Bengaluru Park Viral Saree Dadi Gym Video 
ರಾಜ್ಯ

ಬೆಂಗಳೂರು ಪಾರ್ಕ್‌ನಲ್ಲಿ ವೃದ್ಧೆಯ ಭರ್ಜರಿ ವರ್ಕೌಟ್ ಕಂಡು ನೆಟ್ಟಿಗರು ದಂಗು; ಸುರಕ್ಷತಾ ಕ್ರಮಕ್ಕೆ ಒತ್ತಾಯ..GBA

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಉದ್ಯಾನವನದಲ್ಲಿ ಸೀರೆಯುಟ್ಟ ಅಜ್ಜಿಯ ವ್ಯಾಯಾಮ ಕಂಡು ನೆಟ್ಟಿಗರು ದಂಗು
  • ಜಿಮ್ ಉಪಕರಣವನ್ನು ಅತಿ ವೇಗವಾಗಿ ಬಳಸುತ್ತಿರುವ ವಿಡಿಯೋ ವೈರಲ್
  • ಸುರಕ್ಷತಾ ಮತ್ತು ಕೆಲವು ನಿಯಮದ ಫಲಕವನ್ನು ಸರ್ಕಾರ ಹಾಕಬೇಕು ಎಂದು ನೆಟ್ಟಿಗರಿಂದ ಮನವಿ
ಬೆಂಗಳೂರು:ಸಾಮಾನ್ಯವಾಗಿ ಬೆಂಗಳೂರಿನ ಪಾರ್ಕ್​ನಲ್ಲಿ  ಹಿರಿಯರು ವಾಕಿಂಗ್​ ಅಥವಾ ಯಾರೊಂದಿಗಾದರೂ ಮನೆ ಸುದ್ದಿ ಮಾತಾಡುತ್ತಾ ಕುಳಿತಿರುತ್ತಾರೆ. ಇನ್ನು ಪುರುಷರು ದೇಶದ ಸುದ್ದಿ, ಕರ್ನಾಟಕದ ಬಗ್ಗೆ ಹರಡೆಯೊಡೆಯುತ್ತಾರೆ.  ಆದರೆ, ಇಲ್ಲೊಬ್ಬ ವೃದ್ಧೆ ವಯಸ್ಸಾಗಿದೆ ಎನ್ನುವ ನಿರಾಸೆಯನ್ನು ತೊರೆದು ಜೋಶ್​​ನಲ್ಲಿ ಓಪನ್ ಜಿಮ್‌ನ 'ಏರ್ ಸ್ವಿಂಗ್' ಮೇಲೆ ನಿಂತು ಭರ್ಜರಿ ವರ್ಕೌಟ್​ ಮಾಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. 

ವಿಡಿಯೋದಲ್ಲಿ ಏನಿದೆ?

ಸಿಲಿಕಾನ್ ಸಿಟಿಯ ಪಾರ್ಕ್‌ವೊಂದರಲ್ಲಿ ವಯಸ್ಸಾದ ಅಜ್ಜಿಯೊಬ್ಬರು ಸೀರೆ ಉಟ್ಟುಕೊಂಡೇ 'ಏರ್ ಸ್ವಿಂಗ್' ಉಪಕರಣದ ಮೇಲೆ ನಿಂತು ಅತ್ಯಂತ ವೇಗವಾಗಿ ದೇಹವನ್ನು ಮುಂದೆ ಮತ್ತು ಹಿಂದೆ ಆಡಿಸುತ್ತಾ ವ್ಯಾಯಾಮ ಮಾಡುತ್ತಿರುವ ವಿಡಿಯೋವನ್ನು ಬೆಂಗಳೂರಿನ ಸಂದೀಪ್ ಪಾರ್ಶ್ವನಾಥ್ ಎಂಬುವವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಜ್ಜಿಯ ಈ ವೇಗದ ವರ್ಕೌಟ್ ಅನ್ನು ಪಾರ್ಕ್‌ನಲ್ಲಿದ್ದ ಮಕ್ಕಳು ಸೇರಿದಂತೆ ಹಲವರು ಆಶ್ಚರ್ಯದಿಂದ ನೋಡುತ್ತ ನಿಂತಿರುವುದು ವಿಡಿಯೋದಲ್ಲಿದೆ.
ನೆಟ್ಟಿಗರು ಹೇಳಿದ್ದೇನು?
ಕೆಲವರು ಮಹಿಳೆ ತೋರಿಸಿದ ಶಕ್ತಿ ಮತ್ತು ಉತ್ಸಾಹವನ್ನು ಶ್ಲಾಘಿಸಿದರೆ, ಈ ವೈರಲ್ ವಿಡಿಯೋ ಸಾರ್ವಜನಿಕ ಉದ್ಯಾನವನಗಳಲ್ಲಿ ಹೊರಾಂಗಣ ಜಿಮ್ ಉಪಕರಣಗಳ ಸುರಕ್ಷಿತ ಬಳಕೆಯ ಬಗ್ಗೆ ವ್ಯಾಪಕ ಪ್ರಶ್ನೆಗಳನ್ನು ಎತ್ತಿದೆ.

