವಾಡಿಸಿ ಎಂದು ತಾಕೀತು ಮಾಡಿದರು.
15ನೇ ಹಣಕಾಸು ಹಾಗೂ ಸರ್ಕಾರದ ವಿವಿಧ ಮೂಲಗಳಿಂದ ಸಂಗ್ರಹವಾಗುವ ತೆರಿಗೆ ವಿವರಗಳ ವಾಹಿತಿ ನೀಡುವಂತೆ ಅಧಿಕಾರಿಗಳನ್ನು ಕೇಳಿದಾಗ ಸಮರ್ಪಕ ವಾಹಿತಿ ಒದಗಿಸುವಲ್ಲಿ ವಿಫಲರಾದರು. ಆಗ ಅಧಿಕಾರಿಗಳ ಮೇಲೆ ಗರಂ ಆದ ಡಿಸಿ, ಬಿಜಿಎಂಎಲ್ ಹಾಗೂ ಬಿಇಎಂಎಲ್ ಕಂಪನಿಗಳಿಂದ ಬರಬೇಕಾದ 27 ಕೋಟಿ ರೂ. ಎಂಬುದು ಸಣ್ಣ ಮೊತ್ತವೇ?, ಬಾಕಿ ಇರುವ ಬಗ್ಗೆ ನನ್ನ ಗಮನಕ್ಕೆ ಏಕೆ ತಂದಿಲ್ಲ ಎಂದು ಅಸವಾಧಾನ ವ್ಯಕ್ತಪಡಿಸಿದರು. ಕೂಡಲೇ ಎರಡೂ ಸಂಸ್ಥೆಗಳಿಗೆ ನೋಟಿಸ್ ಜಾರಿ ವಾಡಿ ಎಂದು ಸೂಚಿಸಿದರು.
ಕೆಜಿಎಫ್ ನಗರಸಭೆಯಲ್ಲಿ ಶೇ.92 ತೆರಿಗೆ ವಸೂಲಿ ವಾಡಲಾಗಿದ್ದರೂ ಇನ್ನು ಶೇ.8 ಬಾಕಿ ಉಳಿದಿದೆ. ಶೀಘ್ರ ಪೂರ್ಣಗೊಳಿಸುವಂತೆ ಆದೇಶ ನೀಡಲಾಗಿದೆ ಎಂದರು.
ಬೀದಿ ನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ: ನಾನು ಇಲ್ಲಿಗೆ ಬಂದಾಗ ಮಾತ್ರ ರಸ್ತೆಗಳು ಸ್ವಚ್ಛವಾಗಿರುಂತೆ ಮಾಡಬೇಡಿ. ನಿತ್ಯ ಕಸ ವಿಲೇವಾರಿ ವಾಡಬೇಕು. ಸಾರ್ವಜನಿಕರಿಗೆ ಹಸಿ ಹಾಗೂ ಒಣ ಕಸ ವಿಂಗಡಿಸಿ ನೀಡುವ ಜಾಗೃತಿ ಮೂಡಿಸಬೇಕು. ಬೀದಿ ನಾಯಿಗಳ ಹಾವಳಿ ನಿಯಂತ್ರಣ ವಾಡುವ ನಿಟ್ಟಿನಲ್ಲಿ ನ್ಯಾಯಾಲಯವು ಆದೇಶ ನೀಡಿದ್ದು, ಬೀದಿ ನಾಯಿಗಳ ಆಶ್ರಯ ತಾಣಗಳನ್ನು ಪ್ರಾರಂಭಿಸಬೇಕು ಮತ್ತು ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಬೇಕು ಎಂದು ಡಿಸಿ ಸೂಚಿಸಿದರು.
