Gold Bangle (ಚಿತ್ರ Instagram) 
ರಾಜ್ಯ

ಒಂದು ಫೋಟೋ ಕೇಳಿದ್ದಕ್ಕೆ ತನ್ನ ಕೈಲಿದ್ದ ಚಿನ್ನದ ಬಳೆಯನ್ನೇ ಗಿಫ್ಟ್​​ ಕೊಟ್ಟ ಬೆಂಗಳೂರಿನ ಹುಡುಗಿ! Gold Bangle

Gold Bangle: ಮೆಟ್ರೋ ಪ್ರಯಾಣಗಳು ಸಾಮಾನ್ಯವಾಗಿ ಜನದಟ್ಟಣೆಯ ಬೋಗಿಗಳು, ಕಳೆದುಹೋದ ಫೋನ್‌ಗಳು ಅಥವಾ ಪ್ರಯಾಣಿಕರ ಅಹಿತಕರ ವರ್ತನೆಗೆ ಹೆಸರುವಾಸಿಯಾಗಿರುತ್ತವೆ. ಆದರೆ, ಬೆಂಗಳೂರಿನ ಮೆಟ್ರೋದಲ್ಲಿ ನಡೆದ ಒಂದು ಸಣ್ಣ ಕ್ಷಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದ್ದು, ಸದ್ಯ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ವೈರಲ್​ ಆಗಿದ್ದೇನು?

ಮಹಿಳೆಯೊಬ್ಬರು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪಕ್ಕದಲ್ಲೇ ಕುಳಿತಿದ್ದ ಪುಟ್ಟ ಹುಡುಗಿಯ ಕೈಯಲ್ಲಿ ಇದ್ದ ಚಿನ್ನದ ಬಳೆಯನ್ನು ಗಮನಿಸಿದ್ದಾರೆ. ನಂತರ ಅದರ ವಿನ್ಯಾಸ ನೋಡಿ ಅಕ್ಕಸಾಲಿಗನಿಗೆ ತೋರಿಸಲು ಫೋಟೋ ತೆಗೆದುಕೊಳ್ಳಬಹುದೇ ಎಂದು ಆ ಹುಡುಗಿಯನ್ನು ಕೇಳಿದ್ದಾರೆ.
ಆದರೆ ಆ ಹುಡುಗಿ ಫೋಟೋ ತೆಗೆದುಕೊಳ್ಳಲು ನಿರಾಕರಿಸಿದ್ದಲ್ಲದೆ, ಆ ಮಹಿಳೆಗೆ ಅಚ್ಚರಿಯನ್ನುಂಟು ಮಾಡಿದ್ದಾಳೆ. ಅದೇನಂತೀರಾ? ಆ ಹುಡುಗಿಯು ಫೋಟೋ ತೆಗೆದುಕೊಳ್ಳುವ ಬದಲಿಗೆ ಮಹಿಳೆಗೆ ತನ್ನ ಬಳೆಯನ್ನೇ ಬಿಚ್ಚಿ ಕೊಟ್ಟು, ಇದನ್ನು ತೆಗೆದುಕೊಳ್ಳಿ. ಇದು ಅಕ್ಕಸಾಲಿಗನಿಗೆ ಬಳೆಯ ವಿನ್ಯಾಸವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ದಿಗ್ಭ್ರಮೆಗೊಂಡ ಮಹಿಳೆ!

ಬಳೆಯನ್ನು ಕೊಟ್ಟ ನಂತರ, ಹುಡುಗಿ ಮುಗುಳ್ನಗುತ್ತಾ ಅದು ಅಸಲಿ ಚಿನ್ನದಿಂದ ಮಾಡಲ್ಪಟ್ಟಿಲ್ಲ, ಬದಲಾಗಿ ರೋಲ್ಡ್​ ಗೋಲ್ಡ್​ ಬಳೆ ಎಂದು ಹೇಳಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯ ಮೇಲೆ ಯಾವುದೇ ಹಿಂಜರಿಕೆಯಿಲ್ಲದೆ ಇಟ್ಟ ನಂಬಿಕೆಯು ತುಂಬಾ ವಿಶೇಷ ಎಂದು ಮಹಿಳೆಯು ಭಾವುಕಳಾಗಿದ್ದಾರೆ.
ಈ ಹೃದಯೀ ಸ್ಪರ್ಶಿ ಘಟನೆಯಿಂದ ಸಂತೋಷಗೊಂಡ ಮಹಿಳೆಯು ಮೆಟ್ರೋ ಪ್ರಯಾಣದಲ್ಲಿ ಸಂಭವಿಸಿದ ಘಟನೆಯನ್ನು ನೆನಪಿಸಿಕೊಳ್ಳಲು ಆ ಬಳೆಯನ್ನು ತನ್ನೊಂದಿಗೆ ಇಟ್ಟುಕೊಳ್ಳಲು ನಿರ್ಧರಿಸಿ, ತನ್ನ ಸಂಪೂರ್ಣ ಅನುಭವನ್ನು X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆದಾಗ್ಯೂ, ಮಹಿಳೆಯು ಬಳೆಯ ಫೋಟೋ ತೆಗೆದುಕೊಳ್ಳಲು ಕೇಳಿದಾಗ ಅದರ ಪ್ರತಿಯಾಗಿ ಸಂಪೂರ್ಣ ಬಳೆಯನ್ನು ಹೇಗೆ ಪಡೆದಳು ಎಂಬುದನ್ನು ವಿವರಿಸಿದ್ದಾರೆ. ಆ ಕ್ಷಣ ಅವರು ಎಷ್ಟು ಆಶ್ಚರ್ಯ ಚಕಿತಳಾದಳು ಮತ್ತು ಆ ಹುಡುಗಿಯ ಸರಳತೆ, ಪ್ರಾಮಾಣಿಕತೆ ಅವರ ಹೃದಯದಲ್ಲಿ ಹೇಗೆ ಸ್ಥಾನ ಪಡೆದುಕೊಂಡಿತು ಎಂಬುದನ್ನು ವಿವರಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆ
ಸಾಮಾಜಿಕ ಮಾಧ್ಯಮ ಬಳಕೆದಾರರು ಮಹಿಳೆಯ ಈ ಗುಣವನ್ನು ಶ್ಲಾಘಿಸಿದ್ದಾರೆ. ಒಬ್ಬ ಬಳಕೆದಾರರು ಈ ಪೋಸ್ಟ್ ನನ್ನ ಮುಖದಲ್ಲಿ ನಗು ತಂದಿತು! ಅವರು ತುಂಬಾ ದಯಾಳು ವ್ಯಕ್ತಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಇಂದು ಇಂಟರ್ನೆಟ್‌ನಲ್ಲಿ ಇದು ಅತ್ಯುತ್ತಮ ವಿಷಯ! ಎಂದು ಬರೆದಿದ್ದಾರೆ (ಏಜೆನ್ಸೀಸ್​).