ಮುನ್ನೆಚ್ಚರಿಕೆ ಇಲ್ಲದೆ ಹಾಗೂ ಸರಿಯಾದ ಮಾರ್ಗದರ್ಶನವಿಲ್ಲದೆ ಹಿರಿಯ ನಾಗರಿಕರು ಇಂತಹ ಜಿಮ್ ಉಪಕರಣವನ್ನು ಇಷ್ಟು ಸಲೀಸಾಗಿ ಬಳಕೆ ಮಾಡೋದು ತಪ್ಪಲ್ಲವೇ. ಅವರಿಗೆ ಏನಾದರೂ ಸಂಭವಿಸಿದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ?. ಜಿಬಿಎ ಅಧಿಕಾರಿಗಳು ಸುರಕ್ಷತಾ ನಿಯಮಗಳು ಮತ್ತು ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಪ್ರದರ್ಶನ ಆರಂಭಿಸಿ

ವೃದ್ಧೆಗೆ ಗೊತ್ತಿದೆ ಅದು ತನಗೇ ಅಪಾಯಕಾರಿ ಎಂದು. ನಾವು ಇತರರಿಗೆ ಅಪಾಯವನ್ನುಂಟುಮಾಡದೆ ನಮಗೇ ಅಪಾಯ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಇದು ಅನ್ವಯಿಸುತ್ತದೆ. ಸುಮ್ಮನೆ ಹೆಚ್ಚು ತಲೆಗೆ ಹಾಕಿಕೊಳ್ಳದೆ ಈ  ಪ್ರದರ್ಶನವನ್ನು ಆನಂದಿಸಿ ಎಂದು ಹೇಳಿದ್ದಾರೆ.

ನಿರ್ದಿಷ್ಟ ವಯಸ್ಸಿನ ಮಕ್ಕಳು ಮಾತ್ರ ಆಟದ ಸಲಕರಣೆಗಳನ್ನು ಬಳಸಬೇಕು ಎನ್ನುವ ಫಲಕವನ್ನು ಅಳವಡಿಸಬೇಕು. ಇದು ವಯಸ್ಕರಿಗೆ ಅಲ್ಲ. ವಯಸ್ಕರು ಅವುಗಳನ್ನು ತಮ್ಮ ಸಂತೋಷಕ್ಕಾಗಿ ಬಳಸುತ್ತಾರೆ, ಇದು ನೋಡಲು ನಿಜವಾಗಿಯೂ ಸಂತೋಷವಾಗುತ್ತದೆ, ಆದರೆ ಉಪಕರಣಗಳು ಹಾಳಾಗುತ್ತವೆ ಎದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಜನರಿಗೆ ಮುಕ್ತ ಜಾಗಗಳು ಮತ್ತು ಮೂಲಭೂತ ವ್ಯಾಯಾಮದ ಉಪಕರಣಗಳ ಅಗತ್ಯವಿದೆ ಎಂದು ಒಬ್ಬ ಬಳಕೆದಾರರು ವಾದಿಸಿದ್ದು, ಸರ್ಕಾರವು ಪ್ರತಿ ಸಾರ್ವಜನಿಕ ಉದ್ಯಾನವನದಲ್ಲಿ ಜಿಮ್ ತರಬೇತುದಾರರನ್ನು ನಿಯೋಜಿಸಲು ಸಾಧ್ಯವಿಲ್ಲ, ಆದರೆ ಮಾಹಿತಿ ನೀಡುವ ಸೂಚನಾ ಫಲಕಗಳನ್ನು ಹಾಕುವುದು ಉಪಯುಕ್ತ ಕ್ರಮ ಎಂದು ಸೇರಿಸಿದ್ದಾರೆ, (ಏಜೆನ್ಸೀಸ್).