ಬೇತಮಂಗಲ ಪೊಲೀಸರು ಅಲರ್ಟ್ Bettamangala police
ಬೇತಮಂಗಲ: ಇತ್ತೀಚಿನ ದಿನಗಳಲ್ಲಿ ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಕಳವು, ಐಪಿಎಲ್ ಬೆಟ್ಟಿಂಗ್ ಸೇರಿ ಹಲವು ಪ್ರಕರಣಗಳು ನಡೆದಿರುವ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಬೇತಮಂಗಲ ಪೊಲೀಸರು ಭಾನುವಾರ ದಿಢೀರ್ ಕಾರ್ಯಾಚರಣೆ ನಡೆಸಿದರು. Bettamangala police
ಪಟ್ಟಣದ ಹಳೇ ಮದ್ರಾಸ್ ರಸ್ತೆ ಹಾಗೂ ಇತರೆ ವೃತ್ತಗಳಲ್ಲಿ ಸಬ್ ಇನ್‌ಸ್ಪೆಕ್ಟರ್ ತ್ಯಾಗರಾಜ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಸಿದರು. ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಸ್ಥಳದಲ್ಲೇ ದಂಡ ಹಾಕಿದ್ದರಲ್ಲದೆ, ಸರಿಯಾದ ದಾಖಲೆಗಳು ಇಲ್ಲದ, ಹೆಲ್ಮೆಟ್ ಇಲ್ಲದ ಅಪ್ರಾಪ್ತರು ವಾಹನ ಚಾಲನೆ, ಸೇರಿದಂತೆ ನೂರಾರು ದ್ವಿಚಕ್ರ, ಕಾರು, ಟೆಂಪೋ, ಆಟೋಗಳನ್ನು ತಡೆದು ದಂಡ ಹಾಕಿದರು.
ುಟ್‌ಪಾತ್ ಒತ್ತುವರಿ, ಯುವಕರು ವೀಲಿಂಗ್ ವಾಡುವುದು ಹಾಗೂ ಐಪಿಎಲ್ ಬೆಟ್ಟಿಂಗ್ ದಂಧೆ ಹಾಗೂ ಇತ್ತೀಚೆಗೆ ಪೊಲೀಸ್ ಠಾಣೆ ಎದುರಿನಲ್ಲೇ ಕಳ್ಳತನ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಕಂಡುಬಂದಿತ್ತು.
ಇದರಿಂದಾಗಿ ಅಲರ್ಟ್ ಆಗಿರುವ ಪೊಲೀಸರು ಎಲ್ಲ ರೀತಿಯ ತಪಾಸಣೆ ವಾಡುವ ಮೂಲಕ ಸುಗಮ ಸಂಚಾರ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಧೈರ್ಯ ತುಂಬುವ ಕೆಲಸ ವಾಡಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಮತ್ತು ಅಪರಾಧ ಕೃತ್ಯಗಳಿಗೆ ಬ್ರೇಕ್ ಹಾಕಲು ಈ ಕಠಿಣ ತಪಾಸಣೆ ಅನಿವಾರ್ಯ ಎಂದು ತಿಳಿಸಿರುವ ತ್ಯಾಗರಾಜ್ ಯಾವುದೇ ಅಪರಾಧ ಪ್ರಕರಣಗಳು ಕಂಡು ಬಂದರೆ ಪೊಲೀಸ್ ಠಾಣೆಗೆ ಅಥವಾ 112ಗೆ ಕರೆ ವಾಡಿ ಸಾರ್ವಜನಿಕರು ಪೊಲೀಸರ ಜತೆ ಕೈ ಜೋಡಿಸಬೇಕು ಎಂದು ಮನವಿ ವಾಡಿದ್ದಾರೆ.