Bengaluru Weather (ಸಾಂದರ್ಭಿಕ ಚಿತ್ರ)
ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಇಂದು (ಮಾ.20) ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು (Bengaluru Weather) ಭಾರತ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ.
ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನ ಕೆಲವೊಂದು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗಿರುವುದರಿಂದ ನಗರವು ತಂಪಾಗಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಬೆಂಗಳೂರು ಹವಾಮಾನ ಇಲಾಖೆಯ ಪ್ರಕಾರ, ನಗರದಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತೇವಾಂಶದಿಂದ ಕೂಡಿದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಈ ವಾರ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ: ಐಎಂಡಿ ಮುನ್ಸೂಚನೆ
ಕಳೆದ ಎರಡು ಮೂರು ದಿನಗಳಿಂದ ಕರ್ನಾಟಕ ಮತ್ತು ಬೆಂಗಳೂರಿನ ಅನೇಕ ಒಳನಾಡಿನಲ್ಲಿ ಮಳೆಯಾಗಿದ್ದು, ವಾತಾವರಣದ ತಾಪಮಾನದಲ್ಲಿ ಹಠಾತ್ ಬದಲಾವಣೆಗಳು ಕಂಡುಬಂದಿವೆ.
ಮಾರ್ಚ್‌ನಲ್ಲಿ ಬೆಂಗಳೂರು ನಗರದಲ್ಲಿ ಆಲಿಕಲ್ಲು ಮಳೆಯೊಂದಿಗೆ ಮಳೆ ಬೀಳುವುದು ಅಪರೂಪ. ಆದರೆ, ಈ ತಿಂಗಳಲ್ಲಿ ಹೆಚ್ಚಾಗಿ ಈ ಘಟನೆ ಕಂಡುಬರುತ್ತಿದೆ. ಆದಾಗ್ಯೂ, ಐಎಂಡಿ ದತ್ತಾಂಶದ ಪ್ರಕಾರ, ಕಳೆದ 20 ವರ್ಷಗಳಲ್ಲಿ ನಗರದಲ್ಲಿ ಆಲಿಕಲ್ಲು ಮಳೆಯನ್ನು ಕಂಡಿಲ್ಲ. ಮಾರ್ಚ್ 18 ಮತ್ತು ಮಾರ್ಚ್ 19 ರ ನಡುವೆ ನಗರದಲ್ಲಿ ಸುಮಾರು 7 ಮಿಮೀ ಮಳೆಯಾಗಿದೆ.
ಐಎಂಡಿ ವರದಿಯ ಪ್ರಕಾರ, ಕೆಳ ಉಷ್ಣವಲಯದ ಮಟ್ಟದಲ್ಲಿ ವಾತಾವರಣದಲ್ಲಿ ನಿರಂತರವಾಗಿ ಸುಳಿಯುತ್ತಿರುವ ಗಾಳಿಯ ಒತ್ತಡ ಅಥವಾ ಚಂಡಮಾರುತದ ಪ್ರಸರಣವು ಮಳೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿದೆ. ಬಂಗಾಳಕೊಲ್ಲಿಯಿಂದ ಈಶಾನ್ಯ ರಾಜ್ಯಗಳ ಮೇಲೆ ಬಲವಾದ ನೈಋತ್ಯ ಮತ್ತು ದಕ್ಷಿಣದ ಮಾರುತಗಳು ಅಪಾರ ಪ್ರಮಾಣದ ತೇವಾಂಶವನ್ನು ಹೊತ್ತು ತರುತ್ತಿವೆ. ಈ ತೇವಾಂಶ ಭರಿತ ಗಾಳಿಯು ಭೂಪ್ರದೇಶದ ಗಾಳಿಯೊಂದಿಗೆ ಬೆರೆತು ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಮಾರ್ಚ್ 12, 14, 18 ರಂದು ಅರುಣಾಚಲ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ, ಮಾರ್ಚ್ 18 ರಂದು ಕರ್ನಾಟಕದ ಉತ್ತರ ಒಳನಾಡು, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಮತ್ತು ಮುಂದಿನ ಕೆಲವು ದಿನಗಳಲ್ಲಿ ಭಾರೀ ಮಳೆಯಾಗಲಿದೆ (ಏಜೆನ್ಸೀಸ್).