Beware of thieves at the bus stop! 
ರಾಜ್ಯ

ಬಸ್​ ನಿಲ್ದಾಣದಲ್ಲಿ ಕಳ್ಳರಿದ್ದಾರೆ ಎಚ್ಚರಿಕೆ!

ಚಿಂತಾಮಣಿ: ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ರಾತ್ರಿ ವೇಳೆ ಕಳ್ಳರ ಹಾವಳಿ ಮಿತಿಮೀರಿದ್ದು, ದೂರದ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರು ಆತಂಕದಲ್ಲಿ ರಾತ್ರಿ ಕಳೆಯುವಂತಾಗಿದೆ. ನಿಲ್ದಾಣದಲ್ಲಿ ಸೂಕ್ತ ಪೊಲೀಸ್​ ಬಂದೋಬಸ್ತ್​ ಇಲ್ಲದಿರುವುದೇ ಕಳ್ಳರ ಹಾವಳಿಗೆ ಕಾರಣವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"

ಗಸ್ತು ತಿರುಗದ ಪೊಲೀಸರು

ರಾತ್ರಿ ವೇಳೆ ಕನಿಷ್ಠ ಪೊಲೀಸರು ಗಸ್ತು ತಿರುಗಬೇಕಾಗಿದ್ದರೂ ನಿಲ್ದಾಣದಲ್ಲಿ ರಾತ್ರಿ ವೇಳೆ ಪೊಲೀಸರ ಸುಳಿವೇ ಇರುವುದಿಲ್ಲ ಎಂದು ಸ್ಥಳಿಯ ವ್ಯಾಪಾರಿಗಳು ದೂರಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು, ಕುಡುಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಸ್​ ನಿಲ್ದಾಣದ ಆವರಣದಲ್ಲಿ ರಾತ್ರಿ 8ರಿಂದ ಮುಂಜಾನೆ 6ರ ವರೆಗೆ ಪೊಲೀಸ್​ ಗಸ್ತು ನಿಯೋಜಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಚಿಂತಾಮಣಿ ಬಸ್​ ನಿಲ್ದಾಣದಿಂದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಸೇರಿ ಆಂಧ್ರಪ್ರದೇಶದ ವಿವಿಧ ಭಾಗಗಳಿಗೆ ದಿನದ 24 ಗಂಟೆಯೂ ನೂರಾರು ಬಸ್​ಗಳು ಸಂಚರಿಸುತ್ತವೆ. ರಾತ್ರಿ 8ರ ನಂತರ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆಯಾಗುತ್ತಿದ್ದಂತೆ ಸಕ್ರಿಯರಾಗುವ ಕಳ್ಳರ ಗ್ಯಾಂಗ್​, ಬಸ್​ಗಾಗಿ ಕಾಯುತ್ತಾ ನಿದ್ದೆಗೆ ಜಾರುವ ಹಾಗೂ ಮದ್ಯ ಸೇವಿಸಿದ್ದ ಪ್ರಯಾಣಿಕರನ್ನು ಟಾರ್ಗೆಟ್​ ಮಾಡುತ್ತಿದ್ದಾರೆ.
"

ಚಿಂತಾಮಣಿ ಬಸ್​ ನಿಲ್ದಾಣದಲ್ಲಿ ರಾತ್ರಿಯಾಗುತ್ತಿದ್ದಂತೆ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಲ್ದಾಣದಲ್ಲಿ ಪುಂಡ&ಪೋಕರಿಗಳ ಮತ್ತು ಕುಡುಕರ ಕಾಟ ಮಿತಿಮೀರಿದೆ. ವಿವಿಧೆಡೆಯಿಂದ ತಡರಾತ್ರಿ ಬರುವ ಮಹಿಳಾ ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲಲೂ ಭಯಪಡುವಂತಾಗಿದೆ. ಸಾರಿಗೆ ಸಂಸ್ಥೆಯ ಭದ್ರತಾ ಸಿಬ್ಬಂದಿಯೂ ನಿಷ್ಕಿ$ಯರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ನಗರ ಪೊಲೀಸರು ಎಚ್ಚೆತ್ತು ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು.

> ಮಂಜುನಾಥ ಜಿಲ್ಲಾ ಗ್ರಾಹಕರ ವೇದಿಕೆ ಮಾಜಿ ಸದಸ್ಯ

ಚಿಂತಾಮಣಿ ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಮದ್ಯ ಸೇವಿಸಿದ್ದ ಪ್ರಯಾಣಿಕರನ್ನು ಟಾರ್ಗೆಟ್​ ಮಾಡಿ ಹಣ ಕಿತ್ತುಕೊಳ್ಳುತ್ತಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು.

ನಗರದಲ್ಲಿ ಹಗಲು ವೇಳೆ ಖಾಸಗಿ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತಿದ್ದ ಓರ್ವ ಪ್ರಯಾಣಿಕರನ್ನು ಟಾರ್ಗೆಟ್​ ಮಾಡಿದ್ದ ಕಳ್ಳರ ಗ್ಯಾಂಗ್​, ಬೆದರಿಸಿ ಅವರಿಂದ ೋನ್​ ಪೇ ಮೂಲಕ ಹಣ ಹಾಕಿಸಿಕೊಂಡ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಹಲವಾರು ಜನ ಇದೇ ರೀತಿ ಆಗಿರುವುದನ್ನು ಬಹಿರಂಗ ಪಡಿಸಿದ್ದಾರೆ. ಈ ಬೆನ್ನಲ್ಲೇ ಪ್ರಕರಣದ ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
"

ಸಿಸಿ ಕ್ಯಾಮರಾ ಇದ್ದರೂ ಹಾವಳಿ

ಸ್​ ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿವೆಯೋ, ಇಲ್ಲವೋ ತಿಳಿಯುತ್ತಿಲ್ಲ. ನಿಲ್ದಾಣದ ಕತ್ತಲೆ ಕೋಣೆಗಳಲ್ಲಿ ಸೂಕ್ತ ಬೆಳಕಿನ (ಹೈಮಾಸ್ಟ್​ ದೀಪಗಳು) ವ್ಯವಸ್ಥೆ ಮಾಡಬೇಕು ಎಂಬುದು ಪ್ರಯಾಣಿಕರ ಅಭಿಪ್ರಾಯ. ಸಾರಿಗೆ ಸಂಸ್ಥೆ ಅಧಿಕಾರಿಗಳು, ಸ್ಥಳಿಯ ಪೊಲೀಸ್​ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಕಳ್ಳರ ಹಾವಳಿಗೆ ಬ್ರೇಕ್​ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಪ್ರಯಾಣಿಕರು ಚಿಂತಾಮಣಿ ಬಸ್​ ನಿಲ್ದಾಣಕ್ಕೆ ಬರಲು ಹಿಂಜರಿಯುವ ವಾತಾವರಣ ನಿಮಾರ್ಣವಾಗಲಿದೆ.

ಮಂಗಳವಾರ ರಾತ್ರಿ ಮದ್ಯ ಸೇವನೆ ಮಾಡಿದ್ದ ವ್ಯಕ್ತಿಯೊಬ್ಬರ ಬಳಿ ಹಣ, ಮೊಬೈಲ್​ ಕಿತ್ತುಕೊಳ್ಳಲು ಮುಂದಾಗಿರುವ ಕಳ್ಳರು ಬಸ್​ಗಾಗಿ ಕಾಯುತ್ತಿದ್ದ ಇತರ ಪ್ರಯಾಣಿಕರೊಬ್ಬರು ದೂರದಿಂದಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.