ಪ್ರಾಣಿ ವಧೆ ಸ್ಥಳ ಪರಿಶೀಲಿಸಿ: ದನಗಳನ್ನು ಕಟಾವು ವಾಡುವ ಕಸಾಯಿಖಾನೆಗಳು ಎಲ್ಲಿ ಇವೆ? ಎಂದು ಕೇಳಿದಾಗ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ. ಆಗ ಕಸಾಯಿಖಾನೆಗಳು ಇಲ್ಲ ಎಂದು ಹೇಳುತ್ತಿದ್ದೀರಿ, ಹಾಗಾದರೆ ದನಗಳನ್ನು ವಾಂಸಕ್ಕಾಗಿ ಎಲ್ಲಿ ವಧೆ ವಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಪೌರಾಯುಕ್ತರು ಇಲ್ಲಿ ವಧೆ ವಾಡುವುದಿಲ್ಲ, ಆದರೆ ಎಲ್ಲಿ ವಧೆ ವಾಡಲಾಗುತ್ತಿದೆ ಎಂಬುದು ಗೋತ್ತಿಲ್ಲ ಎಂದು ಹೇಳುತ್ತಿದ್ದಂತೆ ನೀವು ಪೌರಾಯುಕ್ತರು ಪ್ರತಿದಿನ ಬೆಳಗ್ಗೆ ಹೋಗಿ ಸ್ಥಳ ಪರಿಶೀಲನೆ ವಾಡಬೇಕು ಎಂದು ಸೂಚಿಸಿದರು.
ಇಂದು ಜಿಲ್ಲಾದ್ಯಂತ ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆಗೆ ಚಾಲನೆ: ಕೋಲಾರಮ್ಮ ಸ್ವಚ್ಛತಾ ಕಾರ್ಯಪಡೆ ಉತ್ತಮವಾಗಿ ಕೆಲಸ ವಾಡಿರುವುದರಿಂದ, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರುವುದರಿಂದ ನ.21ರಂದು ಕೋಲಾರಮ್ಮ ಸ್ವಚ್ಛತೆ ಕಾರ್ಯಪಡೆಗೆ ಜಿಲ್ಲಾ ಉಸ್ತುವಾರಿ ಸಚಿವರು ಕೋಲಾರ ನಗರ ಸೇರಿದಂತೆ ಜಿಲ್ಲೆಯ ಎಲ್ಲ ನಗರಗಳಿಗೂ ಚಾಲನೆ ನೀಡಲಿದ್ದಾರೆ. ಕೋಲಾರಮ್ಮ ಸ್ವಚ್ಛತಾ ವಾಹಿನಿಯು ಜಿಲ್ಲೆಯ ಎಲ್ಲ ನಗರಗಳಲ್ಲೂ ಸಂಚರಿಸಲಿದ್ದು, ರಸ್ತೆಯಲ್ಲಿ ಕಸ ಹಾಕುವವರ ವಿರುದ್ಧ ದಂಡ ವಿಧಿಸುತ್ತಾರೆ. ದಂಡ ನೀಡದಿದ್ದರೆ ಅವರ ವಿರುದ್ಧ ಎಫ್‌ಐಆರ್ ದಾಖಲು ವಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಇನ್ನು ವದ್ದರು ಮಕ್ಕಳು ವಾಕಿಂಗ್ ವಾಡಲು ಆಟವಾಡಲು ಉತ್ತಮ ವಾತವರಣವಿರುವ ಉದ್ಯಾನವನಗಳನ್ನು ನಿರ್ಮಿಸುವ ಉದ್ದೇಶ ಹೊಂದಿದ್ದು, ಈಗಾಗಲೇ ಸುಭಾಷ್ ಚಂದ್ರಂದ್ರಬೋಸ್ ಪಾರ್ಕ್ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಗಾಂಧಿವೃತ್ತದಲ್ಲಿವಿದ್ಯುತ್ ದೀಪಾಲಂಕಾರ ವಾಡಲಾಗುತ್ತಿದೆ. ಇನ್ನು ಕಿಂಗ್ ಜಾರ್ಜ್‌ಹಾಲ್ ಪಾರ್ಕ್‌ನ್ನು 3 ಕೋಟಿ ರೂ ವೆಚ್ಚದಲ್ಲಿ ಸೌಂದರ್ಯಿಕರಣಗೊಳಿಸಲು ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದರು.