Whitefield mother daughter death 
ರಾಜ್ಯ

'ನಾನಿಲ್ಲದಿದ್ರೆ ಮಗಳನ್ನು ಯಾರು ನೋಡ್ಕೋತಾರೆ': ಆತಂಕದಲ್ಲೇ ಅಪ್ರಾಪ್ತ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ..Bengaluru

ಪ್ರಮುಖ ಮುಖ್ಯಾಂಶಗಳು

  • ಮಾನಸಿಕ ಖಿನ್ನತೆ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
  • ಬೆಳಗ್ಗೆ ತಿಂಡಿ ಮಾಡೋಲ್ಲ ಎಂದು ಹೇಳಿ ಮಲಗಿಕೊಂಡಿದ್ದ ಪತ್ನಿ
  • ಪತಿ ಸಂಬಳ ಸಾಕಾಗೊಲ್ಲ, ಅನಾರೋಗ್ಯ ಸಮಸ್ಯೆಯಿಂದ ತೀವ್ರ ಖಿನ್ನತೆ
ಬೆಂಗಳೂರು: 45 ವರ್ಷದ ಮಹಿಳೆಯೊಬ್ಬರು ತನ್ನ ಮಗಳನ್ನು ಕತ್ತು ಹಿಸುಕಿ ಕೊಂದು, ತಾನು ನೇಣಿಗೆ ಶರಣಾದ ಘಟನೆ ವೈಟ್​​ಫೀಲ್ಡ್​ ಇಮ್ಮಡಿಹಳ್ಳಿಯಲ್ಲಿ (Whitefield mother daughter death) ಬೆಳಕಿಗೆ ಬಂದಿದೆ.
ಮೃತರನ್ನು  ಸುವರ್ಣ ಚಂದ್ರಶೇಖರ್(45) ಹಾಗೂ ಅಪ್ರಾಪ್ತ ಮಗಳು ತಾರುಣ್ಯ ಚಂದ್ರಶೇಖರ್ (13)  ಎಂದು ಗುರುತಿಸಲಾಗಿದೆ.  ಸೋಮವಾರ ಸುವರ್ಣಾರ ಪತಿ ಚಂದ್ರಶೇಖರ್​ ಅವರು ಆಕೆಗೆ ಹಲವಾರು ಬಾರಿ ಕರೆ ಮಾಡಿದ್ದರು. ಆದರೆ, ಉತ್ತರಿಸದಿದ್ದಾಗ ತನ್ನ ತಮ್ಮನನ್ನು ಕಳುಹಿಸಿ ಏನಾಗಿದೆ ಎಂದು ಪರಿಶೀಲನೆ ನಡೆಸಲು ಮನವಿ ಮಾಡಿಕೊಂಡಿದ್ದಾರೆ.

ತಾಯಿ-ಮಗಳು ಮೃತ

 ಚಂದ್ರಶೇಖರ್​ ತಮ್ಮ ಬೆಳಿಗ್ಗೆ 11ಕ್ಕೆ ಮನೆಗೆ ಬಂದು ಎಷ್ಟೇ ಬಾಗಿಲು ಬಡಿದರು ಸುವರ್ಣ ತೆರೆಯಲೇ ಇಲ್ಲ. ಏನಾಗಿದೆ ಎಂದು ಕಿಟಕಿಯಲ್ಲಿ ಇಣುಕಿ ನೋಡಿದಾಗ ಸುವರ್ಣ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದರು. ಇನ್ನು ತಾರುಣ್ಯ ಹಾಸಿಗೆಯ ಮೇಲೆ ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೊಲೆ ಮಾಡಿದ್ಹೇಗೆ?

ಪೊಲೀಸರ ತನಿಖೆ ಪ್ರಕಾರ, ಸುವರ್ಣ ಅವರು  ತನ್ನ ಮಗಳ ಮುಖವನ್ನು ದಿಂಬಿನಿಂದ ಒತ್ತಿ ಹಿಡಿದಿದ್ದಾರೆ. ಈ ವೇಳೆ ಆಕೆಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಇನ್ನು ಮಗಳು ಮೃತಪಟ್ಟಿರುವುದನ್ನು ದೃಢಪಡಿಸಿಕೊಂಡ ಅವರು ಫ್ಯಾನಿಗೆ ಕೊರಳೊಡ್ಡಿದ್ದಾರೆ. ಆದರೆ,  ಮನೆಯಲ್ಲಿ ಯಾವುದೇ ಡೆತ್​ನೋಟ್​ ಪತ್ತೆಯಾಗಿಲ್ಲ. ಸಾವಿಗೆ ಕಾರಣವೂ ತಿಳಿದಿಲ್ಲ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಪತಿ ಚಂದ್ರಶೇಖರ್​ ದೂರಿನ ಮೇರೆಗೆ ಸುವರ್ಣಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.ಸುವರ್ಣಾ ಸಹೋದರ ಮಂಜುನಾಥ್​ ದೂರಿನ ಮೇರೆಗೆ ಅನುಮಾನಸ್ಪದ ಸಾವು ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರಗೆ ಕಳುಹಿಸಲಾಗಿದೆ ಎಂದು ಹೇಳಳಲಾಗಿದೆ.
ಕಂಪ್ಯೂಟರ್​ ಆಪರೇಟರ್​ ಆದ ಚಂದ್ರಶೇಖರ್​  ಸುವರ್ಣಾ  ಹಾಗೂ ಇಬ್ಬರು ಮಕ್ಕಳೊಂದಿಗೆ ಇಮ್ಮಡಿ ಹಳ್ಳಿಯಲ್ಲಿ ವಾಸವಾಗಿದ್ದರು. ದಂಪತಿಯ ಹಿರಿಯ ಪುತ್ರ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದು, ಹಾಸ್ಟೆಲ್​ನಲ್ಲಿದ್ದರು. ಕಿರಿಯ ಪುತ್ರಿ ಏಳನೇ ಕ್ಲಾಸ್ ವ್ಯಾಸಂಗ ಮಾಡುತ್ತಾ ಪೋಷಕರ ಜೊತೆ ಇದ್ದಳು

ಸಾವಿಗೆ ಕಾರಣ ಏನು?

ಚಂದ್ರಶೇಖರ್​ ಅವರಿಗೆ ಹೃದಯದ ಸಮಸ್ಯೆ ಇತ್ತು. ಅವರಿಗೆ ಬರುತ್ತಿದ್ದ ಸಂಬಳದಿಂದ ಜೀವನ ಸಾಗಿಸೋದು ಕಷ್ಟವಾಗ್ತಿತ್ತು,. ಭವಿಷ್ಯದ ಬಗ್ಗೆ ಸುವರ್ಣಾರಿಗೆ ಭಾರಿ ಚಿಂತೆ ಕಾಡುತ್ತಿತ್ತು. ಇದರಿಂದಾಗಿ ಕೆಲ ತಿಂಗಳ ಹಿಂದೆಯಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ತಮಗೇನಾದರೂ ಆದರೆ ಮಗಳನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಚಿಂತೆಯಿಂದ ಮಗಳನ್ನು ಕೊಂದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಸೋಮವಾರ ರಾತ್ರಿ ಐಪಿಎಲ್​ ಪಂದ್ಯ ನೋಡಿ ದಂಪತಿ ಒಟ್ಟಾಗಿ ತಿಂದು ಮಲಗಿದ್ದರು. ಮಲಗುವ ಮುನ್ನ ನನಗೆ ತೀವ್ರ ಸುಸ್ತು ತಲೆನೋವು, ತಿಂಡಿ ಮಾಡೋಕೆ ಆಗೋದಿಲ್ಲ ಎಂದು ಹೇಳಿದ್ದರಂತೆ,  ಪ್ರತ್ಯೇಕವಾಗಿ ಮಲಗಿದ್ದ ಅವರು ಕೆಲಸಕ್ಕೆ ಹೋಗಿದ್ದರು. ಮುಂಜಾನೆ ಹತ್ತು ಗಂಟೆಗೆ ಹಲವಾರು ಬಾರಿ ಆಕೆಗೆ ಕರೆ ಮಾಡಿದರು, ಕಾಲ್​ ಪಿಕ್ ಮಾಡದಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ, (ಏಜೆನ್ಸೀಸ್​)