ಕಲಬುರಗಿಯಲ್ಲಿ ನಡೆದ ದಿವ್ಯ ಸಂಜೆ ಕಾರ್ಯಕ್ರಮದಲ್ಲಿ ಸದ್ಗುರು ಮಧುಸೂದನ ಸಾಯಿ ಅವರನ್ನು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಸನ್ಮಾನಿಸಿದರು. ಬಸವರಾಜ ಪಾಟೀಲ್​ ಸೇಡಂ, ಬಿ.ಎನ್​.ನರಸಿಂಹಮೂರ್ತಿ, ಡಾ.ಗುರುರಾಜ ಕರಜಗಿ ಇದ್ದರು. 
ರಾಜ್ಯ

ಸದ್ಗುರು ಆಶೀರ್ವಾದ ಪಡೆದ ಬಿ.ಜಿ.ಪಾಟೀಲ್​

ಪ್ರಮುಖ ಮುಖ್ಯಾಂಶಗಳು

  • ಹಲವು ವಿಷಯ ಕುರಿತು ಶ್ರೀ ಮಧುಸೂದನ ಸಾಯಿ ಜತೆ ಎಂಎಲ್​ಸಿ ಚರ್ಚೆ
ಕಲಬುರಗಿ: ನಿಸ್ವಾರ್ಥ ಸೇವೆ ಮೂಲಕ ಶ್ರೇಷ್ಠ ಕಾಯಕ ಮಾಡುತ್ತಿರುವ "ಒನ್​ ವರ್ಲ್ಡ್​ ಒನ್​ ಫ್ಯಾಮಿಲಿ ಮಿಷನ್​' ಸೇವಾ ಅಭಿಯಾನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ. ಪಾಟೀಲ್​ ಸನ್ಮಾನಿಸಿ ಆಶೀರ್ವಾದ ಪಡೆದುಕೊಂಡರು.
ನವನಿಹಾಳದಲ್ಲಿರುವ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಹಾಗೂ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ಶಿಕ್ಷಣ ಸಂಸ್ಥೆ ಸಹಯೋಗದಡಿ ನಗರದಲ್ಲಿ ಶ್ರೀ ಸತ್ಯಸಾಯಿ ಗ್ರಾಮ ಸುವರ್ಣ ಮಹೋತ್ಸವ ನಿಮಿತ್ತ ಬುಧವಾರ ಆಯೋಜಿಸಿದ್ದ ದಿವ್ಯ ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಾ.ಪಾಟೀಲರು ಸದ್ಗುರು ಜತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿ ಸಲಹೆ ಪಡೆದುಕೊಂಡರು.
ಜಿಲ್ಲೆಯ ಪ್ರಗತಿಗಾಗಿ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರ ಕುರಿತು ಸದ್ಗುರು ತಮ್ಮ ಅಧ್ಯಾತ್ಮಿಕ ವಿಚಾರಗಳನ್ನು ತಿಳಿಸಿ ನವನಿಹಾಳ ವಿವಿ ಕ್ಯಾಂಪಸ್​ನಲ್ಲಿ ಬೃಹತ್​ ಮಟ್ಟದ ಉಚಿತ ಆಸ್ಪತ್ರೆ ಸ್ಥಾಪನೆ ಮಾಡುವುದಾಗಿ ತಿಳಿಸಿದರು.
ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ, ಶರಣಬಸವ ವಿಶ್ವವಿದ್ಯಾಲಯ ಕುಲಾಧಿಪತಿಗಳಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್​.ಅಪ್ಪ, ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ, ಮಾಜಿ ಸಂಸದ ಬಸವರಾಜ ಪಾಟೀಲ್​ ಸೇಡಂ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್​, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್​ ತೆಲ್ಕೂರ, ದತ್ತಾತ್ರೇಯ ಪಾಟೀಲ್​ ರೇವೂರ, ಜಿಪಂ ಮಾಜಿ ಅಧ್ಯಕ್ಷ ನಿತಿನ್​ ಗುತ್ತೇದಾರ್​ ಇತರರಿದ್ದರು.